ತುಮಕೂರು: ಕುಣಿಗಲ್ ಕುದರೆ ಸ್ಟಡ್ ಫಾರ್ಮ್ ಜಮೀನು ಬಳಸಿಕೊಂಡು ಸ್ಥಳೀಯರಿಗೆ ಉದ್ಯೋಗ ಸೃಷ್ಠಿಸುವ ಯೋಜನೆ ರೂಪಿಸುವ ಬಗ್ಗೆ ಸಿಎಂ ಜತೆ ಚರ್ಚಿಸಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಭರವಸೆ ನೀಡಿದರು.
ಖಾಸಗಿ ಸಂಸ್ಥೆಯೊAದಿಗಿನ ಗುತ್ತಿಗೆ ಅವಧಿ ಪೂರ್ಣಗೊಂಡು ಪ್ರಸ್ತುತ ಪಶು ಇಲಾಖೆ ಅದೀನದಲ್ಲಿರುವ ಸ್ಟಡ್ ಫಾರ್ಮ್ಗೆ ಭೇಟಿ ನೀಡಿದ್ದ ಅವರು, ಕುಣಿಗಲ್ ಹೆಸರು ಉಳಿಸುವ ಯೋಜನೆ ಬರಲಿದೆ ಎಂದರು.
ಏನೆಲ್ಲಾ ಯೋಜನೆಗಳು ಇಲ್ಲಿಗೆ ಬರಲಿವೆ ಎಂದು ಮಂದೆ ಕಾದು ನೋಡಿ, ಫಾರಂ ಹೆಸರು ಉಳಿಯಲಿದೆ, ಇಲ್ಲಿನ ನೌಕರರ ಕೆಲಸವೂ ಇರಲಿದೆ. ಕುಣಿಗಲ್ ಅಭಿವೃದ್ದಿಗೆ ಸಹಕಾರಿಯೂ ಆಗಲಿದೆ ಎಂದರು.
ಶಾಸಕ ಡಾ.ಎಚ್.ಡಿ.ರಂಗನಾಥ್, ಸ್ಟಡ್ ಫಾರಂ ವ್ಯವಸ್ಥಾಪಕ ಡಾ.ದಿನೇಶ್ ಮತ್ತಿತರರು ಇದ್ದರು.