- ವಾರದ 6 ದಿನವೂ ಮೆಮು ರೈಲು ಸಂಚಾರ
- ರೈಲ್ವೆ ಸಚಿವ ವಿ.ಸೋಮಣ್ಣ ಪೋಸ್ಟ್
- ಮಧ್ಯಾಹ್ನ 2.15ಕ್ಕೆ ಅರಸೀಕೆರೆಯಿಂದ ಹೊರಡಲಿದೆ
ತುಮಕೂರು: ಬೆಂಗಳೂರು-ಅರಸೀಕೆರೆ ಮಾರ್ಗದ ರೈಲ್ವೆ ಪ್ರಯಾಣಿಕರ ಬಹು ದಿನಗಳ ಬೇಡಿಕೆಯಾಗಿದ್ದ ನೂತನ ಮೆಮು ರೈಲ್ವೆ ಸಂಚಾರಕ್ಕೆ ಅನುಮೋದನೆ ನೀಡಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಪೋಸ್ಟ್ ಮಾಡಿದ್ದಾರೆ.
ಯಲಹಂಕ-ಅರಸೀಕೆರೆ ಮೆಮು ರೈಲು(ರೈ.ಸಂ 66505) ಬೆಳಗ್ಗೆ 6.45ಕ್ಕೆ ಯಲಹಂಕದಿಂದ ಹೊರಡುವ ರೈಲು ಯಶವಂತಪುರ, ತುಮಕೂರು (ಬೆಳಗ್ಗೆ 8:58ಕ್ಕೆ ) ಮಾರ್ಗವಾಗಿ ಅರಸೀಕೆರೆಗೆ ಬೆಳಗ್ಗೆ 11ಕ್ಕೆ ತಲುಪಲಿದೆ. ಅರಸೀಕೆರೆ-ಯಲಹಂಕ ಮೆಮು ರೈಲು (ರೈ.ಸಂ 66506)ಅರಸೀಕೆರೆಯಿಂದ ಮಧ್ಯಾಹ್ನ 2.15ಕ್ಕೆ ಹೊರಡುವ ರೈಲು, ತುಮಕೂರು (ಸಂಜೆ 4:38ಕ್ಕೆ) ಮಾರ್ಗವಾಗಿ ಯಲಹಂಕಕ್ಕೆ ಸಂಜೆ 7:15ಕ್ಕೆ ತಲುಪಲಿದೆ ಎಂದು ತಿಳಿಸಿದ್ದಾರೆ.
ಭಾನುವಾರದ ಹೊರತಾಗಿ ವಾರದ 6 ದಿನವೂ ಈ ಮೆಮು ರೈಲು ಸಂಚರಿಸಲಿದ್ದು ರೈಲ್ವೆ ಪ್ರಯಾಣಿಕರು ಈ ನೂತನ ಮೆಮು ರೈಲಿನ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸೋಮಣ್ಣ ಕೋರಿದ್ದಾರೆ.