ಸಂಜಯ್​ ಗುಬ್ಬಿ 
ತುಮಕೂರು

ಸಂಜಯ್​ ಗುಬ್ಬಿಗೆ ಸತ್ಪಥ ಪ್ರಶಸ್ತಿ ಪ್ರದಾನ

ಸ್ಪತ್ಪಥ ನೇಚರ್​ಫೌಂಡೇಶನ್​ ಉದ್ಘಾಟನೆ

ತುಮಕೂರು: ಸ್ಪತ್ಪಥ ನೇಚರ್​ ಫೌಂಡೇಶನ್​ ವತಿಯಿಂದ ವನ್ಯಜಿವಿ ಸಂರಕ್ಷಣಾ ತಜ್ಞ, ಅಂತಾರಾಷ್ಟ್ರೀಯ ವನ್ಯಜಿವಿ ಛಾಯಾಗ್ರಾಹಕ ಡಾ.ಸಂಜಯ್​ ಗುಬ್ಬಿ ಅವರಿಗೆ "ಸತ್ಪಥ ಪ್ರಶಸ್ತಿ'ಯನ್ನು ನ.21 ರಂದು ಪ್ರದಾನ ಮಾಡಲಾಗುತ್ತಿದೆ. ನಗರದ ಎಸ್​ಐಟಿ ಬಿರ್ಲಾ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸ್ಪತ್ಪಥ ನೇಚರ್​ ಫೌಂಡೇಶನ್ ಉದ್ಘಾಟನೆಯನ್ನು ಐಎ್​ಎಸ್​ ಸಿ.ಕೆ.ಯೋಗೀಶ್​ ನೆರವೇರಿಸುವರು. ವೆಂಕಟೇಶ್​ ನಾಯಕ್​, ಡಾ.ರಾಹುಲ್​ ದೇವರಾಜ್​, ಕೆ.ಎಸ್​.ದರ್ಶನ್​ ಉಪಸ್ಥಿತರಿರುವರು.