ಜಿಲ್ಲೆ

ಆನ್‌ಲೈನ್‌ನಲ್ಲಿ ಹಣ ದೋಚಿದ ವಂಚಕರು; ಪೊಲೀಸರಿಗೆ ದೂರು ನೀಡಿದ ಸುರೇಶ್‌ಬಾಬು

ಡಾ.ಶ್ರೀಹರ್ಷ ಸೋರಲಮಾವು

ಮಧುಗಿರಿ: ಗ್ರಾಹಕನನ್ನು ವಂಚಿಸಿ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ಹಣ ಲಪಟಾಯಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಮ್ಮ ಹಣ ವಾಪಾಸ್ ಕೊಡಿಸಿ ಎಂದು ಗ್ರಾಹಕ ಪೋಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪಟ್ಟಣದ ಸುರೇಶ್‌ಬಾಬು ಎಂಬುವವರ ಖಾತೆಯಿಂದ ಹಂತ ಹಂತವಾಗಿ ಒಟ್ಟು 69.569 ರೂ. ವಂಚನೆಯಾಗಿದ್ದು ಹಣ ಕಳೆದುಕೊಂಡಿರುವ ಗ್ರಾಹಕರಿಗೂ ತಡವಾಗಿ ಗೊತ್ತಾಗಿದೆ.

ಕೆನರಾ ಬ್ಯಾಂಕ್ ಖಾತೆಯಿಂದ 17069ರೂ. ಕಡಿತವಾಗಿರುವ ಬಗ್ಗೆ ಸೆ.20ರಂದು ಸುರೇಶ್‌ಬಾಬು ಅವರಿಗೆ ಮೆಸೇಜ್ ಬಂದಿದೆ. ಈ ಬಗ್ಗೆ ಶಾಖೆಯಲ್ಲಿ ವಿಚಾರಿಸಿದಾದ ಪೋನ್‌ಪೇ ಸಹಾಯವಾಣಿಗೆ ದೂರು ದಾಖಲಿಸಿ ಎಂದು ಹೇಳಿ ಸಾಗಹಾಕಿದ್ದಾರೆ.

ದೂರು ದಾಖಲಿಸಿದ ನಂತರ ಪೋನ್‌ಪೇ ಸಹಾಯವಾಣಿ ಹೆಸರಿನಲ್ಲಿ ಮತ್ತೆ ಕರೆ ಮಾಡಿ ಹೊಸ ಆಪ್‌ನ್ನು ಪೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಸಿ, ಆಧಾರ್ ಸಂಖ್ಯೆ, ಒಟಿಪಿ ಪಡೆದು ಮತ್ತೆ 27500ರೂ. ವಂಚಿಸಿದ್ದಾರೆ. ಒಟ್ಟು 69569ರೂ. ಕಳೆದುಕೊಂಡಿರುವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.