ತುಮಕೂರು: 2023-24ನೇ ಸಾಲಿನ ತುಮಕೂರು ಜಿಲ್ಲೆಯ 10 ತಾಲೂಕುಗಳಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ದಸರಾ ಕ್ರೀಡಾಕೂಟ ಏರ್ಪಡಿಸಲಾಗಿದೆ.
ಕೊರಟಗೆರೆ ತಾಲೂಕು ಕ್ರೀಡಾಂಗಣದಲ್ಲಿ ಸೆ.20ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.19 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಹನುಮಂತರಾಯಪ್ಪ ಮೊ.9900352324 ಸಂಪರ್ಕಿಸಬಹುದು.
ಕುಣಿಗಲ್‌ನಲ್ಲಿ ಸೆ.25ರಂದು ಕ್ರೀಡಾಕೂಟ ನಡೆಯಲಿದ್ದು, ನೋಂದಣಿ ಮಾಡಿಕೊಳ್ಳಲು ಮೊ.7259938630, ಪಾವಗಡ ತಾಲೂಕು ಕ್ರೀಡಾಂಗಣದಲ್ಲಿ ಸೆ.20ರಂದು ಕ್ರೀಡಾಕೂಟ ನಡೆಯಲಿದ್ದು ನೋಂದಣಿಗೆ ಮೊ.9448940609 ಸಂಒರ್ಕಿಸಿ.
ಮಧುಗಿರಿ ಕ್ರೀಡಾಂಗಣದಲ್ಲಿ ಸೆ.21ರಂದು ಕ್ರೀಡಾಕೂಟ ನಡೆಯಲಿದ್ದು, ಸೆ.20 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನ. ಮಾಹಿತಿಗೆ ಮೊ.9900195614 ಸಂಪರ್ಕಿಸಿ.
ಶಿರಾ ಶ್ರೀವಿವೇಕಾನಂದ ತಾಲೂಕು ಕ್ರೀಡಾಂಗಣದಲ್ಲಿ ಸೆ.21ರಂದು ಕ್ರೀಡಾಕೂಟ ನಡೆಯಲಿದ್ದು, ಮಾಹಿತಿಗೆ ಮೊ.9972603567, ತಿಪಟೂರು ತಾಲೂಕು ಕ್ರೀಡಾಕೂಟ ಸೆ.22ರಂದು ಮಾಹಿತಿಗೆ ಮೊ.8660356249 ಸಂಪರ್ಕಿಸಿ.
ತುಮಕೂರುಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸೆ.23ರಂದು ಕ್ರೀಡಾಕೂಟ ನಡೆಯಲಿದ್ದು, ಮಾಹಿತಿಗೆ ಮೊ.9844464453. ಚಿ.ನಾ.ಹಳ್ಳಿ ತಾಲೂಕು ಕ್ರೀಡಾಂಗಣದಲ್ಲಿ ಸೆ.25ರಂದು ಕ್ರೀಡಾಕೂಟ ನಡೆಯಲಿದ್ದು ಮಾಹಿತಿಗೆ ಮೊ.9448763311 ಸಂಪರ್ಕಿಸಿ.
ತುರುವೇಕೆರೆ ತಾಲೂಕಿನಲ್ಲಿ 26ರಂದು ಕ್ರೀಡಾಕೂಟ ನಡೆಯಲಿದ್ದು, ಮೊ.9901058001. ಗುಬ್ಬಿಯಲ್ಲಿ 26ರಂದು ಮಾಹಿತಿಗೆ ಮೊ.9901009501 ಸಂಪರ್ಕಿಸಿ.
ಅಥ್ಲೆಟಿಕ್ಸ್ : ಪುರುಷ ವಿಭಾಗ 100, 200, 400, 800, 1500, 5000, 10000 ಮೀ ಓಟ, 110 ಮೀ ಹರ್ಡಲ್ಸ್ 4/100 ಮೀ ರಿಲೇ, 4/400 ಮೀ. ರಿಲೇ. ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ (ಟ್ರಿಪಲ್ ಜಂಪ್), ಗುಂಡು ಎಸೆತ, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ.
ಮಹಿಳಾ ವಿಭಾಗ - 100, 200, 400, 800, 1500, 3000 ಮೀ ಓಟ, 100 ಮೀ ಹರ್ಡಲ್ಸ್, 4/100 ಮೀ ರಿಲೇ, 4/400 ಮೀ. ರಿಲೇ. ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ (ಟ್ರಿಪಲ್ ಜಂಪ್), ಗುಂಡು ಎಸೆತ, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ.
ಗುಂಪು ಕ್ರೀಡೆ: ಪುರುಷರು : ಕಬಡ್ಡಿ, ಖೋ-ಖೋ, ವಾಲಿಬಾಲ್, ಥ್ರೋಬಾಲ್, ಫುಟ್ಬಾಲ್, ಯೋಗ
ಮಹಿಳಾ ವಿಭಾಗ : ಕಬಡ್ಡಿ, ಖೋ-ಖೋ, ವಾಲಿಬಾಲ್, ಥ್ರೋಬಾಲ್, ಯೋಗ (ವೀರಭದ್ರಾಸನ, ಜಾನು ಶಿರಶಾಸನ, ಹಲಾಸನ ಮತ್ತು ಧನುರಾಸನ) ಸ್ಫರ್ದೆ ನಡೆಯಲಿದೆ.
ತಾಲೂಕು ಮಟ್ಟದಲ್ಲಿ ನಡೆಯುವ ಎಲ್ಲಾ 7 ಸ್ಪರ್ಧೆಗಳ ಜತೆಗೆ ಬಾಸ್ಕೆಟ್ ಬಾಲ್, ಕುಸ್ತಿ, ಹಾಕಿ, ಬ್ಯಾಡ್ ಮಿಂಟನ್, ಬಾಲ್ ಬ್ಯಾಡ್ಮಿಂಟನ್, ಹ್ಯಾಂಡ್ ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್ ಹೀಗೆ 15 ಕ್ರೀಡೆ ಆಯೋಜಿಸಲಾಗುವುದು. ಟೆನ್ನಿಸ್, ನೆಟ್ಬಾಲ್ ಮತ್ತು ಈಜು ಈ ಮೂರು ಸ್ಪರ್ಧೆಗಳ ಆಸಕ್ತ ಕ್ರೀಡಾಪಟುಗಳನ್ನು ನೇರವಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ವಿಭಾಗ ಮಟ್ಟಕ್ಕೆ ಕಳುಹಿಸಲಾಗುತ್ತಿದೆ.