- ಕುಲಪತಿ ವಿರುದ್ಧ ತನಿಖೆ ಬೆನ್ನಹಿಂದೆಯೇ ಕ್ರಮ
- ಪದೋನ್ನತಿ ಆದೇಶ ವಾಪಸ್ ಪಡೆದ ಕುಲಸಚಿವೆ
- ಪಡೆದಿರುವ ಆರ್ಥಿಕ ಸೌಲಭ್ಯ ವೇತನದಲ್ಲಿ ಕಟ್
ತುಮಕೂರು: ತುಮಕೂರು ವಿಶ್ವವಿದ್ಯಾಲಯದಲ್ಲಿ 8 ಸಿಬ್ಬಂದಿಗೆ ನಿಯಮಬಾಹಿರಬಾಗಿ ನೀಡಲಾಗಿದ್ದ ಮುಂಬಡ್ತಿ ವಿಷಯದಲ್ಲಿ ನಡೆದಿದೆ ಎನ್ನಲಾಗಿರುವ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ವಿರುದ್ಧದ ಕರ್ತವ್ಯಲೋಪದ ತನಿಖೆಗೆ ಏಕವ್ಯಕ್ತಿ ಸತ್ಯಶೋಧನಾ ಸಮಿತಿ ನೇಮಕವಾದ ಬೆನ್ನಹಿಂದಲೇ ಮುಂಬಡ್ತಿಯನ್ನು ರದ್ದುಗೊಳಿಸಿ ವಿವಿ ಆದೇಶಿಸುವ ಮೂಲಕ ತನಿಖೆ ಆರಂಭವಾಗುವ ಮೊದಲೇ ತಪು ಒಪ್ಪಿಕೊಂಡಿದೆ.
ೆ.16ರಂದು ವಿವಿ ಕುಲಸಚಿವೆ ನಹಿದಾ ಜಮ್ಜಮ್ ಆದೇಶ ಹೊರಡಿಸಿದ್ದು ತುಮಕೂರು ವಿವಿಯಲ್ಲಿ ನೇರನೇಮಕಾತಿಗೆ ಖಾಲಿಯಿದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ 2021ರಲ್ಲಿ ನೀಡಲಾಗಿರುವ ಪದೋನ್ನತಿಗಳನ್ನು ಕರ್ನಾಟಕ ರಾಜ್ಯ ವಿವಿ ಅಧಿನಿಯಮ 2000ರ ಪ್ರಕರಣದ 10ರ ಅಡಿಯಲ್ಲಿ ರಾಜ್ಯ ಸರ್ಕಾರ ರದ್ದುಗೊಳಿಸಿವುದರಿಂದ ಪದೊನ್ನತಿ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ನೇರ ನೇಮಕಾತಿ ಮೂಲಕವಷ್ಟೇ ನೇಮಕ ಮಾಡಿಕೊಳ್ಳಬೇಕಾದ ಹುದ್ದೆಗಳಿಗೆ ಬಡ್ತಿ ನೀಡಿದ್ದ ವಿವಿ ಬಡ್ತಿ ಆದೇಶವನ್ನು 2022 ಡಿಸೆಂಬರ್ನಲ್ಲಿ ಸರ್ಕಾರ ರದ್ದುಗೊಳಿಸಿದೆ. ಜತೆಗೆ ರದ್ದುಗೊಳಿಸಿದ ಆದೇಶಕ್ಕೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಅದರ ಬಗ್ಗೆ ಅನುಸರಣಾ ವರದಿ ಸಲ್ಲಿಸಲು ಪದೇಪದೇ ನಿರ್ದೇಶಿಸಿದ್ದರೂ ಕುಲಸಚಿವೆ ಸರ್ಕಾರದ ಜತೆಗೆ ಪದೇಪದೇ ಪತ್ರವ್ಯವಹಾರ ಮಾಡಿಕೊಂಡು ಕಾಲಹರಣ ಮಾಡಿರುವ ವಿವಾದ ಈಗ ತನಿಖೆಗೆ ಒಳಪಟ್ಟಿದೆ.
ಬಡ್ತಿ ಆದೇಶವನ್ನು ಹಿಂಪಡೆಯುವಂತೆ ಸರ್ಕಾರ ಸೂಚಿಸಿದ್ದರೂ ಉದ್ದೇಶ ಪೂರ್ವಕವಾಗಿಯೇ ಕಾಲಹರಣ ಮಾಡಿ, ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ವಿರುದ್ಧ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಪಿ.ಕೃಷ್ಣಭಟ್ ನೇತೃತ್ವದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹಲೂತ್ ಆದೇಶಿಸಿದ್ದು ತನಿಖೆ ಆರಂಭವಾಗಿದೆ.
ಹೆಚ್ಚುವರಿ ವೇತನ ಕಡಿತಕ್ಕೂ ಸೂಚನೆ:
ಬಡ್ತಿ ಆದೇಶ ರದ್ದುಪಡಿಸುವಂತೆ ಸರ್ಕಾರದ ಆದೇಶ ಪಾಲಿಸದೆ ಬಡ್ತಿ ಪ್ರಕ್ರಿಯೆ ಸಿಂಧುತ್ವವನ್ನು ಸಮರ್ಥಿಸಿಕೊಂಡು ಮತ್ತು ಬಡ್ತಿ ಆದೇಶಗಳನ್ನು ಮಾನ್ಯ ಮಾಡಿ ಪರಿಗಣಿಸಬೇಕು ಹಾಗೂ ಬಡ್ತಿ ಪಡೆದಿರುವ ಸಿಬ್ಬಂದಿಯನ್ನು ಮಾನವೀಕತೆಯ ದೃಷ್ಠಿಯಿಂದ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ವಿನಂತಿಸಿಕೊಂಡಿದ್ದ ವಿವಿ ಈಗ ಅನಿವಾರ್ಯವಾಗಿ ಆದೇಶ ರದ್ದುಪಡಿಸುವಂತಾಗಿದೆ.
ಆದೇಶ ರದ್ದುಪಡಿಸದೇ ಕಾಲಹರಣ ಮಾಡಿದ ವಿವಿ ಆಡಳಿತ ಈಗ ಬಡ್ತಿ ಆದೇಶವನ್ನು ಹಿಂಪಡೆದು ಕಳೆದ ಐದು ವರ್ಷದಿಂದಲೂ ಪದೋನ್ನತಿ ಕಾರಣದಿಂದ ನೀಡಲಾಗಿರುವ ಆರ್ಥಿಕ ಸೌಲಭ್ಯಗಳನ್ನು ಸಿಬ್ಬಂದಿಯ ವೇತನದಿಂದ ಕಟಾಯಿಸುವಂತೆ ವಿವಿ ಹಣಕಾಸು ಅಧಿಕಾರಿಗೆ ಸೂಚಿಸಿದೆ. ಕುಲಪತಿ ಹಾಗೂ ಕುಲಸಚಿವೆ ಮಾಡಿದ ಎಡವಟ್ಟಿನಿಂದ ಸಿಬ್ಬಂದಿ ಮುಂದಿನ ದಿನಗಳಲ್ಲಿ ಹಣ ವಾವತಿಸು ವಿವಿಯಲ್ಲಿ ದುಡಿಯವಂತಾಗಿದೆ. ಬಡ್ತಿ ಕಳೆದುಕೊಂಡ ಹಳೆಯ ವೇತನಕ್ಕೆ ಜಾರಿರುವ ಎಂಟೂ ಸಿಬ್ಬಂದಿಯೂ ಮುಂದಿನ ದಿನಗಳಲ್ಲಿ ಲಾಂತರ ರೂ. ಹಣವನ್ನು ವಿವಿಗೆ ಮರು ಪಾವತಿಸುವಂತಾಗಿದೆ.
ಹಣಕಾಸು ವಿಭಾಗ ಸಿಬ್ಬಂದಿಯ ವೇತನದಲ್ಲಿ ಹಣ ಕಟಾಯಿಸಲು ಲೆಕ್ಕಚಾರದಲ್ಲಿ ಮುಳುಗಿದ್ದು ವಿವಿ ಆಡಳಿತದ ಬೇಜವಬ್ಧಾರಿತನದಿಂದ ಸಿಬ್ಬಂದಿ ಪರಿತಪಿಸುವಂತಾಗಿದೆ.
- ಪದ್ದೋನ್ನತಿ ರದ್ದುಗೊಳಿಸಲು 2024 ಮೇ.22ರಂದು ಸರ್ಕಾರ ನೀಡಿರುವ ನಿರ್ದೇಶನದಂತೆ ಹಾಗೂ ಸಿಂಡಿಕೇಟ್ ಸಭೆಯ ಟನೋತ್ತರ ಅನುಮೋದನೆಗೆ ಒಳಪಟ್ಟು 2021 ಡಿ.1ರಂದು 8 ಬೋಧಕೇತರ ಸಿಬ್ಬಂದಿಗಳಿಗೆ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ನೀಡಲಾಗಿರುವ ಪದೋನ್ನತಿ ಆದೇಶವನ್ನು ಹಿಂಪಡೆಯಲಾಗಿದೆ ಹಾಗೂ ನೀಡಲಾಗಿರುವ ಆರ್ಥಿಕ ಸೌಲಭ್ಯಗಳನ್ನು ಅವರ ವೇತನದಲ್ಲಿ ಕಟಾಯಿಸುವಂತೆ ಹಣಕಾಸು ಅಧಿಕಾರಿಗೆ ಸೂಚಿಸಲಾಗಿದೆ. ನಹಿದಾ ಜಮ್ಜಮ್, ಕುಲಸಚಿವೆ