ಜಿಲ್ಲೆ

ನಾನೂ ಸಚಿವನಾಗಬೇಕು, ಸಹಕಾರ ಖಾತೆ ಬೇಕು!

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ನಾನು ಹಿರಿಯ ಶಾಸಕನಾಗಿದ್ದು ಸಚಿವನಾಗಲೇ ಬೇಕು, ಸಹಕಾರ ಖಾತೆಯನ್ನು ಬಿಟ್ಟು ಬೇರೆ ಖಾತೆಯನ್ನು ಕೇಳುವುದಿಲ್ಲ ಎಂದು ಕೆ.ಎನ್.ರಾಜಣ್ಣ ಹೇಳಿದರು.

40% ಕಮಿಷನ್ ಹಾಗೂ ಬೆಲೆ ಏರಿಕೆಯಿಂದ ಬಿಜೆಪಿ ರಾಜ್ಯದಲ್ಲಿ ಸೋತಿದೆ, ಇಲ್ಲಿರುವ ಬಿಜೆಪಿ ರಾಜ್ಯ ನಾಯಕರಿಗೆ ಮತ ಸೆಳೆಯುವ ಶಕ್ತಿ ಇಲ್ಲ, ಮೋದಿ ಹೆಸರೇಳಿಕೊಂಡು ಮತ ಕೇಳಿದ್ದು ನಡೆಯಲಿಲ್ಲ ಎಂದರು.

ನಾಲ್ಕು ವರ್ಷಗಳಲ್ಲಿ ಒಂದು ಜನಪರ ಕಾರ್ಯ ಬಿಜೆಪಿ ನೀಡಲಿಲ್ಲ, ಮೀಸಲಾತಿ ಕೂಡ ಎಫೆಕ್ಟ್ ಆಗಿದ್ದು ಬಿಜೆಪಿ ಸರ್ಕಾರ ಜನರಿಗೆ ಬೇಸರ ತಂದಿತ್ತು ಎಂದರು.