ತುಮಕೂರು ನಗರ ಪೊಲೀಸ್​ ಠಾಣೆಯಲ್ಲಿ ಬಸವಣ್ಣ ಬಗ್ಗೆ ಅವಹೇಳನಕಾರಿ ಲೇಖನ ಪ್ರಕಟಿಸಿರುವ ಬಸವ ಮಂಟಪ ಪುಸ್ತಕದ ಲೇಖಕ ಹಾಗೂ ಪ್ರಕಾಶಕರ ವಿರುದ್ಧ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಟಕದಿಂದ ದೂರು ದಾಖಲಿಸಲಾಗಿದೆ. ಡಾ.ಎಸ್​.ಪರಮೇಶ್​, ಸತ್ಯಮಂಗಲ ಜಗದೀಶ್​, ಜಯಣ್ಣ, ಮಂಜುನಾಥ್​, ಡಾ.ಸದಾಶಿವಯ್ಯ, ಡಿ.ರಾಜಶೇಖರ್​ ಮತ್ತಿತರರು ಇದ್ದರು.  
ತುಮಕೂರು

ಬಸವಣ್ಣನ ಅವಹೇಳನ ಸಹಿಸೋಲ್ಲ

ಬಸವ ಮಂಟಪ ಕೃತಿ ಲೇಖಕ, ಪ್ರಕಾಶಕರ ವಿರುದ್ಧ ನಗರ ಠಾಣೆಯಲ್ಲಿ ದೂರು

ತುಮಕೂರು: ಸಮಾಜ ಸುಧಾರಕ ಬಸವಣ್ಣ ಬಗ್ಗೆ ಅವಹೇಳನಕಾರಿ ಲೇಖನಗಳನ್ನು ಪ್ರಕಟಿಸಿರುವ ಬಸವ ಮಂಟಪ ಪುಸ್ತಕದ ಲೇಖಕ ರವಿ ಹುಂಜ್​ ಹಾಗೂ ಪ್ರಕಾಶ ವಿಶ್ವೇಶ್ವರ ಭಟ್​ ವಿರುದ್ಧ ನಗರ ಪೊಲೀಸ್​ ಠಾಣೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಟಕದಿಂದ ದೂರು ನೀಡಲಾಗಿದೆ.

ನಗರ ಠಾಣೆಗೆ ಶುಕ್ರವಾರ ದೂರು ನೀಡಿ, ಮಹಾನ್​ ಮಾನವತಾವಾದಿ ಬಸವಣ್ಣನವರ ಬಗ್ಗೆ ಅವಮಾನಕಾರಿ ಲೇಖನ ಬರೆದು ಪ್ರಕಟಿಸಿದ ಆರೋಪದ ಹಿನ್ನೆಲೆ ಈ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಲೇಖಕ ರವಿ ಹಂಜ್​ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್​ ವಿರುದ್ಧ ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಬೇಕು ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್​. ಪರಮೇಶ್​ ಒತ್ತಾಯಿಸಿದರು.

ಬಸವ ಮಂಟಪ ಕೃತಿಯಲ್ಲಿ ಬಸವಣ್ಣ ಬಗ್ಗೆ ಕೀಳು ಮಟ್ಟದಲ್ಲಿ, ಅವಹೇಳನಕಾರಿಯಾಗಿ ಬರೆಯಲಾಗಿದೆ. ಯಾವುದೇ ದಾರ್ಶನಿಕರ ಬಗ್ಗೆ ಈ ರೀತಿ ಬರೆಯುವುದು ಬಹಳ ಅವಮಾನಕರ. ಇದು ಇಡೀ ವೀರಶೈವ ಲಿಂಗಾಯತ ಸಮಾಜ ಮಾತ್ರವಲ್ಲದೆ ಎಲ್ಲಾ ಸಮಾಜದವರಿಗೂ ನೋವುಂಟು ಮಾಡಿದೆ ಎಂದು ಹೇಳಿದರು.

ರಾಜ್ಯಾದ್ಯಂತ ದೂರು: ಬೆಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೃತಿಯನ್ನು ಮುಟ್ಟುಗೋಲು ಹಾಕಬೇಕು, ಎಫ್​ಐಆರ್​ ಮಾಡಿ ಬಂಧಿಸಬೇಕು ಎಂದು ತೀಮಾರ್ನ ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಸಮಾಜದ ಬಾಂಧವರು ಪೊಲೀಸ್​ ಠಾಣೆಗಳಲ್ಲಿ ದೂರು ಸಲ್ಲಿಸಿದ್ದಾರೆ. ಅದೇ ರೀತಿ ತುಮಕೂರಿನಲ್ಲಿ ಸಮಾಜದ ಹಿರಿಯರ ಸಮ್ಮುಖದಲ್ಲಿ ನಗರ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ಪರಮೇಶ್​ ಹೇಳಿದರು.

ವಾಕ್​ ಸ್ವಾತಂತ್ರ್ಯಕ್ಕೆ ಗೌರವ ಇದೆ, ಆದರೆ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ರೀತಿ ಪ್ರಚೋದನಕಾರಿ ವಿಚಾರವನ್ನು ರಚಿಸಿ ಸಮಾಜ ಸ್ವಾಸ್ಥ$್ಯ ಹಾಳುಗೆಡುವ ಕಾರಣಕ್ಕೆ ಪೊಲೀಸರು ಪ್ರಕರಣ ದಾಖಲಿಸಿ, ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು

ಮಹಾಸಭಾದ ನಗರ ಪ್ರಧಾನ ಕಾರ್ಯದರ್ಶಿ ಸತ್ಯಮಂಗಲ ಜಗದೀಶ್​, ತುಮಕೂರು ತಾಲೂಕು ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಮಂಜುನಾಥ್​, ಪ್ರಧಾನ ಕಾರ್ಯದರ್ಶಿ ಡಾ. ಸದಾಶಿವಯ್ಯ, ಖಜಾಂಚಿ ಡಿ. ರಾಜಶೇಖರ್​ ಮತ್ತಿತರರು ಹಾಜರಿದ್ದರು.

ತುಮಕೂರು ನಗರ ಪೊಲೀಸ್​ ಠಾಣೆಯಲ್ಲಿ ಬಸವಣ್ಣ ಬಗ್ಗೆ ಅವಹೇಳನಕಾರಿ ಲೇಖನ ಪ್ರಕಟಿಸಿರುವ ಬಸವ ಮಂಟಪ ಪುಸ್ತಕದ ಲೇಖಕ ಹಾಗೂ ಪ್ರಕಾಶಕರ ವಿರುದ್ಧ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಟಕದಿಂದ ದೂರು ದಾಖಲಿಸಲಾಗಿದೆ. ಡಾ.ಎಸ್​.ಪರಮೇಶ್​, ಸತ್ಯಮಂಗಲ ಜಗದೀಶ್​, ಜಯಣ್ಣ, ಮಂಜುನಾಥ್​, ಡಾ.ಸದಾಶಿವಯ್ಯ, ಡಿ.ರಾಜಶೇಖರ್​ ಮತ್ತಿತರರು ಇದ್ದರು.