ಪ್ರೊ.ಎಂ.ವೆಂಕಟೇಶ್ವರಲು 
ತುಮಕೂರು

ವಿವಿ ಕುಲಪತಿ ಅಭಿನಂದನಾ ಗ್ರಂಥಾ !

ಪ್ರಮುಖ ಮುಖ್ಯಾಂಶಗಳು

  • ಜು.20 ಪ್ರೊ.ಎಂ.ವೆಂಕಟೇಶ್ವರಲು ಅವಧಿ ಮುಕ್ತಾಯ
  • ಅಭಿನಂದನಾ ಸಮಿತಿ ಅಸ್ತಿತ್ವಕ್ಕೆ
  • ಭರದಿಂದ ಸಾಗಿದೆ ಗ್ರಂಥ ಸಿದ್ಧತೆ
ವಿಶೇಷ ವರದಿ
ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಭಿನಂದನಾ ಗ್ರಂಥ ಸಿದ್ಧಗೊಳ್ಳುತ್ತಿದೆ. ಜುಲೈ 20ಕ್ಕೆ ಅವಧಿ ಪೂರ್ಣಗೊಳಿಸಲಿರುವ ಹಿನ್ನೆಲೆಯಲ್ಲಿ ವೆಂಕಟೇಶ್ವರಲು ಹಿತೈಷಿ ಬಳಗವು ಅಭಿನಂದನಾ ಗ್ರಂಥ ಹೊರತರುತ್ತಿದೆ.
ಶಿವಮೊಗ್ಗದ ಕುವೆಂಪು ವಿವಿ ಪ್ರಾಣಿಶಾಸ ವಿಭಾಗದ ಪ್ರಾಧ್ಯಾಪಕರಾಗಿದ್ದ ಪ್ರೊ.ಎಂ.ವೆಂಕಟೇಶ್ವರಲು ಜುಲೈ 20, 2022ರಲ್ಲಿ ತುಮಕೂರು ವಿಶ್ವವಿದ್ಯಾಲಯ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದು ಜುಲೈ 20ಕ್ಕೆ ಅವಧಿಪೂರ್ಣಗೊಳಿಸಲಿದ್ದಾರೆ. ಅಧ್ಯಾಪಕರಾಗಿ, ಸಂಶೋಧಕರಾಗಿ, ವಿಶ್ವವಿದ್ಯಾಲಯ ಆಡಳಿತಗಾರರಾಗಿ, ವಿದ್ಯಾರ್ಥಿ&ಅಧ್ಯಾಪಕ ಸ್ನೇಹಿಯಾಗಿ ಸೇವೆ ಸಲ್ಲಿಸಿರುವ ವೆಂಕಟೇಶ್ವರಲು ಅಭಿನಂದನಾ ಗ್ರಂಥ ಹೊರತರಲು ಅಭಿನಂದನ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ವಿವಿ ಗೌರವ ಡಾಕ್ಟರೇಟ್​ಗೆ ಭಾಜನರಾಗಿರುವ ಸಮಾಜಸೇವಕ ರಮೇಶ್​ ಬಾಬು, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ ಗೌರವ ಸಂಪಾದಕರಾಗಿದ್ದು ಜ್ಞಾನ ಬುತ್ತಿ ಸತ್ಸಂಗ ಕೇಂದ್ರದ ಅಧ್ಯಕ್ಷ ಟಿ.ಮುರಳಿಕೃಷ್ಣಪ್ಪ, ಬಿ.ಆರ್​.ನಟರಾಜಶೆಟ್ಟ "ಸಂಪಾದಕ'ತ್ವದಲ್ಲಿ ಅಭಿನಂದನಾ ಗ್ರಂಥ ರೂಪುಗೊಳ್ಳುತ್ತಿದೆ. ಪ್ರೊ. ಜಿ.ತಿಪ್ಪೇಸ್ವಾಮಿ, ಡಾ.ಡಿ.ಎನ್​.ಯೋಗೀಶ್ವರಪ್ಪ ಸೇರಿದಂತೆ 12 ಮಂದಿ ಸಂಪಾದಕೀಯ ಮಂಡಳಿಯಲ್ಲಿದ್ದು ಸಮರೋಪಾದಿಯಲ್ಲಿ ಅಭಿನಂದನಾ ಗ್ರಂಥ ಸಿದ್ಧತೆ ಕಾರ್ಯ ನಡೆದಿದೆ. ಜು.20 ಅವಧಿ ಮುಕ್ತಾಯ ಸಂದರ್ಭದಲ್ಲೇ ಅಭಿನಂದನಾ ಗ್ರಂಥ ಬಿಡುಗಡೆ ಜತೆಗೆ ವೆಂಕಟೇಶ್ವರಲು ಅಭಿನಂದನಾ ಸಮಾರಂಭ ಆಯೋಜಿಸಲು ಸಮಿತಿಯು ಸಿದ್ಧತೆ ನಡೆಸಿದೆ. ಏತನಧ್ಯೆ ವಿವಿಯಲ್ಲಿ ಅಭಿನಂದನಾ ಗ್ರಂಥದ ಬಗ್ಗೆ ಸಾಕಷ್ಟು ಗುಸುಗುಸು ಚರ್ಚೆಗಳು ನಡೆಯುತ್ತಿವೆ.
ಈ ಹಿಂದೆ 2016 ಮಾರ್ಚ್​ನಲ್ಲಿ ತುಮಕೂರು ವಿವಿ ಕುಲಸಚಿವರಾಗಿ ನೇಮಕವಾಗಿದ್ದ ಪೊ.ಎಂ.ವೆಂಕಟೇಶ್ವರಲು 2 ವರ್ಷ ಕಾರ್ಯನಿರ್ವಹಿಸಿದ್ದರು.
ಸರ್ವತೋಮುಖ ಅಭಿವೃದ್ಧಿ?
ಅನ್ನ, ಅಕ್ಷರ ದಾಸೋಹದೊಂದಿಗೆ ತುಮಕೂರು ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಪ್ರೊ.ಎಂ.ವೆಂಕಟೇಶ್ವರಲು ಅಭಿನಂದನಾ ಗ್ರಂಥ ಸಮಿತಿ ಹೊರತರುತ್ತಿರುವ ಗ್ರಂಥದಲ್ಲಿ ಅವರ ಜತೆಗಿನ ಒಡನಾಟ, ಅನುಭವಗಳು, ಭಾಂದವ್ಯಬಗ್ಗೆ ಹತ್ತಿರದಿಂದ ಬಲ್ಲವರು, ಸಿಂಡಿಕೇಟ್​ ಹಾಲಿ, ಮಾಜಿ ಸದಸ್ಯರು, ಪ್ರಾಧ್ಯಾಪಕರಿಂದಲು ಲೇಖನ ಬರೆಸಲಾಗುತ್ತಿದೆ. ಈ ಹಿಂದೆ ತುಮಕೂರು ವಿವಿಗೊಂದು ರೂಪ ಕೊಟ್ಟ ಡಾ.ಎಸ್​.ಸಿ.ಶರ್ಮಾ ಅವರ ಕುರಿತು ವಿವಿಯಿಂದಲೇ ಅಭಿನಂದನಾ ಗ್ರಂಥ ಹೊರತರಲಾಗಿತ್ತು. ಡಾ.ನಿತ್ಯಾನಂದ ಶೆಟ್ಟಿ ಸಂಪಾದಕತ್ವದಲ್ಲಿ ಎಸ್​.ಸಿ.ಶರ್ಮಾರ "ದಕ್ಷ' ಅಭಿನಂದನಾ ಗ್ರಂಥ ರೂಪಿಸಲಾಗಿತ್ತು.