ತುಮಕೂರು: ನಗರದ ಶ್ರೀಕೃಷ್ಣ ಮಂದಿರದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮೀ ಅಂಗವಾಗಿ ಸೆ.3ರಿಂದ 7ರ ವರೆಗೆ ವಿವಿಧ ಸ್ಫರ್ಧೆ ಹಾಗೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೆ.3ರಂದು ಬೆಳಗ್ಗೆ ಮಕ್ಕಳಿಗೆ ಚಿತ್ರಕಲಾ ಸ್ಫರ್ಧೆ, ದಾಸಕೀರ್ತನೆ ಸ್ಫರ್ಧೆ, ಭಗವದ್ಗೀತಾ ಕಂಠಪಾಠ ಸ್ಫರ್ಧೆ, ಸೆ.4ರಂದು ಸಂಜೆ 6ಕ್ಕೆ ಮೂರು ಮುತ್ತುಗಳು ಹಾಸ್ಯ ನಾಟಕ, ಸೆ.5ರಂದು ದಾಸವಾಣಿ ನಾಟಕ ಪ್ರದರ್ಶನವಿದೆ.
ಸೆ.6ರಂದು ಬೆಳಗ್ಗೆ 7ಕ್ಕೆ ಶ್ರೀಕೃಷ್ಣನಿಗೆ ಸಾಮೂಹಿಕ ತುಳಸೀ ಅರ್ಚನೆ, ರಾತ್ರಿ 7ರಿಂದ ಶಾಸ್ತಿçÃಯ ಗಾಯನ ಹಾಗೂ ದೇವರನಾಮ, ಶ್ರೀಕೃಷ್ಣನಿಗೆ ಮಹಾಪೂಜೆ, ಅರ್ಘ್ಯಪ್ರದಾನ ಹಾಗೂ ಸೆ.7ರಂದು ಮಧ್ಯಾಹ್ನ 3.30ಕ್ಕೆ ಶ್ರೀಕೃಷ್ಣ ವೇಷಭೂಷಣ ಸ್ಫರ್ಧೆ, ಮೊಸರು ಕುಡಿಕೆ ಒಡೆಯುವ ಸ್ಫರ್ಧೆ ಆಯೋಜಿಸಲಾಗಿದೆ. ಮಾಹಿತಿಗೆ ಮೊ.9449759442, 9448748855 ಸಂಪರ್ಕಿಸಿ.