ಜಿಲ್ಲೆ

ಗುಬ್ಬಿ ಎಚ್‌ಎಎಲ್ ಘಟಕದಿಂದ ಖಾಲಿ ಹುದ್ದೆಗೆ ಅರ್ಜಿ

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕು ಎಚ್‌ಎಎಲ್ ಸಂಸ್ಥೆಯಲ್ಲಿ ಖಾಲಿ ಇರುವ ನೇಮಕಾತಿಗೆ ಅರ್ಹಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಸಲ್ಲಿಕೆಯಾಗಲಿದ್ದು ಆಸಕ್ತರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಐಟಿಐ, ಡಿಪ್ಲೊಮಾ ಹಾಗೂ ಯಾವುದೇ ಪದವಿ ಪಾಸಾಗಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಈಗಾಗಲೇ ಹೆಸರು ನೋಂದಾಯಿಸಿರುವ ಅಭ್ಯರ್ಥಿಗಳು ಇಮೇಲ್ ಐಡಿ, ಮೊಬೈಲ್ ಸಂಖ್ಯೆಯ ತಿದ್ದುಪಡಿಗೂ ಅವಕಾಶವಿದೆ. ಐಟಿಐ ಮಾಡಿರುವ ಅಭ್ಯರ್ಥಿಗಳು ಎನ್‌ಐಸಿ, ಎಸ್‌ಸಿವಿಟಿ, ಏಟಿಎಸ್‌ನ್ನ ಪ್ರಮಾಣಪತ್ರವನ್ನು ನೋಂದಾಯಿತ ಎಂಪ್ಲಾಯ್‌ಮೆAಟ್ ಕಾರ್ಡ್ಗೆ ಸೇರಿಸುವುದು ಕಡ್ಡಾಯವಾಗಿದೆ. ಮಾಹಿತಿಗೆ ದೂ.08162278488 ಸಂಪರ್ಕಿಸಿ.