ಜಿಲ್ಲೆ

ಜೆಜೆಎಂ ಯೋಜನೆಯಲ್ಲಿ ಅವ್ಯವಹಾರ; ಶಾಸಕ ಡಾ.ಎಚ್.ಡಿ.ರಂಗನಾಥ್ ಆರೋಪ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಜಿಲ್ಲೆಯಲ್ಲಿ ಜಿಪಂ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ಎಚ್.ಡಿ.ರಂಗನಾಥ್ ಆರೋಪಿಸಿದರು.

ಕುಣಿಗಲ್ ತಾಪಂ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ರಂಗನಾಥ್, ತಾಲೂಕಿನ 18 ಗ್ರಾಮಗಳಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ ಆದರೆ, ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಿಲ್ಲ, ಬೋರ್‌ವೆಲ್ ಕೊರೆದಿಲ್ಲ, ಹನಿ ನೀರು ಹರಿದಿಲ್ಲ ಮತ್ತೆ ಈಗ ಹೊಸದಾಗಿ 147 ಗ್ರಾಮಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದೀರ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಪA ಸಿಇಒ ಜಿ.ಪ್ರಭು ಕೂಡ ಯೋಜನೆಯಲ್ಲಿ ಲೋಪದೋಷವಾಗಿರುವ ಒಪ್ಪಿಕೊಂಡು ಮುಂದೆ ಈಗಾಗದಂತೆ ಎಚ್ಚರವಹಿಸುವುದಾಗಿ ಹೇಳಿದರು.