ಜಿಲ್ಲೆ

ಲ್ಯಾಟರಲ್​ ಎಂಟ್ರಿ ಮೂಲಕ ಡಿಪ್ಲೋಮಾ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಲ್ಯಾಟರಲ್​ ಎಂಟ್ರಿ ಮೂಲಕ ನೇರವಾಗಿ 2ನೇ ವರ್ಷದ ಡಿಪ್ಲೋಮಾ(ಡಿಹೆಚ್​ಟಿಟಿ) ಕೋರ್ಸ್​ ಪ್ರವೇಶಕ್ಕಾಗಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ವ್ಯಾಸಂಗದ ಸಮಯದಲ್ಲಿ ಮಾರ್ಗಸೂಚಿಯಂತೆ ಮಾಸಿಕ 2500 ರೂ. ಶಿಷ್ಯ ವೇತನ ಹಾಗೂ ಆಯಾ ಐಐಹೆಚ್​ಟಿ. ನಿಯಮಾನುಸಾರ ವಸತಿ ನಿಲಯದ ಸೌಲಭ್ಯವಿದೆ.

ಆಸಕ್ತ ಅಭ್ಯರ್ಥಿಗಳು ಜಾಲತಾಣ ಮೂಲಕ ಅರ್ಜಿಯನ್ನು ಡೌನ್​ಲೋಡ್​ ಮಾಡಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂ.15ರೊಳಗಾಗಿ ಪ್ರಾಂಶುಪಾಲ, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ, ಗದಗ-ಬೆಟಗೇರಿ-582102 ಇವರಿಗೆ ಸಲ್ಲಿಸಬೇಕು.

ಮಾಹಿತಿಗೆ ಉಪನಿರ್ದೇಶಕ, ಕೈಮಗ್ಗ ಮತ್ತು ಜವಳಿ ಇಲಾಖೆ, ತುಮಕೂರು.ದೂ.0816-2275370, ಮೊ.9980208292 ಅಥವಾ ಪ್ರಾಂಶುಪಾಲರು ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಗದಗ ಬೆಟಗೇರಿ. ಮೊ.9449162822 ಸಂಪರ್ಕಿಸಿ.