ತುಮಕೂರು ವಿಶ್ವವಿದ್ಯಾಲಯದ ಜೈನ ಅಧ್ಯಯನ ಸ್ನಾತಕೋತ್ತರ ಡಿಪ್ಲೋಮೊ ವಿಭಾಗವು ಹಮ್ಮಿಕೊಂಡಿದ್ದ 'ಜೈನಧರ್ಮದಲ್ಲಿ ಗುಣಸ್ಥಾನಗಳ ಪರಿಕಲ್ಪನೆ' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಎಸ್. ಪಿ. ಅಜಿತ್ ಪ್ರಸಾದ್, ಡಾ. ವೆಂಕಟ ರೆಡ್ಡಿ ರಾಮರೆಡ್ಡಿ, ಡಾ.ಎಸ್.ಪಿ.ಪದ್ಮಪ್ರಸಾದ್ ಇದ್ದರು.
- ಜೈನಧರ್ಮದಲ್ಲಿ ಗುಣಸ್ಥಾನಗಳ ಪರಿಕಲ್ಪನೆ
- ಜೈನ ಅಧ್ಯಯನ ಸ್ನಾತಕೋತ್ತರ ಡಿಪ್ಲೋಮೊ ವಿಭಾಗ
- ಪ್ರೊ.ಎಸ್ .ಪಿ.ಅಜಿತ್ ಪ್ರಸಾದ್
ತುಮಕೂರು: ಜೈನ ಧರ್ಮದಲ್ಲಿ 'ಗುಣಸ್ಥಾನ' ಎಂಬುದು ಆತ್ಮವು ಕರ್ಮಬಂಧನದಿಂದ ಮುಕ್ತವಾಗಿ, ಆಧ್ಯಾತ್ಮಿಕ ವಿಕಾಸದ ಉತ್ತುಂಗಕ್ಕೇರುವ ಪ್ರಮುಖ ಪ್ರಕ್ರಿಯೆಯಾಗಿದೆ ಎಂದು ಮೂಡುಬಿದರೆಯ ಪ್ರೊ. ಎಸ್. ಪಿ. ಅಜಿತ್ ಪ್ರಸಾದ್ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಜೈನ ಅಧ್ಯಯನ ಸ್ನಾತಕೋತ್ತರ ಡಿಪ್ಲೋಮೊ ವಿಭಾಗವು ಶುಕ್ರವಾರ ಹಮ್ಮಿಕೊಂಡಿದ್ದ "ಜೈನಧರ್ಮದಲ್ಲಿ ಗುಣಸ್ಥಾನಗಳ ಪರಿಕಲ್ಪನೆ' ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಿಥ್ಯಾ ದೃಷ್ಟಿಯಿಂದ ಸಂಪೂರ್ಣ ಜ್ಞಾನೋದಯದವರೆಗೆ ಆತ್ಮವು ಸಾಗುವ 14 ಹಂತಗಳ ಶುದ್ಧೀಕರಣ ಪ್ರಕ್ರಿಯೆಯೇ ಗುಣಸ್ಥಾನ ಎಂದರು.
ನಿಯಮಗಳ ಬಗ್ಗೆ ಜ್ಞಾನವಿದ್ದರೂ ಅವುಗಳನ್ನು ಪಾಲಿಸದಿರುವುದೇ ನಿಜವಾದ ಅಜ್ಞಾನ. ತಪು$್ಪ, ನಂಬಿಕೆ ಹಾಗೂ ಆತ್ಮದ ಅಜ್ಞಾನದ ಸ್ಥಿತಿಯೇ ಮಿಥ್ಯಾತ್ವ.ಆತ್ಮವು ಹೇಗೆ ಕರ್ಮದ ಕಲ್ಮಶಗಳಿಂದ ಮುಕ್ತವಾಗಿ ಶಾಶ್ವತ ಆನಂದವನ್ನು (ಮೋಕ್ಷ) ತಲುಪಬಹುದು ಎಂಬುದಕ್ಕೆ ಈ ಗುಣಸ್ಥಾನಗಳು ಪ್ರಾಯೋಗಿಕ ಮಾರ್ಗಸೂಚಿಗಳಾಗಿವೆ. ಮಿಥ್ಯಾತ್ವ, ಸಾಸ್ವಾದನ, ಮಿಶ್ರ, ಅವಿರತ ಸಮ್ಯಕ್ತವ, ದೇಶವಿರತ, ಪ್ರಮತ್ತ ಸಂಯತ, ಅಪ್ರಮತ್ತ ಸಂಯತ, ಅಪೂರ್ವಕರಣ, ಸೂಕ್ಷ್ತ್ರ್ಮ ಸಾಂಪರಾಯ, ಉಪಶಾಂತ ಕಷಾಯ, ಕ್ಷೀಣ ಕಷಾಯ, ಸಯೋಗ ಕೇವಲಿ, ಅಯೋಗ ಕೇವಲಿ ಈ 14 ಗುಣಸ್ಥಾನಗಳು ಆತ್ಮವು ಹೇಗೆ ಕರ್ಮದ ಕಲ್ಮಶಗಳಿಂದ ಮುಕ್ತವಾಗಿ, ಆನಂದ ಸ್ಥಿತಿಯನ್ನು ತಲುಪುತ್ತದೆ ಎಂಬ ಪ್ರಾಯೋಗಿಕ ಮಾರ್ಗವನ್ನು ಜೈನ ತತ್ವಶಾಸ್ತ್ರದಲ್ಲಿ ವಿವರಿಸುತ್ತದೆ ಎಂದರು.
ಜೈನ ಅಧ್ಯಯನ ಸ್ನಾತಕೋತ್ತರ ಡಿಪ್ಲೋಮೊ ವಿಭಾಗದ ಸಂಯೋಜಕರಾದ ಡಾ. ವೆಂಕಟ ರೆಡ್ಡಿ ರಾಮರೆಡ್ಡಿ, ಪ್ರಾಧ್ಯಾಪಕರಾದ ಡಾ. ಎಸ್.ಪಿ.ಪದ್ಮಪ್ರಸಾದ್, ಆಯೋಜಕ ಎನ್. ಬಿ. ಶ್ರೇಯಾಂಸ ಕುಮಾರ್ ಉಪಸ್ಥಿತರಿದ್ದರು.