ಸೋರೆಕುಂಟೆಯಲ್ಲಿ ಪತ್ತೆಯಾಗಿರುವ ಅಪ್ರಕಟಿತ ವೀರಗಲ್ಲು
- ಗ್ರಾಮಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರ ಸ್ಮರಣೆ
- ವೀರರ ಹೆಸರಿನಲ್ಲಿ ನಿರ್ಮಾಣವಾದ ಎರಡು ಗ್ರಾಮಗಳು
- ಕೋಟೆಯ ಅವಶೇಷಗಳೂ ಪತ್ತೆ
ತುಮಕೂರು ಹವ್ಯಾಸಿ ಸಂಶೋಧನ ತಂಡದ ನಾಯಕ ಪ್ರೊ.ಎಂ.ಕೊಟ್ರೇಶ್ ಮತ್ತು ಅವರ ತಂಡ ಇತ್ತೀಚೆಗೆ ತುಮಕೂರು ತಾಲೂಕು ಸೋರೆಕುಂಟೆ ಗ್ರಾಮದಲ್ಲಿ ಅಪ್ರಕಟಿತ ವೀರಗಲ್ಲು ಶಾಸನವನ್ನು ಪತ್ತೆ ಹಚ್ಚಿದೆ.
ತುಮಕೂರು ನಗರದಿಂದ 28 ಕೀ.ಮೀ ದೂರದಲ್ಲಿದ್ದಲ್ಲಿರುವ ಸೋರೆಕುಂಟೆ ಪುಟ್ಟಗ್ರಾಮದಲ್ಲಿ ಕ್ರಿಕೆಟ್ ಕ್ರೀಡಾಂಗಣ, ವಸಂತ ನರಸೀಪುರ ಕೈಗಾರಿಕಾ ಪ್ರೆದೇಶದ ಟೌನ್ ಶಿಪ್ ನಿರ್ಮಾಣಗಳ ಆರ್ಭಟದಲ್ಲಿ ಪ್ರಾಚೀನ ಪಳಿಯುಳಿಕೆಗಳು, ಸ್ಮಾರಕಗಳು ಸದ್ದು ಗದ್ದಲವಿಲ್ಲದೆ ನಾಶ ವಾಗುತ್ತಿವೆ.
ಇಂತಹ ಸಂದರ್ಭದಲ್ಲಿ 15 ನೇ ಶತಮಾನದಲ್ಲಿ ಇಬ್ಬರೂ ಪ್ರಮುಖ ವ್ಯಕ್ತಿಗಳು ಗ್ರಾಮಗಳ ಸೇವೆ ಕೆಲಸ ದಲ್ಲಿಯೇ ಮರಣಿಸಿದ್ದಾರೆ ಅವರುಗಳೇ ಶಾಸನೋಕ್ತ ಮಲ್ಲಯ್ಯ ನಾಯಕ ಮತ್ತು ಬೊಮ್ಮೆನಾಯಕ ಇವರ ಹೆಸರಿನಲ್ಲಿ ವೀರಗಲ್ಲು ನಿಲ್ಲಿಸಿ ಶಾಸನ ಹಾಕಿಸಲಾಗಿದೆ.
ನಂತರ ಇವರ ಹೆಸರಿನಲ್ಲಿ ಮಲ್ಲೇನಹಳ್ಳಿ ಮತ್ತು ಬೊಮ್ಮೆಗೌಡನ ಪಾಳ್ಯ ನಿರ್ಮಾಣ ಮಾಡಲಾಗಿದೆ ಇಂದಿಗೂ ಆ ಎರಡು ಗ್ರಾಮಗಳು ಇವೆ ಮತ್ತು ಇಂದಿಗೂ ಬೊಂಮೇಗೌಡನ ಪಾಳ್ಯದಲ್ಲಿ ಕೋಟೆಯ ಅವಶೇಷಗಳು, ಸಿದ್ದಲಿಂಗಪ್ಪ ಎಂಬುವವರ ಹೊಲದಲ್ಲಿ ವೀರಗಲ್ಲು ಕೂಡ ಕಾಣಬಹುದು.
ಸೋರೆಕುಂಟೆ ಗ್ರಾಮಸ್ಥರು ಸದರಿ ಶಾಸನವನ್ನು ಆಂಜನೇಯನ ದೇವಸ್ಥಾನದ ಮುಂದೆ ಕಬ್ಬಿಣದ ಸಲಾಕೆಗಳನ್ನು ಅಳವಡಿಸಿ ಕಾಪಾಡಿದ್ದಾರೆ. ಅದಕ್ಕಾಗಿ ಆ ದೇವಸ್ಥಾನದ ಅರ್ಚಕ ಅಂಜಿನಿ ಶರ್ಮ, ಶ್ರೀ ದಯಾನಂದ, ಬಸವರಾಜ್ ಮತ್ತು ಅದೇ ಊರಿನ ತುಮಕೂರು ಇತಿಹಾಸ ವಿಭಾಗದ ವಿದ್ಯಾರ್ಥಿ ಮಾರುತಿ ಇವರುಗಳು ಒಳ್ಳೆ ಕೆಲಸ ಮಾಡಿದ್ದಾರೆ.
ಶಾಸನದ ಪಾಠದ ಸಾರಾಂಶ ಹೀಗಿದೆ.
1 ಶಾಸನದಲ್ಲಿ ಒಟ್ಟು 8 ಸಾಲುಗಳಿವೆ.
2.ಮೊದಲ ಹಾಗೂ ಎರಡನೇ ಸಾಲಿನಲ್ಲಿ ಮಳೆಯ ನಾಯಕ ಮತ್ತು ಬೊಮ್ಮೆನಾಯಕರ ಉಲ್ಲೇಖಗಳಿವೆ.
3.ಊರಿನ ತಳವಾರ ಮತ್ತು ಒಂದು ತೆರೆಗೆಯ ಹೆಸರು ಬರುತ್ತದೆ. ಅಲ್ಲಿಯೇ ಕೆಳಗೆ ಸೂರ್ಯ ಮತ್ತು ಚಂದ್ರ,
ಅದರ ಕೆಳಗೆ ನಂದಿ ಮತ್ತು 4.ಶಿವಲಿಂಗದ ಕೆತ್ತನೆಗಳು ಇಬ್ಬರೂ ವೀರರು ಕೈಮುಗಿದು ಸುಖಾಸನದಲ್ಲಿ ಕುಳಿತಿದ್ದಾರೆ.
5.ಅದರ ಕೆಳಗೆ ಶಾಸನ ಮುಂದು ವರೆದಿದ್ದು ಯಿಶ್ವರ ಸಂವತ್ಸರದ ಪುಸ್ಯ 5 ರಲು ಗು ಎಂದಿದೆ.
6.ಶಾಸನದ ಕೊನೆಗೆ ಸೋರೆಕುಂಟೆ ಗ್ರಾಮದ ಉಲ್ಲೇಖ ಇದೆ.
ಶಾಸನ ಪ್ರಕಟಣ ಈ ಕಾರ್ಯದಲ್ಲಿ ತೋಡಿಗಿದ್ದವರು
ಪ್ರೊ.ಎಂ.ಕೊಟ್ರೇಶ್, ಡಾ.ಮಹೇಶ್, ಶಶಿಕುಮಾರ್ ನಾಯಕ, ವಿಮಲಾಕ್ಷಿ ಮತ್ತು ಡಾ.ಸುಧಾ ಇದ್ದರು.