ಎಂ.ಎನ್.ಕೋಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಲ ಜೀವನ್ ಮೀಷನ್ ಯೋಜನೆ ರೈತರಿಗೆ ಅನುಕೂಲವಾಗಿದೆ ಎಂದು ಪಿಡಿಒ ರಂಗರಾಜು ತಿಳಿಸಿದರು.
ಗುಬ್ಬಿ ತಾಲೂಕಿನ ಎನ್.ಹೊಸಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಲ ಜೀವನ್ ಮೀಷನ್ ಮನೆ&ಮನೆ ನಲ್ಲಿ ಸಂಪರ್ಕ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ರೈತರು ನೀರನ್ನು ಮಿತವಾಗಿ ಬಳಸಬೇಕು. ನೀರನ್ನು ಪೋಲು ಮಾಡಬಾರದು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ರೈತರಿಗೆ ಹಾಗೂ ಮಹಿಳೆಯರಿಗೆ ಜಲ ಜೀವನ್ ಮೀಷನ್ ಯೋಜನೆ ಅನಕೂಲವಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಲ್ಲಿಗಳನ್ನು ಅಳವಡಿಸಿದ್ದು, ಪ್ರತಿ ಮನೆಗಳಿಗೂ ನೀರನ್ನು ಪೂರೈಸಲಾಗುತ್ತಿದೆ. ಮಹಿಳೆಯರು ನೀರನ್ನು ವ್ಯರ್ಥ ಮಾಡದೆ ಅವಶ್ಯಕತೆ ಇರುವಷ್ಟು ನೀರನ್ನ ಬಳಸಿ ಎಂದರು.
ಈ ಹಿಂದೆ ರೈತರು ಬಾವಿ, ಹಳ್ಳ, ಬೋರ್ಗಳಲ್ಲಿ ನೀರು ತರುತ್ತಿದ್ದರು. ಇದನ್ನ ಮನಗಂಡ ಕೇಂದ್ರ ಸರ್ಕಾರ ಜಲಜೀವನ್ ಯೋಜನೆ ಮೂಲಕ ಮನೆ ಮನೆಗೆ ನಲ್ಲಿ ಸಂಪರ್ಕ ಮಾಡಿ ಪ್ರತಿ ಮನೆ ಮುಂದೆ ನೀರು ಬರುವಂತೆ ಮಾಡಿದೆ ಎಂದರು.