ಒಕ್ಕಲಿಗರದ ಸಂದ ಚುನಾವಣೆ ಹಿನ್ನೆಲೆಯಲ್ಲಿ ಎಸ್​.ಆರ್​.ಶ್ರೀನಿವಾಸ್​ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು ಅವಿರೋಧ ಆಯ್ಕೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದರು. ಎಚ್​.ನಿಂಗಪ್ಪ, ಬಿ.ಬಿ.ರಾಮಸ್ವಾಮಿಗೌಡ, ಆರ್​.ಕಾಮರಾಜು, ಕೆ.ಬಿ.ಬೋರೇಗೌಡ, ಹೆಬ್ಬೂರು ಚಿಕ್ಕಸ್ವಾಮಿ ಮತ್ತಿತರರು ಇದ್ದರು.  
ತುಮಕೂರು

ಒಕ್ಕಲಿಗರ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ?

ಪ್ರಮುಖ ಮುಖ್ಯಾಂಶಗಳು

  • ನಾಮಪತ್ರ ವಾಪಸ್​ ಪಡೆಯಲು ಇಂದು ಕೊನೆದಿನ
  • ನೆನೆಗುದಿಗೆ ಬಿದ್ದಿರುವ ಜಿಲ್ಲೆಯ ಪ್ರತಿಷ್ಠಿತ ಸಂಘ
  • ವಾಸಣ್ಣ, ಎಂಟಿಕೆ, ನಿಂಗಪ್ಪ, ಬಿಬಿಆರ್​ ಕಣದಲ್ಲಿ
ತುಮಕೂರು: ಸಾಕಷ್ಟು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ಘೋಷಣೆಯಾಗಿದ್ದು 16 ನಿರ್ದೇಶಕರ ಅವಿರೋಧ ಆಯ್ಕೆಗೆ ವೇದಿಕೆ ಸಿದ್ಧವಾಗಿದೆ. ಇಂದು ಸೋಮವಾರ ನಾಮಪತ್ರ ವಾಪಸ್​ ಪಡೆಯಲು ಕೊನೆಯ ದಿನವಾಗಿದ್ದು ಕುತೂಹಲ ಮೂಡಿಸಿದೆ.
ಆಯ್ಕೆಗೆ ಅರ್ಜಿ ಸಲ್ಲಿಸಿದ್ದ ಎಲ್ಲರೂ ಹಿರಿಯ ಶಾಸಕ ಎಸ್​.ಆರ್​.ಶ್ರೀನಿವಾಸ್​ ನೇತೃತ್ವದಲ್ಲಿ ಭಾನುವಾರ ತುಮಕೂರಿನಲ್ಲಿ ನಡೆದ ಸಮುದಾಯ ಮುಖಂಡರ ಸಂಧಾನ ಸಭೆಯಲ್ಲಿ ನಿರ್ದೇಶಕರ ಅವಿರೋಧ ಒಪ್ಪಿಗೆ ನೀಡಿದ್ದು ಸೋಮವಾರ ನಾಮಪತ್ರ ವಾಪಸ್​ ಪಡೆಯಲು ಒಪ್ಪಿಗೆ ಸೂಚಿಸಿದ್ದು ಕಣದಲ್ಲಿರುವ ಆಯ್ಕೆಯೆ ಹೊಣೆಯನ್ನು ಹಿರಿಯ ಮುಖಂಡರಿಗೆ ಬಿಡಲಾಗಿದೆ.
ಜಿಲ್ಲೆಯಲ್ಲಿ ಪ್ರತಿಷ್ಠಿತ ಎನ್ನಿಸಿರುವ ಒಕ್ಕಲಿಗರ ಸಂಘದ ಆಡಳಿತ ಮಂಡಳಿಗೆ ಕಳೆದ ಮೂರು ವರ್ಷದಿಂದ ತುಮಕೂರು ಉಪವಿಭಾಗಾಧಿಕಾರಿ ಆಡಳಿತಾಧಿಕಾರಿಯಾಗಿದ್ದರು. ಸದಸ್ಯತ್ವದ ಗೊಂದಲ ನ್ಯಾಯಾಲಯದಲ್ಲಿ ಭಗೆಹರಿದು ಮೂರು ವರ್ಷದ ನಂತರ ನಡೆಯುತ್ತಿರುವ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಸಾಧ್ಯವಾಗದಿದ್ದರೆ ಜೂ.30ರಂದು ಗುಬ್ಬಿ, ತುಮಕೂರು ಹಾಗೂ ಶಿರಾ ತಾಲೂಕಿಗೆ ಮಾತ್ರ ಚುನಾವಣೆ ನಡೆಯಲಿದೆ.
ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಕರಡು ಅರ್ಹ ಮತದಾರರ ಪಟ್ಟಿ ಪ್ರಕಟಿಸುವ ಬಗ್ಗೆ ಉಚ್ಛ ನ್ಯಾಯಾಲಯ ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತಾಧಿಕಾರಿಯಾಗಿರುವ ತುಮಕೂರು ಉಪವಿಭಾಗಾರಿಕಾರಿಗೆ ಆದೇಶ ನೀಡಿದ್ದು ಕೋರ್ಟ್​ ಸೂಚನೆಯಂತೆ 121 ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿದೆ. ಸದಸ್ಯತ್ವ ಶುಲ್ಕ ಪಾವತಿಸಿದ ದಾಖಲೆಗಳನ್ನು ಕೋರ್ಟ್​ಗೆ ಸಲ್ಲಿಸಲು ವಿಲರಾದ ಹಿನ್ನೆಲೆಯಲ್ಲಿ 400 ಸದಸ್ಯರು ಮತದಾನದಿಂದ ವಂಚಿತರಾಗಿದ್ದಾರೆ.
ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದ ಪ್ರಕರಣಗಳಲ್ಲಿ -2025ರ ಡಿಸೆಂಬರ್​ನಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಅನುಬಂಧ-&ಇ ರಲ್ಲಿರುವ ಆಡಳಿತಾಧಿಕಾರಿ ಸಿದ್ಧಪಡಿಸಿರುವ ಕರಡು ಮತದಾರರ ಪಟ್ಟಿ ವಜಾ ಮಾಡಿ ಆದೇಶಿಸಿತ್ತು. ಜತೆಗೆ ಆಡಳಿತಾಧಿಕಾರಿ ನೇಮಕದ ಪೂರ್ವದಲ್ಲಿಯೇ ಇದ್ದ ಅರ್ಹ ಮತದಾರರ ಪಟ್ಟಿ ಸಿದ್ಧಪಡಿಸಿ ಆಡಳಿತ ಮಂಡಳಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿತ್ತು.
ತುಮಕೂರು ನಗರದ ಹೃದಯಭಾಗದಲ್ಲಿ ಬೆಲೆಬಾಳುವ ಆಸ್ತಿ ಕೂಡ ಹೊಂದಿರುವ, ಆರ್ಥಿಕವಾಗಿ ಸದೃಢವಾಗಿರುವ ಒಕ್ಕಲಿಗರ ಸಂಕ್ಕೆ 2022ರಿಂದಲೂ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಆಡಳಿತಾಧಿಕಾರಿ ನೇಮಕದ ಪೂರ್ವದಲ್ಲಿ ಸದಸ್ಯತ್ವ ಹೊಂದಿರುವವರು ಮಾತ್ರ ಮತದಾರರ ಪಟ್ಟಿ ತಯಾರಿಸಿದ್ದರಿಂದ 121 ಸದಸ್ಯರಿಗೆ ಮತದಾನದ ಹಕ್ಕು ಲಭಿಸಿದೆ.
2017 ಹಾಗೂ 2021ರಲ್ಲಿ ಸಂಘದ ಕಾರ್ಯದರ್ಶಿ ಜಿಲ್ಲಾ ಸಂಘಗಳ ನೋಂದಣಾಧಿಕಾರಿಗೆ ಸಂಘದ ವಾರ್ಷಿಕ ಲೆಕ್ಕಪತ್ರಗಳು ಮತ್ತು ಕಾರ್ಯಕಾರಿ ಸಮಿತಿ ಪಟ್ಟಿಯೊಂದಿಗೆ ಸಲ್ಲಿಸಿರುವ ಮೇಲ್ಕಂಡ ಸಂಘದ 121 ಜನ ಸದಸ್ಯರ ಪಟ್ಟಿ ಸಲ್ಲಿಸಿದ್ದು ಈ 121 ಜನ ಸದಸ್ಯರ ಪಟ್ಟಿಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ ಆದ್ದರಿಂದ 121 ಸದಸ್ಯರು ಮಾತ್ರ ಮತದಾನದ ಜತೆಗೆ ಚುನಾವಣೆಗೆ ಸ್ಫರ್ಧಿಸಲು ಅರ್ಹತೆ ಪಡೆದಿದ್ದರು.
16 ಸ್ಥಾನಗಳಿಗೆ ಅವಿರೋಧ ಆಯ್ಕೆ ಸಾಧ್ಯತೆ?
ಜಿಲ್ಲಾ ಒಕ್ಕಲಿಗರ ಸಂದಲ್ಲಿ ಪ್ರಸ್ತುತ ಮತದಾನಕ್ಕೆ ಅರ್ಹತೆ ಪಡೆದಿರುವ 121 ಸದಸ್ಯ ಸಂಖ್ಯೆಗೆ ಅನುಗುಣವಾಗಿ 16 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು ಜೂ.30ರಂದು ಮತದಾನ ನಡೆಯಬೇಕಿದೆ. ತುಮಕೂರು ಗ್ರಾಮಾಂತರ 4, ತುಮಕೂರು ನಗರ 2,
ಕುಣಿಗಲ್​ 3, ತುರುವೇಕೆರೆ 3, ಗುಬ್ಬಿ 2, ತಿಪಟೂರು 1, ಶಿರಾ 1 ಸೇರಿ ಒಟ್ಟು 16 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಗುಬ್ಬಿ, ತುಮಕೂರು ನಗರ ಹಾಗೂ ಗ್ರಾಮಾಂತರ, ಶಿರಾ ತಾಲೂಕು ಹೊರತುಪಡಿಸಿ ಉಳಿದೆಲ್ಲಾ ತಾಲೂಕುಗಳಲ್ಲಿಯೂ ನಿಗಧಿತ ಸ್ಥಾನಗಳಿಗಷ್ಟೇ ನಾಮಪತ್ರ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯ ಘೋಷಣೆಯಷ್ಟೇ ಬಾಕಿ ಇದೆ. ಸಂದಲ್ಲಿ ಅರ್ಹ ಸದಸ್ಯತ್ವ ಹೊಂದಿಲ್ಲದ ಚಿ.ನಾ.ಹಳ್ಳಿ, ಮಧುಗಿರಿ, ಕೊರಟಗೆರೆ ಹಾಗೂ ಪಾವಗಡ ತಾಲೂಕುಗಳಲ್ಲಿ ನಿರ್ದೇಶಕ ಸ್ಥಾನ ನೀಡಲಾಗಿಲ್ಲ.
ಕಣದಲ್ಲಿರುವ ವಾಸಣ್ಣ, ಎಂ.ಟಿ.ಕೃಷ್ಣಪ್ಪ, ಬಿಬಿಆರ್​, ನಿಂಗಪ್ಪ..
121 ಸದಸ್ಯರಿದ್ದರೂ ನಿರ್ದೇಶಕ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಟಾನುಟಿ ನಾಯಕರೇ ಆಯ್ಕೆಯಾಗುತ್ತಿರುವುದು ಚುನಾವಣೆಯನ್ನು ರಂಗೇರಿಸಿದೆ. ಸಚಿವ ಸ್ಥಾನದ ರೇಸ್​ನಲ್ಲಿರುವ ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್​(ತುಮಕೂರು ನಗರ), ಹಿರಿಯ ಶಾಸಕ ಎಂ.ಟಿ.ಕೃಷ್ಣಪ್ಪ(ತುರುವೇಕೆರೆ), ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ(ಕುಣಿಗಲ್​), ಜೆಡಿಎಸ್​ ಜಿಲ್ಲಾಧ್ಯಕ್ಷ ಎಚ್​.ನಿಂಗಪ್ಪ(ತುಮಕೂರು ಗ್ರಾಮಾಂತರ) ಭಾಗದಿಂದ ನಿರ್ದೇಶಕ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು ಅವಿರೋಧ ಆಯ್ಕೆ ಫಿಕ್ಸ್​ ಎನ್ನಿಸಿದೆ.
ಸಂದ ಮಾಜಿ ಅಧ್ಯಕ್ಷ ಕೆ.ಬಿ.ಬೋರೇಗೌಡ(ಕುಣಿಗಲ್​), ಕೊಂಡ್ಲಿ ಕರಿಯಪ್ಪ(ಗುಬ್ಬಿ), ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ಹೆಬ್ಬೂರು ಚಿಕ್ಕಸ್ವಾಮಿ(ತುಮಕೂರು ಗ್ರಾ), ಡಿಸಿಸಿ ಬ್ಯಾಂಕ್​ ಮಾಜಿ ಅಧ್ಯಕ್ಷ ಮುರುಗಪ್ಪಗೌಡ(ಶಿರಾ) ಕ್ಷೇತ್ರದಿಂದ ಕಣದಲ್ಲಿರುವ ಪ್ರಮುಖರಾಗಿದ್ದಾರೆ. ಕೆ.ಆರ್​.ಇಂದ್ರಕುಮಾರ್​(ತಿಪಟೂರು), ಆರ್​.ಲಕ್ಷ$್ಮಣ(ಶಿರಾ), ಗುಬ್ಬಿಯಿಂದ ವಿ.ಡಿ.ಮೋಹನ್​ಕುಮಾರ್​, ಎಲ್​.ಕರೇಗೌಡ, ಬಿ.ಶಿವಲಿಂಗೇಗೌಡ, ಗೋವಿಂದರಾಜು ಅರ್ಜಿ ಸಲ್ಲಿಸಿದ್ದಾರೆ.
ತುಮಕೂರು ನಗರದಿಂದ ಎಂ.ಕೆ.ರಾಜಣ್ಣ, ಬಿ.ಸಿ.ರಂಗಪ್ಪ, ಕೆ.ಸಿ.ಜಯರಾಮ, ಎಂ.ಎಚ್​.ಮಂಜುನಾಥ್​, ಬಿ.ಡಿ.ಗೋಪಾಲಕೃಷ್ಣ, ಸಿದ್ದಲಿಂಗಪ್ಪ, ಕುಣಿಗಲ್​ನಿಂದ ವೈ.ಎಚ್​.ನಂಜಪ್ಪ, ತುರುವೇಕೆರೆಯಿಂದ ಕೆ.ಎನ್​.ಶಿವಣ್ಣ, ಬಿ.ಬಟ್ಟಸ್ವಾಮಿ ಹಾಗೂ ತುಮಕೂರು ನಗರದಿಂದ ಎಸ್​.ಕೇಶವಮೂರ್ತಿ, ಆರ್​.ರಾಮಲಿಂಗೇಗೌಡ, ಎಸ್​.ವಿ.ವಿಜಯಕುಮಾರ್​ ನಾಮಪತ್ರ ಸಲ್ಲಿಸಿದ್ದಾರೆ.