ತುಮಕೂರು: ತಿಪಟೂರು ತಾಲೂಕು ಬಿಳಿಗೆರೆತ ನಿವೃತ್ತ ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅವರ `ಛೂ ಮಂತ್ರಯ್ಯನ ಕಥೆಗಳು' ಮಕ್ಕಳ ಕಥೆಗಳಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ.
ಹದಿಹರೆಯದ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಹೊರತಂದಿದ್ದ ಛೂಮಂತ್ರಯ್ಯನ ಕಥೆಗಳು ಎಂಬ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ.
ಜೀರಿAಬೆ ಹಾಡು, ಗುಡು ಗುಡು ಗುಡ್ಡ, ಪದ್ಯದ ಮರ, ಢ್ರೂ ಢ್ರೂ ಢ್ರೂಟೆ, ಹಾಡೆ ಸುವ್ವಿ ಮಕ್ಕಳಿಗಾಗಿಯೇ ಬರೆದ ಹಾಡಿನ ಪುಸ್ತಕಗಳಾಗಿವೆ. ಇದರ ಜತೆಗೆ ಕಾವ್ಯ, ಪ್ರಬಂಧ, ಕೃಷಿ ಪದ, ತತ್ವಪದಗಳನ್ನು ರಚಿಸಿದ್ದಾರೆ.
ಕಾಲೇಜು ಶಿP್ಷÀಣ ಇಲಾಖೆ ಜಂಟಿ ನಿರ್ದೇಶಕರಾಗಿ ಸೇವಾ ನಿವೃತ್ತಿ ಪಡೆದಿರುವ ಕೃಷ್ಣಮೂರ್ತಿ ಬಹುಮುಖೀ ವ್ಯಕ್ತಿತ್ವ ಹೊಂದಿದ್ದು ಸಾಹಿತ್ಯ, ಕೃಷಿ, ಚಳವಳಿ, ಜನಪದ, ಪರಿಸರ ಜಾಗೃತಿ, ರಂಗಕರ್ಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪರಿಸರ ಸ್ನೇಹಿ ಜಾಗೃತಿ ಗೀತೆಗಳನ್ನೂ ರಚಿಸಿ ಸ್ವತಃ ಹಾಡುವ ಕೃಷ್ಣಮೂರ್ತಿ ಅವರು ಬಯಲುಸೀಮೆಯ ವೈಶಿಷ್ಟÈದ ಬಗ್ಗೆ ಸಾಕಷ್ಟು ಬರಹಗಳಿವೆ. ನೀರಿನ ಸಂರP್ಷÀಣೆ, ಕೃಷಿಯಲ್ಲಿ ನೀರಿನ ಮಿತ ಹಾಗೂ ಪರಿಣಾಮಕಾರಿ ಬಳಕೆಯ ಬಗ್ಗೆ, ಮಳೆ ನೀರು ಮತ್ತು ಅಂತರ್ಜಲ ಬಳಕೆ ಬಗ್ಗೆ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.
ರೈತ, ದಲಿತ-ಬಂಡಾಯ ಚಳವಳಿಗಳ ಜತೆ ಗುರುತಿಸಿಕೊಂಡಿರುವ ಬಿಳಿಗೆರೆ ಅವರು ಪ್ರಖರ ವಿಚಾರಧಾರೆಗಳಿಂದ, ಹರಿತ ಮಾತುಗಾರಿಕೆಯಿಂದ ಮತ್ತು ತಮ್ಮ ಭಾಷಣ ಕಲೆಯಿಂದ ಖ್ಯಾತಿಗಳಿಸಿದ್ದಾರೆ.
ಸಾಹಿತ್ಯ, ಕೃಷಿ, ಪ್ರಕೃತಿ, ಮಕ್ಕಳು, ಶಿP್ಷÀಣ ಹೀಗೆ ಇವರ ಹಲವು ಕ್ಷೇತ್ರಗಳ ಅದಮ್ಯ ಆಸಕ್ತಿಯ ಕಾರಣವಾಗಿ ಮತ್ತು ತಮ್ಮ ಅದ್ಭುತ ಕಂಠಸಿರಿ, ಹಾಡುಗಾರಿಕೆ ಮತ್ತು ಏಕತಾರಿ ನಾದದಿಂದಾಗಿ ಹಾಗೂ ತತ್ವಪದ ಗಾಯನದಿಂದಾಗಿ ನಾಡಿನಾದ್ಯಂತ ಚಿರಪರಿಚಿತರೆನ್ನಿಸಿಕೊಂಡಿದ್ದಾರೆ.