ಜಿಲ್ಲೆ

ಮುಂದಿನ ಸಿಎಂ ಡಿಕೆಶಿ, ಮಂದಿನ ಮಂತ್ರಿ ವಾಸಣ್ಣ....

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಗುಬ್ಬಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲೆಯ ಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಕೆ.ಎನ್​.ರಾಜಣ್ಣ ಗೈರು ಹಾಜರಾಗಿದ್ದರು, ಇಡೀ ಸಮಾರಂಭಲ್ಲಿ ಡಿ.ಕೆ.ಶಿವಕುಮಾರ್​ ಮಯಗೊಳಿಸಲಾಗಿತ್ತು. ಸಮಾರಂಭದಲ್ಲಿಯೂ ಮುಂದಿನ ಸಿಎಂ ಡಿಕೆಶಿ, ಮಂದಿನ ಮಂತ್ರಿ ವಾಸಣ್ಣ ಎಂಬ ಘೋಷಣೆಗಳು ಮೊಳಗಿದವು.

ಈ ಸಂದರ್ಭದಲ್ಲಿ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವ ಟಿ.ಬಿ.ಜಯಚಂದ್ರ ಮುಖ ಸಣ್ಣಗೆ ಮಾಡಿಕೊಂಡರು.

ಡಿ.ಕೆ.ಶಿವಕುಮಾರ್​ ಮಾತನಾಡುವಾಗಲೂ, ಎಸ್​.ಆರ್​.ಶ್ರೀನಿವಾಸ್​ ಕ್ಷೇತ್ರಬೇರೆ ಅಲ್ಲ, ನನ್ನ ಕ್ಷೇತ್ರ ಬೇರೆಯಲ್ಲ. ಎಲ್ಲಾ ಕ್ಷೇತ್ರಗಳಿಗೂ ನೀರು ಒದಗಿಸಬೇಕು ಎಂಬುದು ನನ್ನ ಆಶಯವಾಗಿದೆ. ಪಾರ್ಟಿ, ಪಕ್ಷ ಬಿಟ್ಟು ವಾಸು ಪರವಾಗಿ ನಿಲ್ಲಿ, ನಾನು ನಿಮ್ಮ ಪರವಾಗಿರುತ್ತೇನೆ ಎಂದು ಜನರಿಗೆ ಮನವಿ ಮಾಡಿದ್ದು ವಿಶೇಷ ಎನ್ನಿಸಿತು.