ತುಮಕೂರು: ಸಂಪ್ರದಾಯದ ಹೆಸರಿನಲ್ಲಿ ಬಾಣಂತಿ ಮಹಿಳೆಯರನ್ನು ಮನೆಯಿಂದ ಹೊರಗಿಟ್ಟಿರವ ಮತ್ತೊಂದು ಪ್ರಕರಣ ಗುಬ್ಬಿ ತಾಲೂಕು ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ವರದಿಯಾಗಿದೆ.
ಖಚಿತ ಮಾಹಿತಿ ಮೇರೆಗೆ ಗುಬ್ಬಿ ನ್ಯಾಯಾಲಯದ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಹಟ್ಟಿಗೆ ಭೇಟಿ ನೀಡಿ ಮಗು ಮತ್ತು ಬಾಣಂತಿಯ ರP್ಷÀಣೆಮಾಡಿ, ಮನೆಗೆ ಸೇರಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಗು ಹಾಗೂ ಬಾಣಂತಿಯನ್ನು ಊರಿಂದಾಚೆಗೆ ಇಡಲಾಗಿತ್ತು. ವಾಸಕ್ಕೆ ಯೋಗ್ಯವಲ್ಲದ ಚಿಕ್ಕ ಗುಡಿಸಲಿನಲ್ಲಿ ವಾಸವಿದ್ದರು. ಮಗುವನ್ನ ತಾವೇ ಕೈಗೆತ್ತಿಕೊಂಡು ಮನೆಗೆ ಕರೆತಂದ ನ್ಯಾಯಾಧೀಶರು ಮನೆಯವರಿಗೆ ಬುದ್ಧಿ ಹೇಳಿದರು.