ಜಿಲ್ಲೆ

ಕರ್ನಾಟಕ ಬಂದ್‌ಗೆ ಕಲ್ಪತರು ಸೀಮೆಯ ಬೆಂಬಲ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಶುಕ್ರವಾರದ ಕರ್ನಾಟಕ ಬಂದ್‌ಗೆ ತುಮಕೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಿಲ್ಲೆಯ ಎಲ್ಲಾ ನಗರ, ಪಟ್ಟಣ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ನಿಲ್ಲಿಸಿ ವರ್ತಕರು ಬೆಂಬಲ ಸೂಚಿಸಿದ್ದರು. ಹೋಟೆಲ್, ಅಂಗಡಿ, ಖಾಸಗಿ ಟ್ಯಾಕ್ಸಿ, ಆಟೋ ಸೇರಿದಂತೆ ಎಲ್ಲಾ ಸಾರಿಗೂ ಸ್ತಬ್ಧವಾಗಿತ್ತು. ಕೆಎಸ್‌ಆರ್‌ಟಿಸಿ ಸೇವೆ ಇದ್ದರೂ ಜನರು ಇರಲಿಲ್ಲ.

ಶಾಲೆ, ಕಾಲೇಜುಗಳಿಗೆ ಅಧಿಕೃತ ರಜೆ ಘೋಷಿಸಿಲ್ಲದಿದ್ದರೂ ಬಹುತೇಕ ಶಿಕ್ಷಣ ಸಂಸ್ಥೆಗಳೂ ಮಕ್ಕಳಿಲ್ಲದೆ ಬಿಕೋ ಎನ್ನುತ್ತಿದ್ದರು. ಖಾಸಗಿ ಶಾಲೆ, ಕಾಲೇಜು ರಜೆ ಘೋಷಿಸಿದ್ದವು, ತುಮಕೂರು ವಿವಿ ಮೌಲ್ಯಮಾಪನ, ಪರೀಕ್ಷೆಯನ್ನು ಮುಂದೂಡಿತ್ತು.