ತುಮಕೂರು ಓಪನ್ ಸಿಂಗಲ್ಸ್ ಜಸ್ಟಿನಾ.
- ಐಟಿಎಫ್ ಡಬ್ಲೂ 35 ಚಾಂಪಿಯನ್ ಶಿಪ್
- ವೈದೇಹಿ, ಝೀಲ್ ದೇಸಾಯಿ ಗೆಲುವಿನ ಓಟ
- ಡಬಲ್ಸ್ನಲ್ಲಿ ಪ್ರಶಸ್ತಿ ಸುತ್ತಿಗೆ ವೈದೇಹಿ-ಜುಝನ್ನಾ
ತುಮಕೂರು: ಅಗ್ರಶ್ರೇಯಾಂಕಿತೆ ಲಿಥುವೇನಿಯಾದ ಜಸ್ಟಿನಾ ಮಿಕುಲ್ಸ್ಕೆ$ಟ್ ಹಾಗೂ ಎರಡನೇ ಶ್ರೇಯಾಂಕಿತೆ ಪೋಲೆಂಡ್ನ ಜುಝನ್ನಾ ಪಾವ್ಲಿಕೊವಾಸ್ಕೊ ಐಟಿಎಫ್ ವಿಶ್ವ ಮಹಿಳಾ ಚಾಂಪಿಯನ್ಸ್ (ಡಬ್ಲೂ 35) ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಭಾರತದ ವೈದೇಹಿ ಚೌಧರಿ ಹಾಗೂ ಝೀಲ್ ದೇಸಾಯಿ ಸಹ ಸೆಮಿಸ್ಗೆ ಲಗ್ಗೆಯಿಟ್ಟರು.
ನಗರದ ವಿವಿ ಆವರಣದ ಜಿಲ್ಲಾ ಟೆನಿಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಪ್ರಧಾನಸುತ್ತಿನ ಸಿಂಗಲ್ಸ್ ಕ್ವಾರ್ಟರ್ಫೈನಲ್ ನಲ್ಲಿ ಅಗ್ರಶ್ರೇಯಾಂಕಿತೆ ಲಿಥುವೇನಿಯಾದ ಜಸ್ಟಿನಾ ಮಿಕುಲ್ಸ್ಕೆ$ಟ್ 5-7, 6-0, 6-2 ಸೆಟ್ಗಳಿಂದ ರಷ್ಯಾದ ಕ್ಸೆನಿಯಾ ಲಸ್ಕೊಟೋವಾ ವಿರುದ್ಧ ಜಯಗಳಿಸಿ ಸೆಮಿಫೈನಲ್ ತಲುಪಿದರು. ಜಸ್ಟಿನಾ 5-7 ರಿಂದ ಮೊದಲ ಸೆಟ್ ಬಿಟ್ಟುಕೊಟ್ಟರಾದರು ನಂತರ ಪ್ರಚಂಡವಾಗಿ ಪುಟಿದೆದ್ದರು. 6-0, 6-2 ಸೆಟ್ಗಳಿಂದ ಕ್ಸೆನಿಯಾ ಮೇಲೆ ಸವಾರಿ ಮಾಡಿ ಪಂದ್ಯ ಗೆದ್ದುಕೊಂಡರು.
ಎರಡನೇ ಶ್ರೇಯಾಂಕಿತೆ ಪೋಲೆಂಡ್ನ ಜುಝನ್ನಾ ಪಾವ್ಲಿಕೊವಾಸ್ಕೊ 1-6, 7-5, 3-0 (ನಿವೃತ್ತಿ) ಸೆಟ್ಗಳಿಂದ ಎಲಿನಾ ನೆಪ್ಲಿ ವಿರುದ್ಧ ಜಯಗಳಿಸಿ ಉಪಾಂತ್ಯ ತಲುಪಿದರು. 3ನೇ ಹಾಗೂ ನಿರ್ಣಾಯಕ ಸೆಟ್ನಲ್ಲಿ 3-0 ಯಿಂದ ಹಿನ್ನೆಡೆ ಅನುಭವಿಸಿದ್ದ ಎಲಿನಾಗೆ ಭುಜನೋವು ಕಾಣಿಸಿಕೊಂಡ ಕಾರಣ ಗಾಯಗೊಂಡು ನಿವೃತ್ತರಾದರು. ಜುಝುನ್ನಾ ಸೆಮಿಸ್ ಹಾದಿ ಸುಗಮವಾಯಿತು.
ತುಮಕೂರು ಓಪನ್ ಶನಿವಾರ ರೋಚಕ ಪಂದ್ಯಗಳಿಗೆ ಸಾಯಾಗಲಿದೆ. ಭಾರತದ ಪ್ರಶಸ್ತಿ ಭರವಸೆ ವೈದೇಹಿ ಚೌಧರಿ ಸಿಂಗಲ್ಸ್ ಸೆಮಿಫೈನಲ್ ನಲ್ಲಿ ಅಗ್ರಶ್ರೇಯಾಂಕಿತೆ ಜಸ್ಟಿನಾರನ್ನು ಮುಖಾಮುಖಿಯಾದರೆ, ಮತ್ತೊಂದು ಸೆಮಿಸ್ನಲ್ಲಿ ಭಾರತದ ಝೀಲ್ ದೇಸಾಯಿ-ಜುಝನ್ನಾ ಪಾವ್ಲಿಕೊವಾಸ್ಕೊ ಎದುರುಗೊಳ್ಳಲಿದ್ದಾರೆ.
ಡಬಲ್ಸ್ನಲ್ಲಿ ಪ್ರಶಸ್ತಿ ಸುತ್ತಿಗೆ ವೈದೇಹಿ-ಜುಝಾನ್ನಾ
ಮಧ್ಯಾಹ್ನ ನಡೆದ ಡಬಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ವೈದೇಹಿ ಚೌಧರಿ ಮತ್ತು ಪೋಲೆಂಡ್ನ ಜುಝಾನ್ನಾ ಪಾವ್ಲಿಕೊವಾಸ್ಕೊ ಜೋಡಿ 6-1, 6-2 ರಲ್ಲಿ ಭಾರತದ ಆಕಾಂಕ್ಷ ದಿಲೀಪ್ ನಿಟ್ಟೂರೆ ಮತ್ತು ಜಪಾನ್ನ ಮಿಚಿಕಾ ಒಜೆಕಿ ವಿರುದ್ಧ ಸುಲಭ ಜಯಗಳಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.
ರಷ್ಯಾ ಜೋಡಿ ಕ್ಸೆನಿಯಾ ಲಸ್ಕೊಟೋವಾ ಮತ್ತು ಎಲಿನಾ ನೆಪ್ಲಿ 6-1, 6-2 ರಿಂದ
ಭಾರತದ ಶ್ರವ್ಯಾ ಶಿವಾನಿ ಚಿಲಕಲಪುಡಿ ಮತ್ತು ಝೀಲ್ ದೇಸಾಯಿ ಜೋಡಿ ಫೈನಲ್ ಪ್ರವೇಶಿಸಿತು. ವೈದೇಹಿ-ಜುಝನ್ನಾ ಹಾಗೂ ಕ್ಸೆನಿಯಾ-ಎಲಿನಾ ಡಬಲ್ಸ್ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.