- ಕಾರು ಹಿಂದಿರುಗಿಸಲು ಹಣಕ್ಕೆ ಒತ್ತಾಯ
- 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್ ಅಧಿಕಾರಿ
- ತಡರಾತ್ರಿ ಎಸ್ಐ ವಶಕ್ಕೆ
ತುಮಕೂರು: ಕಾರನ್ನು ಮಾಲೀಕರಿಗೆ ಹಿಂದಿರುಗಿಸಲು 40 ಸಾವಿರ ರೂಪಾಯಿ ಲಂಚ ಪಡೆಯತ್ತಿದ್ದಾಗ ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಎಸ್.ಎಸ್.ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 7ನೇ ಅಪರ ಜಿಲಾ ್ಲ ಮತ್ತು ಸತ್ರ ನ್ಯಾಯಾಲಯವು ಆರೋಪಿ ಚೇತನ್ ಕುಮಾರ್ರನ್ನು ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ಠಾಣೆ ವಶದಲ್ಲಿದ್ದ ಕಾರನ್ನು ನೀಡಲು ಠಾಣಾಧಿಕಾರಿ ಚೇತನ್ ಕುಮಾರ್ ಬೆಂಗಳೂರು ಮೂಲದ ಎಸ್,ಕೆ.ನಾಗೇಶ್ ಎಂಬುವರ ಬಳಿ 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಇಟ್ಟಿದ್ದರು. ಶುಕ್ರವಾರ ತಡರಾತ್ರಿ ಕ್ಯಾತಸಂದ್ರ ಜಾಸ್ ಟೋಲ್ ಬಳಿಯ "ನಮಸ್ತೆ ತುಮಕೂರು' ಹೋಟೆಲ್ ಕ್ಯಾಷಿಯರ್ ಮೂಲಕ ಹಣಪಡೆದಿದ್ದು ಆತನನ್ನು ಲಂಚದ ಸಮೇತ ಬಂಧಿಸಿದ ಲೋಕಾ ಪೊಲೀಸರು ಆತನ ಹೇಳಿಕೆ ಆಧರಿಸಿ ತಡರಾತ್ರಿ 2 ಗಂಟೆಗೆ ಸಬ್ಇನ್ಸ್ಪೆಕ್ಟರ್ರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಹಿನ್ನೆಲೆ: ಜ.17ರಂದು ವಾರಾಂತ್ಯದಲ್ಲಿ ಬೆಂಗಳೂರಿನಿಂದ ಸ್ನೇಹಿತರೊಂದಿಗೆ ತುಮಕೂರು ಕಡೆಗೆ ಕಾರಿನಲ್ಲಿ ಬಂದಿದ್ದ ನಾಗೇಶ್ ಕ್ಯಾತಸಂದ್ರದ ಕೆಸರಮಡು ದರ್ಗಾ ಸರ್ಕಲ್ನಲ್ಲಿ ಚಹಾ ಸೇವಿಸುತ್ತಿದ್ದ ವೇಳೆ ಚೇತನ್ ಕುಮಾರ್ ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಟೋ ಮಾಡಿಕೊಂಡು ತುಮಕೂರು ಗ್ರಾಮಾಂತರ ಠಾಣೆ ಆವರಣದಲ್ಲಿ ತಂದು ನಿಲ್ಲಿಸಿಕೊಂಡಿದ್ದರು. ಕಾರನ್ನು ಬಿಡುವಂತೆ ಕೇಳಿದಾಗ ಗಾಂಜಾ ಸೇವಿಸಿದ್ದೀರೆಂದು ಪ್ರಕರಣ ದಾಖಲಿಸುವುದಾಗಿ ಬೆದರಿಸಿ 5 ಲಕ್ಷ ರೂ,, ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕೊನೆಗೆ ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲವೆಂದು ನಾಗೇಶ್ ಮನವಿ ಮಾಡಿಕೊಂಡ ನಂತರ ಗುರುವಾರ (ಜ.29)ದಂದು 40 ಸಾವಿರ ಕೊಟ್ಟು ಕಾರು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು. ನಂತರ ಜ.30 ರಂದು ನಾಗೇಶ್ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಅಧೀಕ್ಷಕ ಎ.ವಿ.ಲಕ್ಷಿ$್ಮನಾರಾಯಣ್ ಅವರಿಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ -1988 (ತಿದ್ದುಪಡಿ-2018)ರಂತೆ ದೂರು ದಾಖಲಿಸಿಕೊಳ್ಳಲಾಗಿತ್ತು.
ಶುಕ್ರವಾರ ಸಂಜೆಯೇ ಲೋಕಾ ಪೊಲೀಸರು ಖೆಡ್ಡಾ ತೋಡಿದ್ದು ತಡರಾತ್ರಿ ಹೊತ್ತಿಗೆ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಚೇತನ್ ಕುಮಾರ್ರನ್ನು ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲೋಕಾ ಡಿವೈಎಸ್ಪಿಗಳಾದ ಎಂ.ಮಂಜುನಾಥ್, ಡಾ.ಸಂತೋಷ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ಕೆ.ಸುರೇಶ್, ಬಿ.ಮೊಹಮ್ಮದ್ ಸಲೀಂ, ಟಿ.ರಾಜು ಹಾಗೂ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದರು.
ಕೆಸರಮಡುವಿನ ದರ್ಗಾ ಸರ್ಕಲ್ ಬಳಿ ಜ.17 ರಂದು ಕಾರು ನಿಲ್ಲಿಸಿ ಸ್ನೇಹಿತರ ಜತೆ ಟೀ ಕುಡಿಯುತ್ತಿದ್ದ ಬೆಂಗಳೂರು ಮೂಲದ ಎಸ್.ಕೆ.ನಾಗೇಶ್ ಅವರ ಕಾರನ್ನು ಟೋ ಮಾಡಿಕೊಂಡು ತುಮಕೂರು ಗ್ರಾಮಾಂತರ ಠಾಣೆ ಆವರಣದಲ್ಲಿ ನಿಲ್ಲಿಸಿಕೊಂಡಿದ್ದ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ "ಗಾಂಜಾ ಹೊಡೆದಿದ್ದೀರೆಂದು ಕೇಸ್ ಬುಕ್ ಮಾಡುತ್ತೇನೆ', ಕಾರನ್ನು ಕೋರ್ಟ್ನಲ್ಲಿ ಬಿಡಿಸಿಕೊಳ್ಳಿ, ಇಲ್ಲವಾದಲ್ಲಿ 5- ಲಕ್ಷ ರೂ., ಹಣ ಕೊಟ್ಟು ಕಾರು ತೆಗೆದುಕೊಂಡು ಹೋಗುವಂತೆ ಚೇತನ್ ಕುಮಾರ್ ಲಂಚಕ್ಕೆ ಒತಾ ್ತಯ ಮಾಡಿರುತ್ತಾರೆ.
ಶುಕ್ರವಾರ ರಾತ್ರಿ 10.10ಕ್ಕೆ ಕಾರ್ಯಾಚರಣೆ ಆರಂಭಿಸಿದ ಲೋಕಾ ಪೊಲೀಸರು, ಕ್ಯಾತಸಂದ್ರದ ಜಾಸ್ಟೋಲ್ ಬಳಿಯ "ನಮಸ್ತೆ ತುಮಕೂರು' ಹೋಟೆಲ್ ಕ್ಯಾಷಿಯರ್ ಸ್ದರ್ ಅಲೀಖಾನ್ ಬಳಿ ಪಿಎಸೈ ಚೇತನ್ ಕುಮಾರ್ ಸೂಚನೆಯಂತೆ ದೂರುದಾರ ನಾಗೇಶ್ 40 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಎಂ.ಮಂಜುನಾಥ್ ನೇತೃತ್ವದ ತಂಡವು ಹಣದ ಸಮೇತ ಕ್ಯಾಷಿಯರ್ ಬಂಧಿಸಿ, ನಂತರ ಆತ ನೀಡಿದ ಹೇಳಿಕೆ ಆಧರಿಸಿ ತಡರಾತ್ರಿ 2ಗಂಟೆಗೆ ಚೇತನ್ಕುಮಾರ್ರನ್ನು ವಶಕ್ಕೆ ಪಡೆದಿದೆ. ಇಡೀ ರಾತ್ರಿ ಸಿನಿಮೀಯ ರೀತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.