ತುಮಕೂರು: ಮುಂದಿನ ವರ್ಷದಿಂದ ಜಿಲ್ಲಾಡಳಿತದ ವತಿಯಿಂದಲೇ ದಸರಾ ಆಚರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಹಬ್ಬ ದಸರಾ ಜನರೆಲ್ಲರೂ ಸೇರಿ ಆಚರಿಸಬೇಕು. ಸಮಾಜದಲ್ಲಿ ಕೆಲವರಷ್ಟೇ ಆಚರಣೆ ಮಾಡಬಾರದು ಎಂಬ ಉದ್ದೇಶದಿಂದ ನಗರದೆಲ್ಲೆಡೆ ಅನಧಿಕೃತವಾಗಿ ಅಳವಡಿಸಿದ್ದ ಪ್ಲಕ್ಸ್ಗಳನ್ನು ತೆರವುಗೊಳಿಸಲಾಯಿತು ಎಂದರು.
ದಸರಾ ಆಚರಣೆಯಲ್ಲಿ ಲೋಪವಾಗಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಗರಂ ಆಗಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸದೇ ಮುಂದಿನ ವರ್ಷವೂ ನಾನೇ ಜಿಲ್ಲಾಧಿಕಾರಿಯಾಗಿದ್ದರೆ ಜಿಲ್ಲಾಡಳಿತದ ವತಿಯಿಂದಲೇ ದಸರಾ ಆಚರಣೆ ಮಾಡುತ್ತೇವೆ ಎಂದರು.