ತುಮಕೂರು ವಿವಿ 19ನೇ ಘಟಿಕೋತ್ಸವ 
ತುಮಕೂರು

ಚಿನ್ನದ ಪದಕವಿಲ್ಲದ ಪದವಿ ನೀಡುತ್ತಿರುವ ತುಮಕೂರು ವಿವಿ!

ಪ್ರಮುಖ ಮುಖ್ಯಾಂಶಗಳು

  • ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ನಿರಾಸೆ
  • 19ನೇ ಘಟಿಕೋತ್ಸವದಲ್ಲಿ ಮಹಾ ಎಡವಟ್ಟು
  • ಚಿನ್ನದ ಪದಕ ನೀಡಬೇಕಾದ ಗುತ್ತಿಗೆದಾರ ನಾಪತ್ತೆ
ತುಮಕೂರು: ತುಮಕೂರು ವಿವಿ 19ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಬೇಕಾದ ಗುತ್ತಿಗೆದಾರ ಕೊನೆಯ ಕ್ಷಣದಲ್ಲಿ ಸ್ವಿಚ್ ಆಫ್​ ಆಗಿರುವ ಕಾರಣದಿಂದ Rank ಪಡೆದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ.
7.90 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 119 ಚಿನ್ನದ ಮೇಲೈ ಇರುವ ಬೆಳ್ಳಿ ಪದಕ ತಯಾರಿಕೆಯ ಗುತ್ತಿಗೆಯನ್ನು ಮಧ್ಯಪ್ರದೇಶದ ಇಂದೂರ್​ ನಗರದ ಅನಾಮಿಕ ವ್ಯಕ್ತಿಯೊಬ್ಬ ಮೇ.21ರಂದು ಪಡೆದಿದ್ದು ಘಟಿಕೋತ್ಸವ ನಡೆದ ಜೂ.3ರಂದು ಮಧ್ಯಾಹ್ನವಾದರೂ ಪದಕಗಳು ವಿವಿ ತಲುಪಲೇ ಇಲ್ಲ.
ವಿವಿಧ ದಾನಿಗಳು ನೀಡಿರುವ ಠೇವಣಿ ದತ್ತಿ ಹಣದ ಬಡ್ಡಿಯಲ್ಲಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡುವುದು ವಿವಿ ಸಂಪ್ರದಾಯವಾಗಿದ್ದು ಆಡಳಿತ ಮಂಡಳಿ ಬೇಜವಬ್ಧಾರಿತನದಿಂದ ವಿದ್ಯಾರ್ಥಿಗಳು ಚೆಕ್​ ಪಡೆದು ಪದವಿ ಸ್ವೀಕರಿಸುವಂತಾಗಿದೆ. 
ವಿವಿಯ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಎಂ.ಆಶಾರಾಣಿ ಕನ್ನಡ ಎಂಎ ಪದವಿಯಲ್ಲಿ ಅತಿಹೆಚ್ಚು ಅಂಕಗಳಿಸಿ ಐದು ಚಿನ್ನದ ಪದಕ, ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಶ್ರಾವ್ಯ ಎನ್​.ಬದರಿ  ಬಿ.ಕಾಂ.,ನಲ್ಲಿ 3 ಚಿನ್ನದ ಪದಕ ಪ್ರೊ.ಎಚ್​.ಆರ್​.ಅಪ್ಪಣ್ಣಯ್ಯ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.
ಮಧುಗಿರಿಯ ಶ್ರೀ ಟಿ.ವಿ.ವೆಂಕಟ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಕೆ.ಆರ್​.ಮೋಹನ್​ ಕುಮಾರ್​ ಬಿ.ಎ., (ರಾಜ್ಯಶಾಸ್ತ್ರ), ವಿವಿ ವಾಣಿಜ್ಯಶಾಸ್ತ್ರ ವಿಭಾಗದ ಜೆ.ಸ್ಫೂರ್ತಿ ಎಂ.ಕಾಂ.,ನಲ್ಲಿ 3 ಚಿನ್ನದ ಪದಕ, ವಿವಿಯ ಎಂ.ಎಸ್ಸಿ ಟಾಪರ್​ ಆಗಿ ಹೊರಹೊಮ್ಮಿರುವ ಆರ್​.ವಿನುತಾ ಎಂ.ಎಸ್ಸಿ ಕಂಪ್ಯೂಟರ್​ ಸೈನ್ಸ್​ನಲ್ಲಿ 3 ಚಿನ್ನದ ಪದಕ, ಎಂ.ಎಸ್ಸಿ., ಗಣಿತಶಾಸ್ತ್ರದಲ್ಲಿ ಬಿ.ಸಿ.ಕಾವ್ಯ 3 ಚಿನ್ನದ ಪದಕ ಪಡೆದಿದ್ದಾರೆ.  ಈ ಘಟಿಕೋತ್ಸವದಲ್ಲಿ ಒಟ್ಟು 90 ವಿದ್ಯಾರ್ಥಿಗಳು 117 ಚಿನ್ನದ ಪದಕಗಳನ್ನು ಹಾಗೂ ನಾಲ್ವರು ವಿದ್ಯಾರ್ಥಿಗಳು ನಗದು ಬಹುಮಾನ ಪ್ರದಾನ ಮಾಡಲಾಗುತ್ತಿದೆ.
ವಿವಿಯ ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು  Rank ​, ಎಂಎಸ್ಸಿ ವಿದ್ಯುನ್ಮಾನ ಮಾಧ್ಯಮ 2 ​, ಬಿಎ, ಬಿಎಸ್​ಡಬ್ಲೂ, ಬಿಎಸ್​ಸಿ, ಬಿಕಾಂ, ಬಿಬಿಎಂ, ಬಿ.ಇಡಿ(ಪದವಿ)ಗಳಿಗೆ ತಲಾ ಹತ್ತು  ಹಾಗೂ ಬಿಎಸ್ಸಿ ್ಯಾಶನ್​ ಆ್ಯಂಡ್​ ಅಪಾರೆಲ್​ ಡಿಸೈನಿಂಗ್​ 1 ರ್ಯಾಂಕ್​, ಬಿ.ವೋಕ್​ 3  Rank  ಘೋಷಣೆ ಮಾಡಲಾಗಿದೆ.