ತುಮಕೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ನಿಯೋಜನೆಗೊಂಡಿರುವ ಬಿ.ಶುಭ ಅವರಿಗೆ ಪ್ರಭಾರ ಆಯುಕ್ತ ಸಿ.ಯೋಗನಂದ ಹೂ ಗುಚ್ಛ ನೀಡಿ ಸ್ವಾಗತಿಸಿ ಅಧಿಕಾರಿ ಹಸ್ತಾಂತರಿಸಿದರು. 
ತುಮಕೂರು

ಪಾಲಿಕೆ ನೂತನ ಆಯುಕ್ತೆ ಶುಭ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರ ಹಸ್ತಾಂತರಿಸಿದ ಪ್ರಭಾರ ಆಯುಕ್ತ
  • ಕೆಎಂಎಎಸ್​ ಆಯ್ಕೆ ಶ್ರೇಣಿ ಅಧಿಕಾರಿ
  • ಸ್ಥಳ ನಿರೀಕ್ಷೆಯಲ್ಲಿದ್ದ ಶುಭ
ತುಮಕೂರು: ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಬಿ.ಶುಭ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಬಿ.ವಿ.ಅಶ್ವಿಜ ಪ್ರಸೂತಿ ರಜೆ ಮೇಲೆ ತೆರಳಿರುವುದರಿಂದ ಪ್ರಸ್ತುತ ಖಾಲಿ ಇರುವ ಆಯುಕ್ತರ ಹುದ್ದೆಗೆ ನಗರಾಭಿವೃದ್ಧಿ ಇಲಾಖೆಯಲ್ಲಿ ಸ್ಥಳ ನಿರೀಕ್ಷೆಯಲ್ಲಿದ್ದ ಕೆಎಂಎಎಸ್​ ಪೌರಾಯುಕ್ತ ಶ್ರೇಣಿಯ ಬಿ.ಶುಭರನ್ನು ನಿಯುಕ್ತಿಗೊಳಿಸಿ ಸರ್ಕಾರ ಶುಕ್ರವಾರ ಆದೇಶಿಸಿತ್ತು. ಅದರಂತೆ ಬಿ.ಶುಭ ಪಾಲಿಕೆ ಆಯುಕ್ತರಾಗಿ ಅಧಿಕಾರವಹಿಸಿಕೊಂಡರು.
ಪ್ರಭಾರ ಆಯುಕ್ತ ಸಿ.ಯೋಗಾನಂದ ನೂತನ ಆಯುಕ್ತೆ ಶುಭರನ್ನು ಸ್ವಾಗತಿಸಿ ಅಧಿಕಾರವಹಿಸಿಕೊಟ್ಟರು.
ಇ-ಖಾತೆ ಸವಾಲು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಇ&ಖಾತೆ, ತ್ಯಾಜ್ಯ ವಿಲೇವಾರಿ ನಿರ್ವಹಣೆ ಜತೆಗೆ ದಲ್ಲಾಳಿಗಳನ್ನು ಕಟ್ಟಿಹಾಕುವ ಬಹುದೊಡ್ಡ ಸವಾಲಿದೆ. ಪಾಲಿಕೆ ಭೌಗೋಳಿಕ ವಿಸ್ತರಣೆಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಆಸಕ್ತಿ ತೋರಿರುವುದು ಸಹ ನೂತನ ಆಯುಕ್ತೆ ಬಿ.ಶುಭಗೆ ಗುರುತರ ಜವಾಬ್ದಾರಿ ಎನಿಸಿದೆ.
ಧೂಳು ಮುಕ್ತ ರಸ್ತೆಯಾಗಿಸುವುದು, ನಾಗರಿಕರ ಅರೋಗ್ಯ ಕಾಪಾಡುವುದು ನನ್ನ ಮೊದಲ ಆದ್ಯತೆ. ಬೆಳಗಾವಿ ಪಾಲಿಕೆಯಲ್ಲಿ ಸಹ ಕರ್ತವ್ಯ ನಿರ್ವಹಿಸಿದ್ದು ಆಡಳಿತದ ಅನುಭವ ಇದೆ ಎಂದು ಪಾಲಿಕೆ ಆಯುಕ್ತೆ ಶುಭ ಸುದ್ದಿಗಾರರಿಗೆ ತಿಳಿಸಿದರು.
ೋಟೋ ಕ್ಯಾಪ್ಷನ್​: