ತುಮಕೂರು ಜಿಪಂ 
ತುಮಕೂರು

ಜಿಪಂ 21 ಕ್ಷೇತ್ರಗಳ ಮೀಸಲು ಬದಲು

ಅಂತಿಮ ಅಧಿಸೂಚನೆ ಪ್ರಕಟ

ತುಮಕೂರು: ತಾಲೂಕು ಹಾಗೂ ಜಿಪಂ ಕ್ಷೇತ್ರಗಳಿಗೆ ಮೀಸಲಾತಿ ಅಂತಿಮ ಅಧಿಸೂಚನೆಗೆ ಸೋಮವಾರ ಪ್ರಕಟಗೊಂಡಿದ್ದು ಜಿಲ್ಲೆಯ 57 ಜಿಪಂ ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಕರಡು ಪಟ್ಟಿಯಲ್ಲಿ ಪ್ರಕಟವಾಗಿದ್ದ ಮೀಸಲಾತಿ ಬದಲಾಗಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಜಿಲ್ಲೆಯ 10 ತಾಪಂ ಮತ್ತು ಜಿಲ್ಲಾ ಪಂಚಾಯತ್​ ಆಡಳಿತ ಮಂಡಳಿಗಳ ಆಡಳಿತಾವಧಿ ಮುಗಿದು ಬರೋಬ್ಬರಿ 5 ವರ್ಷಗಳು ಮುಗಿದ ನಂತರ , ಚುನಾವಣೆ ನಡೆಸುವ ಮನಸ್ಸು ಮಾಡಿರುವ ರಾಜ್ಯ ಸರ್ಕಾರ 2021ರಲ್ಲಿ ಪ್ರಕಟವಾಗಿದ್ದ ಮೀಸಲಾತಿಗಳ ಅಧಿಸೂಚನೆ ರದ್ದು ಪಡಿಸಿ 2026 ಸೆ.7 ರಂದು 57 ಸದಸ್ಯ ಬಲದ ತುಮಕೂರು ಜಿಲ್ಲಾ ಪಂಚಾಯತ್​ ಒಟ್ಟು ಸ್ಥಾನಗಳಿಗೆ ಮೀಸಲಾತಿ ನಿಗದಿಗೊಳಿಸಿ, ಸೆ.9 ರಂದು ಕ್ಷೇತ್ರವಾರು ಮೀಸಲಾತಿ ಕರಡು ಅಧಿಸೂಚನೆ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಿತ್ತು.

ಚಿಕ್ಕನಾಯಕನಹಳ್ಳಿ ತಾಲೂಕಿನ ಯಳನಡು, ಹಂದನಕೆರೆ, ಗುಬ್ಬಿ ತಾಲೂಕು ಚೇಳೂರು, ಗುಬ್ಬಿ ಗ್ರಾಮಾಂತರ, ಅಳಿಲುಘಟ್ಟ, ಕುಣಿಗಲ್​ ತಾಲ್ಲೂಕು ಕೊತ್ತಗೆರೆ, ಹುತ್ರಿದುರ್ಗ, ಅಮೃತೂರು, ಯಡಿಯೂರು, ಕೊರಟಗೆರೆ ತಾಲೂಕಿನ ಹೊಳವನಹಳ್ಳಿ , ಶಿರಾ ತಾಲೂಕಿನ ಹುಲಿಕುಂಟೆ,ನಾದೂರು, ಚಿಕ್ಕನಹಳ್ಳಿ, ಬುಕ್ಕಾಪಟ್ಟಣ, ತಿಪಟೂರು ತಾಲೂಕಿನ ಹುಚ್ಚಗೊಂಡನಹಳ್ಳಿ, ನೊಣವಿನಕೆರೆ, ತುಮಕೂರು ತಾಲೂಕು ಹೆಗ್ಗೆರೆ, ಮಧುಗಿರಿ ತಾಲೂಕಿನ ಸಿದ್ದಾಪುರ, ಪಾವಗಡ ತಾಲೂಕಿನ ಬ್ಯಾಡನೂರು, ತುರವೇಕೆರೆ ತಾಲೂಕಿನ ಬಾಣಸಂದ್ರ ಮತ್ತು ಮಾಯಸಂದ್ರ ಕ್ಷೇತ್ರಗಳ ಮೀಸಲಾತಿ ಬದಲಾವಣೆಯಾಗಿದೆ.

ತುಮಕೂರು ತಾಲೂಕು

ಕ್ಷೇತ್ರ ಅಂತಿಮ ಮೀಸಲು

1.ಬೆಳಗುಂಬ ಸಾಮಾನ್ಯ

2. ಗೂಳೂರು ಸಾಮಾನ್ಯ

3. ಹೆಬ್ಬೂರು ಸಾಮಾನ್ಯ

4. ಸಿ.ಟಿ.ಕೆರೆ ಎಸ್​ಸಿ(ಮ)

5. ಹೊನ್ನುಡಿಕೆ ಎಸ್​ಸಿ

6. ಊರುಕೆರೆ ಎಸ್​ಟಿ(ಮ)

7. ಊರ್ಡಿಗೆರೆ ಎಸ್​ಸಿ

8. ಹೆಗ್ಗೆರೆ ಬಿಸಿಎಂಎ

ಗುಬ್ಬಿ ತಾಲೂಕು

1.ಸಿ.ಎಸ್​.ಪುರ ಸಾಮಾನ್ಯ

2. ಚೇಳೂರು ಬಿಸಿಎಂಎ(ಮ)

3.ಗುಬ್ಬಿ ಗ್ರಾಮೀಣ ಸಾಮಾನ್ಯ

4.ಹಾಗಲವಾಡಿ ಸಾಮಾನ್ಯ

5.ಕಡಬ ಸಾಮಾನ್ಯ(ಮ)

6.ನಿಟ್ಟೂರು ಸಾಮಾನ್ಯ(ಮ)

7. ಅಳಿಲುಟ್ಟ ಎಸ್​ಸಿ(ಮ)

ಚಿಕ್ಕನಾಯಕನಹಳ್ಳಿ

1.ಯಳನಡು ಎಸ್​ಸಿ(ಮ)

2.ಹೊಯ್ಸಳಕಟ್ಟೆ ಬಿಸಿಎಂ(ಎ)

3.ಕಂದಿಕೆರೆ ಪರಿಶಿಷ್ಟ ಪಂಗಡ

4. ಹಂದನಕೆರೆ ಸಾಮಾನ್ಯ(ಮ)

5. ಶೆಟ್ಟಿಕೆರೆ ಸಾಮಾನ್ಯ (ಮ)

ಕುಣಿಗಲ್​ ತಾಲೂಕು

1. ಕೊತ್ತಗೆರೆ ಸಾಮಾನ್ಯ(ಮ)

2.ಹುತ್ರಿದುರ್ಗ ಎಸ್​ಸಿ

3.ಹುಲಿಯೂರುದುರ್ಗ ಸಾಮಾನ್ಯ(ಮ)

4.ಅಮೃತೂರು ಎಸ್​ಸಿ

5.ಯಡಿಯೂರು ಬಿಸಿಎಂಎ

ಕೊರಟಗೆರೆ

1. ಕಸಬ ಎಸ್ಸಿ (ಮ)

2. ಹೊಳವನಹಳ್ಳಿ ಬಿಸಿಎಂಎ(ಮ)

3. ಹೂಲೀಕುಂಟೆ ಎಸ್​ಸಿ(ಮ)

4. ಕೋಳಾಲ ಬಿಸಿಎಂಬಿ(ಮ)

5. ತೋವಿನಕೆರೆ ಸಾಮಾನ್ಯ

ಶಿರಾ

1. ಹುಲಿಕುಂಟೆ ಎಸ್​ಸಿ

2. ನಾದೂರು ಬಿಸಿಎಂಎ(ಮ)

3. ತಾವರೆಕೆರೆ ಎಸ್​ಟಿ(ಮ)

4. ಮದಲೂರು ಸಾಮಾನ್ಯ

5. ಚಿಕ್ಕನಹಳ್ಳಿ ಸಾಮಾನ್ಯ

6. ಕಳ್ಳಂಬೆಳ್ಳ ಸಾಮಾನ್ಯ(ಮ)

7.ಬುಕ್ಕಾಪಟ್ಟಣ ಸಾಮಾನ್ಯ(ಮ)

ತಿಪಟೂರು ತಾಲೂಕು

1. ಹೊನ್ನವಳ್ಳಿ ಎಸ್​ಸಿ

2. ಹುಚ್ಚಗೊಂಡನಹಳ್ಳಿ ಸಾಮಾನ್ಯ

3. ಕಿಬ್ಬನಹಳ್ಳಿ ಸಾಮಾನ್ಯ(ಮ)

4. ರಂಗಾಪುರ ಬಿಸಿಎಂಎ(ಮ)

5. ನೊಣವಿನಕೆರೆ ಸಾಮಾನ್ಯ(ಮ)

ಮಧುಗಿರಿ

1. ದೊಡ್ಡೇರಿ ಸಾಮಾನ್ಯ (ಮ)

2. ಇಟಕದಿಬ್ಬನಹಳ್ಳಿ ಸಾಮಾನ್ಯ

3. ಮಿಡಿಗೇಶಿ ಎಸ್​ಸಿ

4. ಕೊಡಿಗೇನಹಳ್ಳಿ ಎಸ್​ಟಿ(ಮ)

5.ಪುರವರ ಸಾಮಾನ್ಯ(ಮ)

6.ಸಿದ್ಧಾಪುರ ಸಾಮಾನ್ಯ

ಪಾವಗಡ

1. ಬ್ಯಾಡನೂರು ಬಿಸಿಎಂಎ(ಮ)

2. ಕೋಟಗುಡ್ಡ ಎಸ್​ಟಿ

3. ಮಂಗಳವಾಡ ಬಿಸಿಎಂಬಿ

4. ನಾಗಲಮಡಿಕೆ ಸಾಮಾನ್ಯ

5. ವೆಂಕಟಾಪುರ ಸಾಮಾನ್ಯ(ಮ)

6. ವೈ.ಎನ್​.ಹೊಸಕೋಟೆ ಎಸ್​ಸಿ (ಮ)

ತುರುವೇಕೆರೆ ತಾಲೂಕು

1. ಬಾಣಸಂದ್ರ ಎಸ್​ಸಿ(ಮ)

2. ದೆಬ್ಬೇಟ್ಟ ಸಾಮಾನ್ಯ

3. ದಂಡಿನಶಿವರ ಸಾಮಾನ್ಯ(ಮ)

4. ಮಾಯಸಂದ್ರ ಬಿಸಿಎಂಎ