ಜಿಲ್ಲೆ

ರಾಜಕೀಯ ಕಾರಣಕ್ಕೊಸ್ಕರ ವಿವಾದ ಮಾಡುವುದಾದರೆ ನಾನು ಉತ್ತರ ಕೊಡುತ್ತೇನೆ: ಡಾ.ಜಿ.ಪರಮೇಶ್ವರ ಗರಂ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಡಾ.ಜಿ.ಪರಮೇಶ್ವರ್ ನೀಡಿದ್ದ `ಹಿಂದೂ ಧರ್ಮ ಯಾವಾಗ ಹುಟ್ಟಿದ್ದು, ಯಾರು ಹುಟ್ಟುಹಾಕಿದ್ರು' ಎಂಬ ಹೇಳಿಕೆ ವಿವಾದಕ್ಕೀಡಾಗಿರುವ ಬಗ್ಗೆ ಪರಮೇಶ್ವರ್ ಪ್ರತಿಕಿಯಿಸಿದ್ದು ವಿವಾದ ಮಾಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಹೇಳಿಕೆಯಲ್ಲಿ ಯಾವುದೇ ವಿವಾದ ಇಲ್ಲ. ನಾನು ಏನು ತಪ್ಪು ಹೇಳಿದ್ದೇನೆ? ವಿವಾದ ಮಾಡಿದವರು ಯಾರು?

ರಾಧಕೃಷ್ಣ ಜಯಂತಿಯಲ್ಲಿ ಧರ್ಮಗಳ ಹೋಲಿಕೆ ಮಾಡುವಾಗ ನೀಡಿದ್ದ ಹೇಳಿಕೆಯಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ.

ನಾನು ಏನು ಪದ ಉಪಯೋಗಿಸಿದ್ದೇನೆ ಗಮನಿಸಬೇಕು, ಎಲ್ಲಾ ಧರ್ಮಗಳ ಸಾರಾಂಶ ಒಂದೇ. ಹಿಂದೂ ಧರ್ಮದ ಶಾಂತಿಯ ಮಂತ್ರ ಅದಕ್ಕೆ ಅಡಿಪಾಯ ಹಾಕಿದೆ ಎಂದು ಹೇಳಿದ್ದು ತಪ್ಪಾಗುತ್ತಾ? ಯಾರು, ಯಾವ ರೀತಿ ವಿಶ್ಲೇಷಣೆ ಮಾಡ್ತಾರೆ ಅವರು ಉತ್ತರ ಕೊಡಲಿ ಎಂದರು.

ಯಾವ ತಪ್ಪು ಅರ್ಥದಲ್ಲಿ ಹೇಳಿಲ್ಲ, ನಾವು ಹಿಂದೂಗಳಲ್ಲವೇ ನಾನೀಗ ಶ್ರೀಕೃಷ್ಣನ ಭಗವದ್ಗೀತೆ ಶ್ಲೋಕ ಉಚ್ಚಾರಣೆ ಮಾಡಿದೆ. ನಮಗೆ ಅಭಿಮಾನ, ಗೌರವ ಇಲ್ವಾ. ನಮಗೆ ಇಲ್ಲದೆ ಇರುವುದು ಇವರಿಗೆ ಬರುತ್ತಾ, ಯಾವ ವಿವಾದವೂ ಇಲ್ಲ ಎಂದರು.

ರಾಜಕೀಯ ಕಾರಣಕ್ಕೊಸ್ಕರ ವಿವಾದ ಮಾಡುವುದಾದರೆ ನಾನು ಉತ್ತರ ಕೊಡುತ್ತೇನೆ, ನಮಗಿಲ್ಲದೆ ಇರುವ ಹಿಂದೂತ್ವ ಗೌರವ ಅವರಿಗೆ ಯಾರಿಗಿದೆಯೋ ಗೊತ್ತಿಲ್ಲ. ಉದಯನಿಧಿ ಹೇಳಿಕೆಗೂ ನನಗೂ ಸಂಬAಧವಿಲ್ಲ ಆದರೆ, ನನ್ನ ಹೇಳಿಕೆಗಷ್ಟೇ ನಾನು ಸ್ಪಷ್ಟನೆ ಕೊಡುತ್ತಿದ್ದೇನೆ ಎಂದರು.