ಜಿಲ್ಲೆ

ಎನ್‌ಇಪಿ ರದ್ದುಪಡಿಸಲು ಒಂದು ಸಕಾರಣ ನೀಡಲಿ: ಕಾಂಗ್ರೆಸ್‌ಗೆ ಬಿ.ಸಿ.ನಾಗೇಶ್ ಸವಾಲು

ತುಮಕೂರು: ಕಾಂಗ್ರೆಸ್ ರಾಷ್ಟ್ರೀಯ ಶಿಕ್ಣಷ ನೀತಿ ವಿರೋಧಿಸಲು ಒಂದು ಸಕಾರಣ ನೀಡಲಿ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸವಾಲೆಸೆದರು.

ತುಮಕೂರು ಪೀಪಲ್ ಫೋರಂ ಫಾರ್ ಕರ್ನಾಟಕ ಎಜುಕೇಶಸ್ ಸಂಸ್ಥೆ ವತಿಯಿಂದ ಮಂಗಳವಾರ ಆಯೋಜಿಸಿದ್ದ, ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಶಿಕ್ಷಣ ತಜ್ಞರು, ಪೋಷಕರು ಮತ್ತು ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಬಳಿ ಯಾವುದೇ ಕಾರಣವಿಲ್ಲ. ಖಾಸಗಿ ಶಾಲೆಗಳ ಲಾಬಿ ಅಥವಾ ಎನ್‌ಇಪಿ ಬಗ್ಗೆ ಅರಿವಿನ ಕೊರತೆಯಿಂದ ವಿರೋಧಿಸುತ್ತಿದ್ದಾರೆ. ನಾವು ಪದೇಪದೇ ಕಾಂಗ್ರೆಸ್ ಸರ್ಕಾರವನ್ನು ಕೇಳುತ್ತಿದ್ದೇವೆ ಆದರೆ, ಅವರಿಗೆ ಈವರೆಗೂ ಎನ್‌ಇಪಿ ರದ್ದುಪಡಿಸಲು ಒಂದು ಕಾರಣ ನೀಡಲು ಸಾಧ್ಯವಾಗಿಲ್ಲ ಎಂದರು.

ರಾಜಕೀಯ ಧ್ವೇಷವಿಟ್ಟುಕೊಂಡಿರುವ ಕಾಂಗ್ರೆಸ್ ಸರ್ಕಾರದ ಎನ್‌ಇಪಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಕಾರ್ಯಕ್ರಮ ಎಂದು ಪೂರ್ವಾಗ್ರಹವಾಗಿ ವಿರೋಧಿಸುತ್ತಿದ್ದಾರೆ ಎಂದರು.