Work hard for the survival of Sanatan Sansati
ಬರಗೂರು: ಜಾತ್ರೆ ಮತ್ತು ಧಾರ್ಮಿಕ ಆರಾಧನೆ ಜತೆಗೆ ಸನಾತನ ಸಂಸತಿ, ಪರಂಪರೆಯನ್ನು ಮರೆಯದೆ ದೇವರು, ಧರ್ಮಗಳನ್ನು ಬಿಡಬಾರದು ಎಂದು ಕೋಡಿಹಳ್ಳಿ ಆದಿ ಜಾಂಬವ ಬೃಹನ್ಮಠದ ಶ್ರೀ ಷಡಕ್ಷರ ಮುನಿ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕು ಕೊಟ್ಟೆ ಗ್ರಾಮದಲ್ಲಿ ಮಂಗಳವಾರ ಶಿವಶರಣ ಹರಳಯ್ಯ ಮತ್ತು ದಿವಂಗತ ಪಿ.ಆರ್.ರಮೇಶ್ ವೇದಿಕೆಯಲ್ಲಿ ಶ್ರೀಲಕ್ಷಿ$್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜಾತ್ರಾ ಮಹೋತ್ಸವಗಳು ಐಕ್ಯತೆ ಮತ್ತು ಸಮಗ್ರತೆ ಕಾಪಾಡಕೊಳ್ಳಬೇಕು, ಸಂಭ್ರಮ ಎಷ್ಟು ಮುಖ್ಯವೋ ಹಾಗೆ ಸ್ನೇಹ ಸಾಮರಸ್ಯ ಇಟ್ಟುಕೊಂಡರೆ ಪ್ರೀತಿ ವಿಶ್ವಾಸಗಳು ಗಟ್ಟಿಯಾಗಿರುತ್ತವೆ. ಪ್ರೀತಿ ಇರೋಕಡೆ ದೇವರು ನೆಲೆಸಿರುತ್ತೆ ಎಂದರು. ನಮ್ಮ ಸಮುದಾಯಕ್ಕೆ ಒಳಮೀಸಲಾತಿ ನೀಡಿ. ಇದರಿಂದ ಧಾರ್ಮಿಕ, ಆರ್ಥಿಕ, ಶೈಕ್ಷಣಿಕವಾಗಿ ಮೇಲೆ ಬರಲು ಸಾಧ್ಯವಾಗುತ್ತದೆ ಎಂದರು.