ಜಿಲ್ಲೆ

ಮಾನ್ಯ ಬೊಮ್ಮಾಯಿ ಭ್ರಷ್ಟಾಚಾರ..ಭ್ರಷ್ಟಾಚಾರ.. ಅನ್ನೋದು ಬಹಳ ಬೇಗ ಮರೆತರೆ ಒಳ್ಳೆಯದು

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕಾಲದಲ್ಲಿ ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ ಇತ್ತು, ಇದೇ ಗುಂಗಿನಲ್ಲಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಧಾರ ರಹಿತ ಆರೋಪ ನಮ್ಮ ಸರ್ಕಾರದ ಮೇಲೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾನ್ಯ ಬೊಮ್ಮಾಯಿ ಭ್ರಷ್ಟಾಚಾರ..ಭ್ರಷ್ಟಾಚಾರ ಅನ್ನೋದು ಬಹಳ ಬೇಗ ಮರೆತರೆ ಒಳ್ಳೆಯದು ಎಂದು ಸಲಹೆ ನೀಡಿದರು.

ಕರ್ನಾಟಕದ ಜನರಿಗೆ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದ್ದೇವೆ, ನೀಡುತ್ತಿದ್ದೇವೆ. ಎಲ್ಲಾ ಗ್ಯಾರಂಟಿ ಯೋಜನೆಗಳಿಗೂ ಚಾಲನೆ ಸಿಗಲಿದೆ. 36 ಸಾವಿರ ಕೋಟಿ ರೂ. ಖರ್ಚು ಮಾಡಲು ಶುರು ಮಾಡಿದ್ದೇವೆ ಎಂದರು.

ಆಪರೇಷನ್ ಹಸ್ತ ನಾವು ಮಾಡುತ್ತಿಲ್ಲ, ನಮ್ಮ ಪಕ್ಷದ ನಿಯಮಗಳನ್ನು ಒಪ್ಪಿ ಪಕ್ಷಕ್ಕೆ ಬರುತ್ತಿದ್ದಾರೆ, ತುಮಕೂರು ಜಿಲ್ಲೆಯಲ್ಲಿಯೂ ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವವರು ಇದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.