ಮುಂದಿನ ಚುನಾವಣೆಗೆ ಗುಬ್ಬಿ ಕ್ಷೇತ್ರದಿಂದಲೇ ಸ್ಪರ್ಧೆ: ವಿಜಯೇಂದ್ರ 
ತುಮಕೂರು

ಮುಂದಿನ ಚುನಾವಣೆಗೆ ಗುಬ್ಬಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವೆ ಎಂದ ವಿಜಯೇಂದ್ರ!...ಎಚ್ಚರಿಕೆ ನೀಡಿದ್ದು ಯಾರಿಗೆ..? | BY Vijayendra

ತುಮಕೂರು: ಜಿಲ್ಲೆಯ ಗುಬ್ಬಿ ಕ್ಷೇತ್ರದಿಂದ‌ ಸ್ವತಃ ತಾವೇ ಸ್ಪರ್ಧೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಘೋಷಿಸಿದ್ದಾರೆ.

ತುಮಕೂರು: ಜಿಲ್ಲೆಯ ಗುಬ್ಬಿ ಕ್ಷೇತ್ರದಿಂದ‌ ಸ್ವತಃ ತಾವೇ ಸ್ಪರ್ಧೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಘೋಷಿಸಿದ್ದಾರೆ.

ಇಂದು ಗುಬ್ಬಿ ತಾಲೂಕಿನ ಚೆಳೂರಿನಲ್ಲಿ ಬೂತ್ ಅಭಿಯಾನ ನಡೆಯುತ್ತಿದ್ದ ವೇಳೆ ಬಿಜೆಪಿಯ ಎರಡು ಬಣಗಳ ನಡುವೆ ವಾಗ್ವಾದ ನಡೆದಿದೆ. ಈ ಬಗ್ಗೆ ಬೇಸರದಿಂದಲೇ ಪ್ರತಿಕ್ರಿಯಿಸಿದ ಬಿ ವೈ ವಿಜಯೇಂದ್ರ, ಮುಂದಿನ ದಿನಗಳಲ್ಲಿ ಸ್ಥಳೀಯ ನಾಯಕರ ನಡುವಿನ ಭಿನ್ನಾಭಿಪ್ರಾಯ ತಿಳಿಯಾಗದಿದ್ದರೆ ತಾವೇ ಇಲ್ಲಿಂದ ಸ್ಪರ್ಧಿಸುವುದಾಗಿ ಘೋಷಿಸಿದರು. ಈ ಹೇಳಿಕೆ ಈಗ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ ಡಿ ದಿಲೀಪ್ ಕುಮಾರ್ ಸ್ಪರ್ಧಿಸಿದ್ದರು. ಸದ್ಯ ಇನ್ನೋರ್ವ ಟಿಕೆಟ್ ಆಕಾಂಕ್ಷಿಯಾಗಿ ಗ್ಯಾಸ್ ಚಂದ್ರಶೇಖರ್ ಬಾಬು ಇದ್ದಾರೆ. ಗ್ಯಾಸ್ ಬಾಬು ಭಾಷಣ ಮಾಡುವಾಗ ದಿಲೀಪ್ ಕುಮಾರ್ ಹೆಸರನ್ನು ಹೇಳದಿರುವುದೇ ಗಲಾಟೆಗೆ ಕಾರಣವಾಗಿದ್ದು, ತಮ್ಮ ನಾಯಕನ ಹೆಸರು ಹೇಳುವಂತೆ ಬೆಂಬಲಿಗರು ಬಾಬು ಅವರಿಗೆ ತಾಕೀತು ಮಾಡಿದರು. ಇಷ್ಟಕ್ಕೆ ಸುಮ್ಮನಾಗದೆ ನೀನು ಭಾಷಣ ಮಾಡಬಾರದು ಎಂದು ರೊಚ್ಚಿಗೆದ್ದು ಭಾಷಣಕ್ಕೆ ಅಡ್ಡಿಪಡಿಸಿದರು. ಇದರಿಂದ ಕೋಪಗೊಂಡು ವೇದಿಕೆಯಿಂದ ಕೆಳಕ್ಕೆ ಬಂದ ಬಾಬು, ದಿಲೀಪ್ ಬೆಂಬಲಿಗರ ನಡುವೆ ವಾಗ್ವಾದಕ್ಕಿಳಿದರು ಎಂದು ತಿಳಿದುಬಂದಿದೆ. ಈ‌ ವೇಳೆ ಮಾತಿನ ಚಕಮಕಿಗೆ ಮಧ್ಯಪ್ರವೇಶ ಮಾಡಿದ ಬಿ ವೈವಿಜಯೇಂದ್ರ ಅವರು ವಾತಾವರಣವನ್ನು ತಿಳಿಗೊಳಿಸಿದರು.

ಘಟನೆಯ ಬಗ್ಗೆ ವಿಜಯೇಂದ್ರ ಎಚ್ಚರಿಕೆಯ ಮಾತುಗಳು!

ತಮ್ಮ ಸಮ್ಮುಖದಲ್ಲೇ ನಡೆದ ಈ ಘಟನೆಯಿಂದ ಬೆಸತ್ತ ವಿಜಯೇಂದ್ರ ಅವರು, ಕುಂಬಾರನಿಗೆ ವರುಷ, ದೋಶೆಗೆ ನಿಮಿಷ ಅನ್ನೋ ರೀತಿ ಗುಬ್ಬಿ ತಾಲೂಕಿನಲ್ಲಿ ಪಕ್ಷದ ಪರಿಸ್ಥಿತಿ ಇದೆ. ಕೆಲವರು ತಮ್ಮಿಂದಲೇ ಕ್ಷೇತ್ರದಲ್ಲಿ ಬಿಜೆಪಿ ಬೆಳೆದಿದೆ ಅನ್ನೋ ಭ್ರಮೆಯಲ್ಲಿದ್ದಾರೆ. ನಾವೆಲ್ಲಾ ವರ್ಷಾನುಗಟ್ಟಲೆ ದುಡಿದು ಕಟ್ಟಿದರೆ, ನೀವು ನಿಮಿಷದಲ್ಲಿ ಹಾಳು ಮಾಡುತ್ತೀರಾ. ಮಾಧ್ಯಮದ ಎದುರು ಕಿತ್ತಾಡಿಕೊಳ್ಳುತ್ತೀರಾ..? ಎಂದು ಪ್ರಶ್ನಿಸುತ್ತಾ, ಇದು ಸುಖಾಂತ್ಯ ಕಾಣದಿದ್ದರೆ ಸ್ವತಃ ತಾವೇ‌ ಗುಬ್ಬಿಗೆ ಬಂದು ಸ್ಪರ್ಧೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದರು.