ತುಮಕೂರು: ಪಡಿತರ ಅಂಗಡಿಗಳಲ್ಲಿ ಕೇವಲ ಮೂರು ಕೆಜಿ ಅಕ್ಕಿ ಕೊಡುತ್ತಿದ್ದಾರೆ, ಮನೆಯಲ್ಲಿ ಯಾರಿಗೂ ಹೊಟ್ಟೆ ತುಂಬಾ ಊಟ ಮಾಡೋಕೆ ಆಗ್ತಿಲ್ಲ, ದಯಮಾಡಿ 10ಕೆಜಿ ಅಕ್ಕಿ ಕೊಡಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಮುಂದೆ ರೈತನೊಬ್ಬ ಅಂಗಲಾಚಿ ಬೇಡಿಕೊಂಡರು.
ಕುಣಿಗಲ್ ತಾಲೂಕು ಹುಲಿಯೂರುದುರ್ಗದಲ್ಲಿ ಡಾ.ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜನತಾದರ್ಶನದಲ್ಲಿ ಮಾತನಾಡಿದ ರೈತ, ಕೇವಲ ಮೂರು ಕೆಜಿ ಕೊಡ್ತಾರೆ, ಹೊಟ್ಟೆ ತುಂಬ ಅನ್ನ ಊಟ ಮಾಡೋಕೆ ಆಗ್ತಿಲ್ಲ ಎಂದರು.
ನಮಗೆ ಸರ್ಕಾರದಿಂದ ಹಣ ಬೇಡ, 10 ಕೆಜಿ ಅಕ್ಕಿ ಕೊಡಿ, ಮಕ್ಕಳು ಮರಿ ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡ್ತಾರೆ ಎಂದರು.