ತುಮಕೂರು: ಕುಣಿಗಲ್ ತಾಪಂ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾಹಿತಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಮಾಹಿತಿ ನೀಡಲು ತಡಬಡಾಯಿಸಿದ ತುಮಕೂರು ಉಪವಿಭಾಗಾಧಿಕಾರಿ ಗೌರವ್‌ಕುಮಾರ್‌ಶೆಟ್ಟಿ ಅವರನ್ನು ಸಂಸದ ಡಿ.ಕೆ.ಸುರೇಶ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸುರೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತಿರಿಸಲಾಗದೆ ಮೌನವಾಗಿದ್ದ ಎಸಿಗೆ ಈ ಹಿಂದೆ ಎಲ್ಲಿ ಕೆಲಸ ಮಾಡುತ್ತಿದ್ದಿರೀ? ಎಂದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂದು ಅಧಿಕಾರಿಯ ಉತ್ತರಕ್ಕೆ ಕಂದಾಯ ಇಲಾಖೆ ಮಾಹಿತಿ ಗೊತ್ತಲ್ಲದ ಮೇಲೆ ಏಕೆ ಬಂದಿದ್ದೀರ ಎಂದು ಗದರಿದರು.
ಇಲಾಖೆಯ ಅಂಕಿ, ಅಂಶ ಕೇಳಲು ಕೆಡಿಪಿ ಸಭೆ ಮಾಡಿಲ್ಲ, ಪ್ರಾಮಾಣಿಕವಾಗಿ ಜನರ ಕೆಲಸ ಮಾಡಿರಬೇಕು, ತಾಲೂಕಿನ ಅಭಿವೃದ್ದಿ ಬಗ್ಗೆ ಚಿಂತನೆಯಿರಬೇಕು ಎಂದು ಆಧಿಕಾರಿಗಳಿಗೆ ಸೂಚಿಸಿದರು.