ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಂಡ ಕೆ.ವಿ.ಅಶೋಕ್​ರನ್ನು ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು.  
ತುಮಕೂರು

ಅಶೋಕ್​ಗೆ ಹೃದಯಸ್ಪರ್ಶಿ ಬಿಳ್ಳೋಡುಗೆ

ಎಎಸ್ಪಿಗೆ ಅಧಿಕಾರ ಹಸ್ತಾಂತರ

ತುಮಕೂರು: ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಂಡಿರುವ ಕೆ.ವಿ.ಅಶೋಕ್​ಗೆ ಗುರುವಾರ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ಕಳೆದ 3 ವರ್ಷ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ್ದ ಅಶೋಕ್​ಗೆ ಜಿಲ್ಲೆಯ ಹಿರಿಯ ಪೊಲೀಸ್​ ಅಧಿಕಾರಿಗಳು ಹಾಗೂ ಎಸ್ಪಿ ಕಚೇರಿ ಸಿಬ್ಬಂದಿ ಗೌರವಪೂರ್ವಕವಾಗಿ ಬೀಳ್ಕೋಟ್ಟರು.

ಹೂಮಳೆ: ಎಸ್ಪಿ ಅಶೋಕ್​ ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನೆಲೆ ಎಎಸ್ಪಿ ಸಿ.ಗೋಪಾಲ್​ಗೆ ಅಧಿಕಾರ ಹಸ್ತಾಂತರವಹಿಸಿಕೊಟ್ಟ ಬಳಿಕ ಕಚೇರಿಯಿಂದ ಹೊರಬರುತ್ತಿದ್ದಂತೆ ಹೊರಭಾಗದಲ್ಲಿ ಶುಭಕೋರಲು ಸಾಲಿನಲ್ಲಿ ನಿಂತಿದ್ದ ಪೊಲೀಸ್​ ಅಧಿಕಾರಿಗಳು ಹೂಮಳೆ ಸುರಿಸಿದರು. ಈ ಗೌರವ ವಿದಾಯದಿಂದ ಅಕ್ಷರಷ@ ಅಶೋಕ್​ ಕಣ್ಣಾಲಿಗಳು ತೇವಗೊಂಡಿದ್ದವು. ಕಚೇರಿ ಮೆಟ್ಟಿಲು ಮೇಲೆ ನಿಂತು ಎಲ್ಲರೊಂದಿಗೆ ೋಟೋಗೆ ಪೋಸ್​ ಕೊಟ್ಟ ಹೊರಟ ಅಶೋಕ್​ಗೆ ಪೊಲೀಸ್​ ಸಿಬ್ಬಂದಿಯಿಂದ ಅಚ್ಚರಿ ಕಾದಿತ್ತು.

ತೇರಿನಂತೆ ಎಳೆದ ಸಿಬ್ಬಂದಿ: ಅಶೋಕ್​ ಅವರನ್ನು ಉತ್ಸವ ಮೂರ್ತಿಯನ್ನಾಗಿಸಿ ತೆರೆದ ಜೀಪಿಗೆ ಹಗ್ಗ ಕಟ್ಟಿ ಎಸ್ಪಿ ಕಚೇರಿ ಆವರಣದಿಂದ ಬಿಎಚ್​ ರಸ್ತೆವರೆಗೆ ತೇರು ಎಳೆದಂತೆ ಪೊಲೀಸ್​ ಸಿಬ್ಬಂದಿ ಜೀಪನ್ನು ಎಳೆದಿದ್ದು ವಿಶೇಷವಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.