ವಿಶೇಷ ಮೆಮು ರೈಲು 
ತುಮಕೂರು

22 ರಂದು ಸಂಜೆ ಬೆಂಗಳೂರಿಗೆ ವಿಶೇಷ ಮೆಮು ರೈಲು

ಪ್ರಮುಖ ಮುಖ್ಯಾಂಶಗಳು

  • ಯುಗಾದಿ, ರಂಜಾನ್​ ಸರಣಿ ರಜೆ
  • ಬೆಂಗಳೂರಿಗೆ ಮರಳಲು ವಿಶೇಷ ವ್ಯವಸ್ಥೆ
  • ಸಂಜೆ 5.45ಕ್ಕೆ ತುಮಕೂರಿನಿಂದ ಹೊರಡಲಿರುವ ರೈಲು
ತುಮಕೂರು : ಯುಗಾದಿ, ರಂಜಾನ್​ ಹಬ್ಬಗಳ ಹಿನ್ನೆಲೆ ಮಾ.22 ರಂದು (ಭಾನುವಾರ) ಸಂಜೆ ತುಮಕೂರಿನಿಂದ ಬೆಂಗಳೂರಿಗೆ ವಿಶೇಷ ಮೆಮು ರೈಲು ಸಂಚಾರ ಇರಲಿದೆ.
ಈ ವಿಶೇಷ ಮೆಮು ರೈಲು ಬಾಣಸವಾಡಿಯಿಂದ ಭಾನುವಾರ ಮಧ್ಯಾಹ್ನ 3.30ಕ್ಕೆ ಹೊರಟು ಸಂಜೆ 5.15ಕ್ಕೆ ತುಮಕೂರು ತಲುಪಲಿದೆ. ಸಂಜೆ 5.45ಕ್ಕೆ ತುಮಕೂರಿನಿಂದ ಹೊರಟು 6.55ಕ್ಕೆ ಯಶವಂತಪುರ, 7.40ಕ್ಕೆ ಬಾಣಸವಾಡಿ ತಲುಪಲಿದೆ ಎಂದು ನೈರುತ್ಯ ರೈಲ್ವೇ ಬೆಂಗಳೂರು ವಿಭಾಗದ ಪ್ರಕಟಣೆಯಲ್ಲಿ ತಿಳಿಸಿದೆ.
ಯುಗಾದಿ ಹಾಗೂ ರಂಜಾನ್​ ಹಬ್ಬಗಳ ಹಿನ್ನೆಲೆಯಲ್ಲಿ ಸರಣಿ ರಜೆ ಇದ್ದದ್ದರಿಂದ ಸ್ವಂತ ಊರುಗಳಿಗೆ ತೆರಳಿದ್ದವರು ಬೆಂಗಳೂರಿಗೆ ಮರಳಲು ಸಾಧ್ಯವಾಗುವಂತೆ ವಿಶೇಷ ರೈಲು ಸಂಚಾರ ಒದಗಿಸಿ ಸಹಕರಿಸುವಂತೆ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ, ನೈಋತ್ಯ ರೈಲ್ವೆ ಹುಬ್ಬಳ್ಳಿ ವಲಯದ ಹಿರಿಯ ಅಧಿಕಾರಿಗಳು ಹಾಗೂ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳಿಗೆ ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ವತಿಯಿಂದ ಮನವಿ ಮಾಡಲಾಗಿತ್ತು. ವೇದಿಕೆಯ ಮನವಿಗೆ ಸ್ಪಂದಿಸಿದ ಹಿರಿಯ ಅಧಿಕಾರಿಗಳು ಭಾನುವಾರ ಸಂಜೆ ವಿಶೇಷ ರೈಲು ಸಂಚಾರಕ್ಕೆ ಅನುಮೋದನೆ ನೀಡಿದ್ದು ವೇದಿಕೆ ವತಿಯಿಂದ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಪ್ರಕಟಣೆಯಲ್ಲಿ ತಿಳಿಸಲಾಗಿದೆ.