ತುಮಕೂರು: ತಾಲೂಕಿನ ಮಹತ್ವಾಕಾಂಕ್ಷಿ ಹೆಬ್ಬೂರು-ಗೂಳೂರು ಏತನೀರಾವರಿ ಯೋಜನೆಯಲ್ಲಿ ಬಾಣಾವರ ಮತ್ತು ನರುಗನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ತಾಲೂಕಿನ ಕರಡಿಗೆರೆ ಕಾವಲïನಲ್ಲಿ ಪಂಪ್‌ಹೌಸ್‌ನಲ್ಲಿ ಮೋಟರ್ ಚಾಲನೆ ನೀಡುವ ಮೂಲಕ ಶುಕ್ರವಾರ ಶಾಸಕ ಬಿ.ಸುರೇಶ್‌ಗೌಡ ಚಾಲನೆ ನೀಡಿ ಮಾತನಾಡಿದರು.
ಏತನೀರಾವರಿ ಯೋಜನೆಯಲ್ಲಿ ತುಮಕೂರು ತಾಲೂಕಿನ 52 ಕೆರೆಗಳಿಗೆ ನೀರು ಹರಿಯಲಿದೆ, ಮೊದಲ ಹಂತದಲ್ಲಿ ಬಾಣಾವರ ಹಾಗೂ ನರಗುನಹಳ್ಳಿ ಕೆರೆಗಳು ತುಂಬಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆಗೆ ಸಿದ್ದಗಂಗೆ ಶ್ರೀಶಿವಕುಮಾರ ಸ್ವಾಮೀಜಿ ಹಾಗೂ ಅದಿ ಚುಂಚನಗಿರಿಶ್ರೀಬಾಲಗAಗಾಧರನಾಥ ಸ್ವಾಮೀಜಿ ಅಡಿಗಲ್ಲು ಹಾಕಿದ್ದರು, ಯೋಜನೆ ಪೂರ್ಣಗೊಂಡರೂ ಕಾರಣಾಂತರದಿAದ ನೀರು ಹರಿದಿರಲಿಲ್ಲ ಎಂದರು.
ಪೈಪ್ ಮೂಲಕ ನೀರು ತುಂಬಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದಂತವರಿಗೆ ನಾಗವಲ್ಲಿ ಕೆರೆಯನ್ನು ತುಂಬಿಸಿ ಉತ್ತರಿಸಿz್ದೆÃನೆ. ಇದೇ ರೀತಿಯಲ್ಲಿ 52 ಕೆರೆಗಳಿಗೆ ನೀರು ತುಂಬಿಸುವ ಮೂಲಕ 250 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಕೂಡ ಅನುಷ್ಟಾನವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶಿವಕುಮಾರ್, ರಾಮಚಂದ್ರಯ್ಯ ಮುಖಂಡರಾದ ನರಸಿಂಹಮೂರ್ತಿ, ಪರಮೇಶ್ವರಪ್ಪ, ಈಶ್ವರಯ್ಯ. ವೀರಪ್ಪನ್, ಮಹದೇವಣ್ಣ, ಕೆಆರ್‌ಪಿ ಕಾರ್ಯಪಾಲಕ ಇಂಜಿನಿಯರ್ ವೀರೇಂದ್ರ, ಎಇಇ ಅಂಜನ್ ಇದ್ದರು.