ತುಮಕೂರು: ಎಲ್ಇಡಿ ಡಿಸ್ಪ್ಲೇ ಬೋರ್ಡ್ ಅಳವಡಿಸಿರುವ ಎಸ್ಎಸ್ ಸ್ಕ್ವೇರ್ನಲ್ಲಿ ಸೋಮವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರವಾಹನದಲ್ಲಿ ಹಿಂಬದಿ ಕುಳಿತ್ತಿದ್ದ ಅಜ್ಜಿಯೊಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ. ಸಿಗ್ನಲ್ ಬಿಟ್ಟ ವೇಳೆ ಬೈಕ್ ಮುಂದೆ ಹೊರಡುವಾಗ ಪಕ್ಕದಲ್ಲಿದ್ದ ಕೆಎಸ್ಆರ್ಟಿಸಿ ಬಸ್ ಗುದ್ದಿದೆ. ಹಿಂಬದಿಯಲ್ಲಿ ಕುಳಿತಿದ್ದ ಅಜ್ಜಿ ರಸ್ತೆ ಕಡೆಗೆ ಬಿದ್ದಿದ್ದಾರೆ. ಪ್ರಯಾಣಿಕರು ಜೋರಾಗಿ ಕೂಗಿಕೊಂಡಾಗ ಚಾಲಕ ಬಸ್ ಅನ್ನು ತಕ್ಷಣವೇ ನಿಲ್ಲಿಸಿದ್ದು ಯಾವುದೇ ಅನಾಹುತ ಸಂಭವಿಸಲಿಲ್ಲ. ಸಣ್ಣಪುಟ್ಟ ಗಾಯದಿಂದ ಗಾಬರಿಗೊಂಡಿದ್ದ ಅಜ್ಜಿ ಮೇಲೇಳಲು ಹರಸಾಹಸ ಪಡುವಂತಾಯಿತು. ಎಲ್ಇಡಿ ಸ್ಕ್ರೀನ್ ಸಂಬಂಧ ನಡೆಯುತ್ತಿರುವ ಸಣ್ಣಪುಟ್ಟ ಕಾಮಗಾರಿ ಹಿನ್ನೆಲೆ ರಸ್ತೆಯಲ್ಲೇ ದೊಡ್ಡ ದೊಡ್ಡ ಬ್ಯಾರಿಕೇಡ್ಗಳು ಇನ್ನೂ ಇವೆ. ಅವಡ ಸಂಭವಿಸಿದ ವೇಳೆ ಎಲ್ಇಡಿ ಸ್ಕ್ರೀನ್ ಚಾಲನೆಯಲ್ಲಿ ಇರಲಿಲ್ಲ.