ಜಿಲ್ಲೆ

ಬಿಜೆಪಿ ಮುಖಂಡರ ಹುಚ್ಚ ಹೇಳಿಕೆಗಳಿಗೆ ಪ್ರತಿಕ್ರಿಯಿಸಲಾಗದು; ಕೆ.ಎನ್.ರಾಜಣ್ಣ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಆರು ತಿಂಗಳ ಸರ್ಕಾರ ಬೀಳಲಿದೆ ಎಂಬ ಬಿಜೆಪಿ ಮುಖಂಡರ ಹೇಳಿಕೆಗಳು ಹುಚ್ಚರ ಹೇಳಿಕೆಗಳಾಗಿದ್ದು ನಾವು ಅದಕ್ಕೆಲ್ಲಾ ಪ್ರತಿಕ್ರಿಯೆ ನೀಡಲಾಗದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಬಿಜೆಪಿ ಮುಖಂಡರ ಮಾತಿಗೆ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಆರು ತಿಂಗಳಲ್ಲಿ ಬೀಳಲಿದೆ ಎಂದು ಸಿ.ಟಿ.ರವಿ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಮುಖಂಡರ ಹುಚ್ಚು ಹೇಳಿಕೆಗಳಿಗೆ ಪ್ರತಿಕ್ರಿಯಿಸಲಾಗದು ಎಂದರು.

ಆರು ತಿಂಗಳಿಗೆ ಬಿದ್ದೋಗತೆ, ಮೂರು ತಿಂಗಳಿಗೆ ಬಿದ್ದೋಗತೆ ಎಂಬುದು ಅವರ ಅಭಿಪ್ರಾಯ ಇರಬಹುದು ಅಷ್ಟೇ, ಆ ಹೇಳಿಕೆಗೆ ಕಿಮ್ಮತ್ತು ಕೊಡೋ ಅವಶ್ಯಕತೆಯಿಲ್ಲ ಎಂದರು.

ನನ್ನತ್ರ ಇರೋದು ಖಾಲಿ ಪೆನ್‌ಡ್ರೈವ್ ಅಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಹಾವಾಡಿಗರನ್ನ ನೋಡಿದ್ದೀವಿ ನಾವು, ಒಂದು ಬುಟ್ಟಿಯನ್ನ ತಂದಿಟ್ಟು, ಇದರಲ್ಲಿ ಆ ಹಾವಿದೆ, ಈ ಹಾವಿದೆ, ಇದನ್ನ ಬಿಡ್ತೀನಿ, ಅದನ್ನ ಬಿಡ್ತೀನಿ ಅಂತಾ ತೋರಿಸಿದ್ದನ್ನ ಹಾವಾಡಿಗರ ಆಟವನ್ನ ನೋಡಿದ್ದೀವಿ ಎಂದರು.

ಏನಿದ್ರೆ ಬಿಡ್ಲಿ, ಬಿಡೋ ತಾಕತ್ತಿದ್ರೆ ಬಿಡ್ಲಿ ಎಂದು ಎಷ್ಟು ಜನ ಸಚಿವರು ಹೇಳಿದ್ದಾರೆ, ಯಾರು ತಪ್ಪು ಮಾಡಿದ್ದಾರೆ ಅಂತಾ ಅದ್ರಲ್ಲಿ ಇದೆ ಅವರಿಗೆ ಸಾರ್ವಜನಿಕವಾಗಿ ಶಿಕ್ಷೆ ಆಗಲಿ ಎಂದರು.