ಪಾವಗಡ : ತಾಲ್ಲೂಕಿನ ಟಿ.ಎನ್ .ಪೇಟೆ ಮಾರಮ್ಮ ದೇವಾಲಯದಲ್ಲಿ ಬೀಗ ಮುರಿದು ಹುಂಡಿಯಲ್ಲಿದ್ದ ಹಣ ಮತ್ತು ಬಂಗಾರವನ್ನು ಶುಕ್ರವಾರ ರಾತ್ರಿ ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.
ಬೀಗ ಹೊಡೆದು ಕಳ್ಳರು ಒಳಗೆ ನುಗ್ಗಿ ಹುಂಡಿಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಧ್ವಂಸಗೊಳಿಸಿ ಹುಂಡಿಯಲ್ಲಿದ್ದ ಸುಮಾರು 2 ಲಕ್ಷ ಬೆಲೆ ಬಾಳುವ ಬಂಗಾರದ ವಸ್ತುಗಳನ್ನು ಹಾಗೂ ಐದು ಗ್ರಾಂ ಬಂಗಾರ ತಾಳಿ, 4 ಬಂಗಾರದ ನಾಗರ ಹಾವು ಹೆಡೆ, ಬಂಗಾರದ ಸರ್, ಹಿತ್ತಾಳೆ ಗಂಟೆ, ಒಂದು ದೀಪದ ಆರತಿ ಹಾಗೂ ಪೂಜಾ ಬೆಳ್ಳಿ-ಬಂಗಾರದ ವಸ್ತುಗಳನ್ನು ಅಪರಿಚಿತರು ಶುಕ್ರವಾರ ರಾತ್ರಿ ಮಳೆ ಬಂದ ಸಮಯದಲ್ಲಿ ಕಳುವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಘಟನೆ ಕುರಿತು ದೇವಸ್ಥಾನ ಕಮೀಟಿಯವರು ಪಾವಗಡ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಾವಗಡ ಪೊಲೀಸ ಠಾಣೆಯ ಸಿ ಐ ಸುರೇಶ ಸ್ಥಳಕ್ಕೆ ಧಾವಿಸಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದರು.