ತುಮಕೂರು: ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರ ನಕಲಿ ಸಹಿ ಮಾಡಿಕೊಂಡು ನಕಲಿ ಆದೇಶವನ್ನೇ ಮಾಡಿಕೊಂಡಿರುವ ಘಟನೆ ಪಾವಗಡ ತಾಲೂಕು ಅರೆಕ್ಯಾತನಹಳ್ಳಿಯಲ್ಲಿ ವರದಿಯಾಗಿದೆ.
ಅರೆಕ್ಯಾತನಹಳ್ಳಿ 33ಕೆವಿ ಉಪಸ್ಥಾವರದಿಂದ 220 ಕೆವಿ ಸ್ವೀಕರಣಾ ಕೇಂದ್ರ ದಳವಾಯಿಹಳ್ಳಿಯವರೆಗೆ ಹೊಸದಾಗಿ ನಿರ್ಮಿಸಲಾಗುತ್ತಿರುವ 33 ಕೆವಿ ವಿದ್ಯುತ್ ಪ್ರಸರಣಾ ಮಾರ್ಗಕ್ಕೆ ಸಂಬAಧಿಸಿದAತೆ ಪರಿಹಾರ ಮೊತ್ತ ನಿಗದಿ ಪಡಿಸಿರುವ ಬಗ್ಗೆ ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಆದೇಶ ಹರಿದಾಡುತ್ತಿದೆ.
ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು ಇಂತಹ ಯಾವುದೇ ಆದೇಶ ನಮ್ಮ ಕಚೇರಿಯಿಂದ ಹೊರಡಿಸಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸ್ಪಷ್ಟೆನೆ ನೀಡಿದ್ದು, ರೈತರು ಆತಂಕಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಪರಿಹಾರ ನಿಗದಿಪಡಿಸಲು ಕೋರಿರುವ ಬಗ್ಗೆ ಎಂಬ ವಿಷಯದಡಿಯಲ್ಲಿ ನಕಲಿ ಆದೇಶವನ್ನು ಸೃಷ್ಟಿಸಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.