ತುಮಕೂರಿನ ಶಿವಕುಮಾರ ಸ್ವಾಮೀಜಿ ಸರ್ಕಲ್​ ಬಳಿ ನಿರ್ಮಿಸಿರುವ ಔಟ್​ಡೋರ್​ ಎಲ್​ಇಡಿ ಡಿಸ್​ಪ್ಲೇ ಬೋರ್ಡ್​ ಲೋಕಾರ್ಪಣೆಗೆ ಸಿದ್ಧತೆ.  
ತುಮಕೂರು

ಎಸ್​ ಎಸ್​ ಸ್ಕ್ವೇರ್​ ಲೋಕಾರ್ಪಣೆ

6.73 ಕೋ.ರೂ., ವೆಚ್ಚದ ಎಲ್​ ಇಡಿ ಡಿಸ್​ಪ್ಲೇ ಬೋಡ್​

ತುಮಕೂರು: ದೇಶದ ಮಹಾನಗರಗಳಲ್ಲೇ ಪ್ರಪ್ರಥಮ ಎನಿಸಿರುವ "ಔಟ್​ಡೋರ್​ ಎಲ್​ಇಡಿ ಡಿಸ್​ಪ್ಲೇ ಬೋರ್ಡ್​' ಲೋಕಾರ್ಪಣೆಗೆ ತುಮಕೂರು ನಗರ ಸಜ್ಜಾಗಿದೆ. ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಹೃದಯಭಾಗ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ 6.73 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಿರುವ ಎಲ್​ಇಡಿ ಡಿಸ್​ಪ್ಲೇ ಬೋರ್ಡ್​ನ್ನು ನ.14 ರಂದು ಸಂಜೆ 6ಕ್ಕೆ ಡಿಸಿಎಂ ಡಾ.ಜಿ.ಪರಮೇಶ್ವರ ಉದ್ಘಾಟಿಸುವರು.

ಮಾಜಿ ಪ್ರಧಾನಿ ಪಂಡಿತ್​ ಜವಹರ ಲಾಲ್​ ನೆಹರು ಜನ್ಮದಿನವಾದ ಮಕ್ಕಳ ದಿನಾಚರಣೆ (ನ.14)ಯಂದು "ಎಸ್​ಎಸ್​ ಸ್ಕ್ವೇರ್​!' ಉದ್ಘಾಟನೆ ಸಮಾರಂಭಕ್ಕೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ. ಈ ಮಧ್ಯೆ "ನ್ಯೂಯಾರ್ಕ್​ ಟೈಮ್ಸ್​ ಸ್ಕ್ವೇರ್​' ಮಾದರಿಯ ಈ ಯೋಜನೆ "ಹೆಸರು' ದೊಡ್ಡಮಟ್ಟದ ವಿವಾದ ಸೃಷ್ಟಿಸಿದ ಹಿನ್ನೆಲೆ ಸಿದ್ದಗಂಗಾ ಮಠದ ಮಕ್ಕಳ ಸಮ್ಮುಖದಲ್ಲೇ ಸಮಾರಂಭವನ್ನು ಆಯೋಜಿಸಿ ಕಳೆದ 2 ತಿಂಗಳಿನಿಂದ ಎದ್ದಿರುವ ಎಲ್ಲಾ ಗೊಂದಲಕ್ಕೆ ಇತಿಶ್ರೀ ಹಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ.

7 ಕೋಟಿ ವೆಚ್ಚದ ಯೋಜನೆ: ದೇಶದಲ್ಲೇ ಪ್ರಪ್ರಥಮ ಎನಿಸಿದ "ಔಟ್​ಡೋರ್​ ಎಲ್​ಇಡಿ ಡಿಸ್​ಪ್ಲೇ ಬೋರ್ಡ್​'ಅಳವಡಿಸುವ ಯೋಜನೆಯನ್ನು 6.73 ಕೋಟಿ ರೂ., ವೆಚ್ಚದ ಈ ಯೋಜನೆಯನ್ನು ಸ್ಯಾಮ್ಸನ್​ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟ್ರಾನ್ಸ್​ ಾಮರ್​ಮೇಷನ್​ ಪೆವೇಟ್​ ಲಿಮಿಟೆಡ್​ ವಹಿಸಿಕೊಂಡಿದ್ದು ಇದರ ನಿರ್ಮಾಣ, ನಿರ್ವಹಣೆ, ಕಾರ್ಯಾಚರಣೆ ಹೊಣೆಯನ್ನು ಹೊತ್ತಿದೆ. ಎಲ್ಲಾ ಪರೀಾರ್ಥ ಚಾಲನೆ ಬಳಿಕ ಎಲ್​ಇಡಿ ಡಿಸ್​ಪ್ಲೇ ಬೋರ್ಡ್​ ಅನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ.

710 ಅಡಿ ಬೃಹತ್​ ಎಲ್​ಇಡಿ ಪರದೆಯನ್ನು 20 ಅಡಿ ಎತ್ತರದ ಬೃಹತ್​ ಪೋಲ್​ಗಳನ್ನು ಅಳವಡಿಸಿ ಅಳವಡಿಸಲಾಗಿದೆ. 20 ಅಡಿ ಎತ್ತರದ ಬೃಹತ್​ ಎಲೆಕ್ಟ್ರಾನಿಕ್​ ಡಿಸ್​ ಪ್ಲೇ ಬೋರ್ಡ್​ (ಎಲ್​ಇಡಿ) ಐಪಿ68 ವಾಟರ್​್ರೂಪ್​ ಎಲ್​ಇಡಿ ಇದಾಗಿದೆ. ಎಲ್ಲ ದಿಕ್ಕುಗಳಿಗೆ ಕಾಣುವಂತೆ ಈ ಎಲ್​ಇಡಿ ಪರದೆ ಇದ್ದು ಸರ್ಕಾರಿ ಯೋಜನೆಗಳು, ಪ್ರವಾಸಿ ಸ್ಥಳಗಳು ಹೀಗೆ ಜಾಹೀರಾತುಗಳನ್ನು ಡಿಸ್​ಪ್ಲೇ ಬೋರ್ಡ್​ನಲ್ಲಿ ಪ್ರದರ್ಶಿಸಲಾಗುವುದು. ಇದು ಪಾಲಿಕೆಗೆ ಭವಿಷ್ಯದಲ್ಲಿ ಆದಾಯದ ಮೂಲವಾಗಲಿದೆ.

ರಂಜಿಸಲಿರುವ ನವೀನ್​ ಸಜ್ಜು, ಚಿಕ್ಕಣ್ಣ

ಎಲ್​ಇಡಿ ಡಿಸ್​ಪ್ಲೋ ಬೋರ್ಡ್​ ಉದ್ಘಾಟನೆ ಸಮಾರಂಭವನ್ನು ಒಂದು "ಇವೆಂಟ್​' ರೀತಿಯಲ್ಲಿ ಆಯೋಜಿಸುತ್ತಿರುವ ಜಿಲ್ಲಾಡಳಿತ ಜನಾಕರ್ಷಣೆಗೆ ಹಾಸ್ಯನಟ ಚಿಕ್ಕಣ್ಣ, ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕ ನವೀನ್​ ಸಜ್ಜು ಆಹ್ವಾನಿಸಿ ಸಮಾರಂಭವನ್ನು ವರ್ಣಮಯಗೊಳಿಸಲು ಸಿದ್ಧತೆ ಮಾಡಿಕೊಂಡಿದೆ. ಈ ಇವೆಂಟ್​ಗೆ ಜನರನ್ನು ಸೆಳೆಯಲು ವಿಐಪಿ ಪಾಸ್​ಗಳನ್ನು ವಿತರಿಸುವ ಐಡಿಯಾ ಜಿಲ್ಲಾಡಳಿತ ಮಾಡಿರುವುದು ಗಮನಾರ್ಹವೆನಿಸಿದೆ.

ಪಾಲಿಕೆಗೆ ಆದಾಯದ ಮೂಲ

6.73 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಿರುವ ಈ ಎಲ್​ಇಡಿ ಪರದೆಯಲ್ಲಿ ಮುಖ್ಯವಾಗಿ ಪಾಲಿಕೆಗೆ ಆದಾಯ ತರುವ ಖಾಸಗಿ ಜಾಹೀರಾತುಗಳು ಹಾಗೂ ಸರ್ಕಾರದ ಕಾರ್ಯಕ್ರಮ, ಯೋಜನೆಗಳ ಮಾಹಿತಿಯನ್ನು ಬಿತ್ತರಿಸಲಾಗುವುದು. ಇದು ಪಾಲಿಕೆಗೆ ಆದಾಯ ಮೂಲವಾಗಿದ್ದು, ಈ ಜಾಹೀರಾತು ಆದಾಯವನ್ನು ನಗರದ ಇತರೆ ಮೂಲಸೌಲಭ್ಯ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ.

ಶ್ರೀಮಠದ ಮಕ್ಕಳ ಸಮ್ಮುಖ

ಮಕ್ಕಳ ದಿನಾಚರಣೆಯಂದು ಈ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸುತ್ತಿರುವುದು ಮತ್ತೊಂದು ವಿಶೇಷ. ಈ ಯೋಜನೆಯ "ಹೆಸರು' ಆರಂಭದಿಂದಲೇ ವಿವಾದ ಎಬ್ಬಿಸಿತ್ತು. ಹಾಗಾಗಿ, ಸಿದ್ದಗಂಗಾ ಮಠದ ಮಕ್ಕಳ ಸಮ್ಮುಖದಲ್ಲೇ ಉದ್ಘಾಟನೆ ನೆರವೇರಿಸಬೇಕೆಂಬ ಹಂಬಲ ಡಿಸಿಎಂ ಡಾ.ಜಿ.ಪರಮೇಶ್ವರ ಅವರದ್ದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.

ಔಟ್​ಡೋರ್​ ಎಲ್​ಇಡಿ ಡಿಸ್​ಪ್ಲೇ ಬೋರ್ಡ್​ ಇದು ನಗರದ "ಐಕಾನ್​' ಆಗಲಿದೆ. ಡಿಸ್​ಪ್ಲೇ ಬೋರ್ಡ್​ನಲ್ಲಿ ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಪ್ರಮುಖ ಸ್ಥಳಗಳ ಮಾಹಿತಿ, ಸರ್ಕಾರದ ಜನಪರ ಯೋಜನೆಗಳನ್ನು ಬಿತ್ತರಿಸಲಾಗುವುದು. ಅಲ್ಲದೆ, ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಕುರಿತ ಮಾಹಿತಿ, ಸಂಚಾರ ನಿಯಮಗಳು ಹಾಗೂ ರಸ್ತೆ ಸುರಕ್ಷತಾ ಸಂದೇಶಗಳನ್ನು ಸಹ ಹಾಕಲಾಗುವುದು. ಡಿಸ್​ಪ್ಲೇ ಬೋರ್ಡ್​ನಲ್ಲಿ ಆದಾಯ ತರುವ ಜಾಹೀರಾತುಗಳನ್ನು ಪ್ರದರ್ಶಿಸಲಾಗುವುದು.

ಬಿ.ಶುಭ, ಮಹಾನಗರ ಪಾಲಿಕೆ ಅಯುಕ್ತೆ

ಬಿಸಿಎಂ ಎಲ್​ಇಡಿ ಸ್ಕ್ರೀನ್​ ಅನಾನವರಣ

ಹಿಂದುಳಿದ ವರ್ಗದ ಇಲಾಖೆಯ ಯೋಜನೆಗಳನ್ನು ಜನರಿಗೆ, ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ 1.25 ಕೋ.ರೂ., ವೆಚ್ಚದಲ್ಲಿ ತುಮಕೂರು ವಿಶ್ವವಿದ್ಯಾಲಯ ಮುಂಭಾಗದ ಸ್ಕೆ$ವಾಕ್​ ಬಳಿ ನಿರ್ಮಿಸಿರುವ 20 ಬೈ 11 ಅಡಿ ಎಲ್​ಇಡಿ ಸ್ಕ್ರೀನ್​ ಅನ್ನು ಸಹ ಈ ಸಂದರ್ಭದಲ್ಲೇ ಅನಾವರಣಗೊಳಿಸಲಾಗುತ್ತಿದೆ.