ಕರ್ನಾಟಕ ರಾಜ್ಯ Ranking ಬ್ಯಾಡ್ಮಿಂಟನ್​ ಟೂರ್ನಿ ಬಗ್ಗೆ ಕೆಬಿಎ ಅಧ್ಯಕ್ಷ ಕುಮಾರ್​ ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜಿ.ಬಿ.ಜ್ಯೋತಿಗಣೇಶ್​, ಪಿ.ಪ್ರವಿಣ್​, ಮುರಳಿ ಮತ್ತಿತರರು ಇದ್ದರು.  
ತುಮಕೂರು

ಜು.27 ರಿಂದ ರಾಜ್ಯ Ranking​ ಬ್ಯಾಡ್ಮಿಂಟನ್​

ಪ್ರಮುಖ ಮುಖ್ಯಾಂಶಗಳು

  • ಕೆಬಿಎ 75ನೇ ವರ್ಷಾಚರಣೆ
  • 13 ಹಾಗೂ 11 ವಯೋಮಾನದೊಳಗಿನ ಟೂರ್ನಿ
  • ಕೆಬಿಎ ಅಧ್ಯಕ್ಷ ಕುಮಾರ್​ ಬಂಗಾರಪ್ಪ ಮಾಹಿತಿ
ತುಮಕೂರು: ಕರ್ನಾಟಕ ಬ್ಯಾಡ್ಮಿಂಟನ್​ ಸಂಸ್ಥೆ (ಕೆಬಿಎ)ಗೆ 75 ವರ್ಷಾಚರಣೆ ಹಿನ್ನೆಲೆ ತುಮಕೂರಿನಲ್ಲಿ ಯೋನೆಕ್ಸ್​- ಸನ್​ರೈಸ್​ ಕಿರಿಯರ ವಿಭಾಗದ ರಾಜ್ಯ Ranking​ ಬ್ಯಾಡ್ಮಿಂಟನ್​ ಟೂರ್ನಿ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ Ranking​ ಬ್ಯಾಡ್ಮಿಂಟನ್​ (13 ಹಾಗೂ 11 ವಯೋಮಾನ ಒಳಗಿನ) ಟೂರ್ನಿ ಜು. 27 ರಿಂದ ಆಗಸ್ಟ್​ 1 ರವರೆಗೆ ನಡೆಯಲಿದ್ದು ಕಿರಿಯರ ವಿಭಾಗದ ಅತಿದೊಡ್ಡ ಟೂರ್ನಿಯನ್ನು ಮೊಟ್ಟ ಮೊದಲ ಬಾರಿ ತುಮಕೂರಿನಲ್ಲಿ ಆಯೋಜಿಸುತ್ತಿರುವುದು ವಿಶೇಷವೆನಿಸಿದೆ.
ಕಿರಿಯರ ವಿಭಾಗದ 13 ಹಾಗೂ 11 ವಯೋಮಾನದ ಬಾಲಕ, ಬಾಲಕಿಯರ ರಾಜ್ಯ Ranking ​ ಟೂರ್ನಿಯಲ್ಲಿ 600ಕ್ಕು ಹೆಚ್ಚು ಆಟಗಾರರು ಭಾಗವಹಿಸಲಿದ್ದು ಚಾಂಪಿಯನ್​ಶಿಪ್​ ಜತೆಗೆ ಶ್ರೇಯಾಂಕ ಪಡೆಯಲು ಸೆಣಸಲಿದ್ದಾರೆ ಎಂದು ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಬ್ಯಾಡ್ಮಿಂಟನ್​ ಅಸೋಸಿಯೇಷನ್​ (ಕೆಬಿಎ) ಅಧ್ಯಕ್ಷ ಕುಮಾರ್​ ಬಂಗಾರಪ್ಪ ತಿಳಿಸಿದರು.
ತುಮಕೂರು ಬ್ಯಾಡ್ಮಿಂಟನ್​ ಅಕಾಡೆಮಿ (ಟಿಬಿಎ)ಯಲ್ಲಿ ಪಂದ್ಯಗಳು ನಡೆಯಲಿದ್ದು 27ರಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ ಟೂರ್ನಿಗೆ ಚಾಲನೆ ನೀಡುವರು. ಕೇಂದ್ರ ಸಚಿವ ವಿ.ಸೋಮಣ್ಣ, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಸೇರಿದಂತೆ ಗಣ್ಯರು ಭಾಗವಹಿಸುವರು ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಪ್ರತಿಭಾವಂತ ಕಿರಿಯ ಬ್ಯಾಡ್ಮಿಂಟನ್​ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, 11 ಹಾಗೂ 13 ವಯೋಮಾನದ ವಿಭಾಗಗಳಲ್ಲಿ ರಾಜ್ಯದ ಪ್ರಮುಖ ಬ್ಯಾಡ್ಮಿಂಟನ್​ ಟೂರ್ನಿ ಇದಾಗಲಿದೆ. ಕ್ರಿಕೆಟ್​ ನಂತರ ಬ್ಯಾಡ್ಮಿಂಟ್​ ಹೆಚ್ಚು ಜನಪ್ರಿಯ ಆಟವಾಗಿದೆ. ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು ನಾಲ್ಕೂವರೆ ಸಾವಿರ ಜನ ಬ್ಯಾಡ್ಮಿಂಟನ್​ ಅಭ್ಯಾಸ ಮಾಡುತ್ತಿದ್ದಾರೆ. ಹೊಸ ಪ್ರತಿಭೆಗಳು ಹೊರಹೊಮ್ಮಬೇಕು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು. ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಎಲ್ಲಾ ಜಿಲ್ಲೆಗಳಲ್ಲೂ ಸುಸಜ್ಜಿತ ಕ್ರೀಡಾಂಗಣ ನಿಮಾರ್ಣ ಮಾಡಲು ಜಮೀನು ನೀಡಬೇಕು ಎಂದು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯ ಬ್ಯಾಂಡ್ಮಿಂಟನ್​ ಅಸೋಸಿಯೇಷನ್​ 1951ರಲ್ಲಿ ಮೈಸೂರು ಮಹಾರಾಜರ ನೇತೃತ್ವದಲ್ಲಿ ಆರಂಭವಾಯಿತು. ಇದರ 75ನೇ ವರ್ಷದ ಅಂಗವಾಗಿ ಎಲ್ಲಾ ಜಿಲ್ಲೆಗಳಲ್ಲೂ ಬ್ಯಾಡ್ಮಿಂಟನ್​ ಚಟುವಟಿಕೆ ಹಮ್ಮಿಕೊಂಡು ಸ್ಥಳಿಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಮಾರ್​ ಬಂಗಾರಪ್ಪ ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್​ ಮಾತನಾಡಿ, ರಾಜ್ಯಮಟ್ಟದ ಪ್ರತಿಷ್ಠಿತ ಬ್ಯಾಡ್ಮಿಂಟನ್​ ಟೂರ್ನಿ ತುಮಕೂರು ನಗರದಲ್ಲಿ ನಡೆಯುತ್ತಿರುವುದು ಅಭಿಮಾನದ ವಿಚಾರ. ನಗರದ ಎಲ್ಲಾ ಕ್ರೀಡಾಪಟುಗಳು ಬೆಂಬಲ ನೀಡಿ ಸಹಕರಿಸಬೇಕು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯಾವಳಿ ವೀಕ್ಷಿಸಿ ಸಂಭ್ರಮಿಸಬೇಕು ಎಂದು ಮನವಿ ಮಾಡಿದರು.
ತುಮಕೂರು ಬ್ಯಾಡ್ಮಿಂಟನ್​ ಅಕಾಡೆಮಿ ಅಧ್ಯಕ್ಷ ಪಿ. ಪ್ರವಿಣ್​, ರಾಜ್ಯ ಬ್ಯಾಡ್ಮಿಂಟನ್​ ಅಸೋಸಿಯೇಷನ್​ ಗೌರವ ಕಾರ್ಯದರ್ಶಿ ವಿ. ಮುರಳಿಧರ್​, ಸದಸ್ಯರಾದ ಸುಧೀರ್​, ಹರೀಶ್​ಕುಮಾರ್​, ಜಿಲ್ಲಾ ಅಮೆಚೂರ್​ ಅಥ್ಲೆಟಿಕ್​ ಅಸೋಸಿಯೇಷನ್​ ಕಾರ್ಯದರ್ಶಿ ಎ.ಎನ್​. ಪ್ರಭಾಕರ್​ ಮೊದಲಾದವರು