ತುಮಕೂರು: ಪಾದಯಾತ್ರೆ ಮಾಡಿ ಸರ್ಕಾರ ಅಧಿಕಾರಕ್ಕೆ ಬಂದು ರೈತರಿಗೆ ಚಿಪ್ಪು ಕೊಟ್ಟಿದೆ ಎಂಬ ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿಕೆಗೆ ನಾವು ಪ್ರತಿಕ್ರಿಯೆ ಮಾಡಬೇಕಿಲ್ಲ, ಜವಬ್ದಾರಿಯುತವಾಗಿ ಮಾತನಾಡುವವರಿಗೆ ನಾವು ಉತ್ತರಿಸುತ್ತೇವೆ ಎಂದು ಪರಮೇಶ್ವರ ತಿರುಗೇಟು ನೀಡಿದರು.
ನಮ್ಮ ಬಳಿ ನುರಿತ ವಕೀಲರ ತಂಡವಿದೆ, ಬಿಜೆಪಿ ಸರ್ಕಾರ ಇz್ದÁಗಲೂ ಇದೇ ತಂಡವಿತ್ತು, ನಾವು ಬದಲಾವಣೆ ಮಾಡಿಲ್ಲ. ಈ ಕಾನೂನು ತಂಡ ಬಹಳ ಕಾಲದಿಂದಲ್ಲೂ ಇದೆ. ತಮಿಳುನಾಡಿನವರು 24 ಸಾವಿರ ಕ್ಯೂಸೆಕ್ ಕೇಳಿದ್ರು, ಕೋರ್ಡ್ 10 ಸಾವಿರ ಕೊಡಲು ತೀರ್ಮಾನ ಮಾಡಿತ್ತು. ಕೊನೆಯದಾಗಿ ನಮ್ಮ್ ಮನವಿ ಕೇಳಿ 5 ಸಾವಿರ ಕ್ಯೂಸೆಕ್ ಬಿಡಲು ಹೇಳಿದೆ ಎಂದರು.
ನಮಗೂ ಒಂದಿಷ್ಟು ಅನುಕೂಲವಾಗಿದೆ, ನಮ್ಮಪರವಾಗಿಯೂ ತೀರ್ಮಾನಗಳಾಗಿವೆ. ಪರಿಸ್ಥಿತಿ ಆಗಿದೆ, ಈ ಬಾರಿ ಮಳೆಯಾಗಿಲ್ಲ. ಇಡೀ ರಾಜ್ಯ ಬರದ ಛಾಯೆಯಲ್ಲಿದೆ ಈ ನಿಟ್ಟಿನಲ್ಲೂ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.