ಶಿರಾ ನಗರದ ಎಲ್​.ಜಿ. ಹಾವನೂರು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಪತ್ತಿನ ಸಹಕಾರ ಸಂಘದ 18ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ್​, ಸಂಸ್ಥಾಪಕ ಅಧ್ಯಕ್ಷ ಎಸ್​.ರಾಮಚಂದ್ರಯ್ಯ ದೊಡ್ಡಗುಳ, ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಚಿಕ್ಕ ಕೆಂಪಯ್ಯ ಕಡವಿಗೆರೆ ಇದ್ದರು.  ಸಭೆ
ತುಮಕೂರು

ವಿದ್ಯಾರ್ಥಿಗಳಿಗೆ "ಏಕಲವ್ಯ ಪುರಸ್ಕಾರ' ಪ್ರದಾನ

ಶಿರಾ: ನಗರದ ಎಲ್​.ಜಿ. ಹಾವನೂರು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಪತ್ತಿನ ಸಹಕಾರ ಸಂಘದ 18ನೇ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ವಿಶ್ವನಾಥ್​ ಸಂತೆಪೇಟೆ ಅಧ್ಯಕ್ಷತೆಯಲ್ಲಿ ಭಾನುವಾರ ನೆರವೇರಿತು.

ಕಾರ್ಯಕ್ರಮವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು.

ಕಾರ್ಯಕ್ರಮದ ಅಂಗವಾಗಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುನಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ನಾಯಕ ಸಮಾಜದ ವಿದ್ಯಾರ್ಥಿಗಳಿಗೆ ದಿವಂಗತ ಎಸ್​.ಟಿ.ಪ್ರಸನ್ನಕುಮಾರ್​ ಅವರ ಸ್ಮರಣಾರ್ಥ "ಏಕಲವ್ಯ ಪ್ರತಿಭಾ ಪುರಸ್ಕಾರ' ನೀಡಿ ಸನ್ಮಾನಿಸಲಾಯಿತು. ನಗರಸಭೆ ಮಾಜಿ ಸದಸ್ಯೆ ಸುಜಾತಾ ಎಸ್​.ಟಿ. ಪ್ರಸನ್ನಕುಮಾರ್​ ಕುಟುಂಬಸ್ಥರು ಪುರಸ್ಕಾರದ ವ್ಯವಸ್ಥೆ ಮಾಡಿದ್ದರೆ, ತುಮಕೂರು ಜಿಲ್ಲಾ ಸಹಕಾರಿ ಕೇಂದ್ರ (ಡಿಡಿಸಿಸಿ) ಬ್ಯಾಂಕಿನ ವಾಲ್ಮೀಕಿ ನೌಕರರ ಬಳಗದಿಂದ ನಗದು ಬಹುಮಾನ ವಿತರಿಸಲಾಯಿತು.

ಎಲ್​.ಜಿ. ಹಾವನೂರು ರಸ್ತೆ ನಾಮಕರಣ:

ಇದೇ ಸಂದರ್ಭದಲ್ಲಿ ಶಿರಾ ನಗರದ ಬುಕ್ಕಾಪಟ್ಟಣ ರಸ್ತೆಗೆ 'ಎಲ್​.ಜಿ. ಹಾವನೂರು ರಸ್ತೆ' ಹಾಗೂ ರಿಲಯನ್ಸ್​ ಪೆಟ್ರೋಲ್​ ಬಂಕ್​ ಮುಂಭಾಗದಲ್ಲಿರುವ ವೃತ್ತಕ್ಕೆ 'ಎಲ್​.ಜಿ. ಹಾವನೂರು ವೃತ್ತ' ಎಂದು ನಾಮಕರಣ ಮಾಡಲಾಯಿತು. ನಿರ್ದೇಶಕರಾದ ರಾಕೇಶ್​ ಡಿ.ಡಿ.ನಾಯಕ, ಮಂಜುನಾಥ್​ ಪಂಜಿಗಾನಹಳ್ಳಿ, ನಟರಾಜ್​ ಭೂವನಹಳ್ಳಿ, ಎಸ್​.ರಂಗರಾಜು, ಗಂಗಾಧರ್​ ಕುಂಬಾರಹಳ್ಳಿ, ಕಾಮಾಕ್ಷಮ್ಮ ಹೊಸಪಾಳ್ಯ, ಗೌರವಾಧ್ಯಕ್ಷ ಬಂಡೆ ರಾಮಕೃಷ್ಣ, ಡಿಡಿಸಿಸಿ ಬ್ಯಾಂಕ್​ ಮೇಲ್ವಿಚಾರಕ ಜನಾರ್ಧನ್​, ಪಾಂಡುರಂಗಪ್ಪ, ಜಯರಾಮಯ್ಯ ತಿಥಿಗಾನಹಳ್ಳಿ ಇದ್ದರು.