ತುಮಕೂರಿನ ಬನಶಂಕರಿ, ಶಾಂತಿನಗರ ಸೇರಿದಂತೆ ವಿವಿಧ ಬಡಾವಣೆಗಳ ಹಿಂದೂ ಸಮಾಜೋತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಶೋಭಾಯಾತ್ರೆಗೆ ಕಾರದ ವೀರಬಸವ ಸ್ವಾಮೀಜಿ ಚಾಲನೆ ನೀಡಿದರು. ಜಿ.ಬಿ.ಜ್ಯೋತಿಗಣೇಶ್​, ಕೋರಿ ಮಂಜುನಾಥ್​, ಗುರುಸಿದ್ಧಪ್ಪ, ಕೆಂಬಾಳ್​ ರವೀಂದ್ರ, ರಂಗನಾಥ್​ ಲಾಡ್​, ಮನೋಹರ ಮಠದ್​, ಟಿ.ಸಿ.ಶಿವಕುಮಾರ್​, ಖಜಾಂಚಿ ಕೆ.ವೇದಮೂರ್ತಿ, ಮುಖಂಡರಾದ ಟಿ.ಎಚ್​.ಹನುಮಂತರಾಜು, ಬೆಳ್ಳಿ ಲೋಕೇಶ್​, ಧರಣೇಂದ್ರಕುಮಾರ್​, ಕೇಬಲ್​ ಮಂಜು ಮತ್ತಿತರರು ಇದ್ದರು.  
ತುಮಕೂರು

ಭಾರತೀಯ ಸಂಸ್ಕೃತಿ ಮಾರುಹೋಗಿವೆ ಅನೇಕ ರಾಷ್ಟ್ರಗಳು

ಪ್ರಮುಖ ಮುಖ್ಯಾಂಶಗಳು

  • ಹಿಂದೂ ಸಮಾಜೋತ್ಸವ
  • ಕುಣಿಗಲ್​ ರಸ್ತೆಯಲ್ಲಿ ಶೋಭಾಯಾತ್ರೆ
  • ಹಿಂದೂ ಸಂಸತಿ ಪ್ರಪಂಚಕ್ಕೇ ಮಾದರಿ
ತುಮಕೂರು: ಹಿಂದೂ ಧರ್ಮದ ಶ್ರೇಷ್ಠ ಆಚಾರ ವಿಚಾರ,ಸಂಸ್ಕೃತಿ, ಸಂಸ್ಕಾರದ ಶ್ರೇಷ್ಠತೆ ಜಗತ್ತಿಗೆ ಮಾದರಿ ಎನಿಸಿದೆ. ಅನೇಕ ರಾಷ್ಟ್ರಗಳು ಭಾರತೀಯ ಸಂಸ್ಕೃತಿಗೆ ಮಾರುಹೋಗಿವೆ ಎಂದು ಕಾರದಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ ಹೇಳಿದರು.
ನಗರದ ಬನಶಂಕರಿ, ಶಾಂತಿನಗರ, ಅಮರಜ್ಯೋತಿನಗರ, ಸದಾಶಿವನಗರ, ವೀರಸಾಗರ, ಕುರಿಪಾಳ್ಯ, ಸರಸ್ವತಿಪುರಂ, ಮರಳೂರು, ಮರಳೂರು ದಿಣ್ಣೆ ವಸತಿಗಳ ಹಿಂದೂ ಸಮಾಜೋತ್ಸವ ಸಮಿತಿಯಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕುಣಿಗಲ್​ ರಸ್ತೆಯಲ್ಲಿ ವೈಭವದ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸ್ವಾಮೀಜಿ, ಭಾರತದ ಮೇಲೆ ಎಷ್ಟೇ ದಾಳಿಗಳಾದರೂ ನಮ್ಮ ಸಂಸ್ಕಾರ, ಸಂಸ್ಕೃತಿ, ಸಂಪತ್ತಿನ ಮೇಲೆ ದೌರ್ಜನ್ಯ ನಡೆದರೂ ಯಾವುದೇ ಪರಿಣಾಮವಾಗದೆ ಯಾವುದಕ್ಕೂ ಧಕ್ಕೆಯಾಗದ ರೀತಿಯಲ್ಲಿ ದೇಶ ಮುನ್ನಡೆಯುತ್ತಿದೆ ಎಂದರು.
ಶಾಂತಿ, ಸೌಹಾರ್ದತೆ, ಸಹಬಾಳ್ವೆ ಬಯಸುವ ಹಿಂದೂ ಸಂಸ್ಕೃತಿ ಪ್ರಪಂಚಕ್ಕೇ ಮಾದರಿ. ಮಣ್ಣನ್ನು, ನೀರನ್ನು ಗಿಡಮರವನ್ನು, ಮನುಷ್ಯನನ್ನು ದೇವರೆಂದು ಪೂಜಿಸುವ ಸಂಸ್ಕಾರದ ದೇಶ ನಮ್ಮದು. ಹಿಂದೂ ಸಮಾಜೋತ್ಸವ ಆಚರಣೆಯು ಸಮಾಜದಲ್ಲಿ ಹಿಂದುತ್ವ ಭಾವನೆಯನ್ನು ಮತ್ತಷ್ಟು ಬಲಪಡಿಸುವುದು, ಸಮಾಜದ ಬಗ್ಗೆ ಒಗಟ್ಟು ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಅದ್ದೂರಿ ಶೋಭಾಯಾತ್ರೆ: ಅದ್ದೂರಿ ಶೋಭಾಯಾತ್ರೆ ಸಾಗಿದ ರಸ್ತೆಯುದ್ದಕ್ಕು ಕೇಸರಿ ಧ್ವಜಗಳು ಹಾರಾಡುತ್ತಿದ್ದವು. ಶೋಭಾಯಾತ್ರೆಯೊಂದಿಗೆ ಈ ಪ್ರದೇಶದ ವಿವಿಧ ದೇವಸ್ಥಾನಗಳ ಮೆರವಣಿಗೆ ದೇವರುಗಳ ಉತ್ಸವ ನಡೆಸಲಾಯಿತು. ಆಂಜನೇಯಸ್ವಾಮಿ, ಬಸವಣ್ಣ, ವಿದ್ಯಾಗಣಪತಿ, ಲಕ್ಷ್ಮಿನರಸಿಂಹಸ್ವಾಮಿ, ವೆಂಕಟೇಶ್ವರಸ್ವಾಮಿ, ಜಾಡ್ರಾಳಮ್ಮ, ಮುತ್ತು ಮಾರಿಯಮ್ಮ, ಮಾರಮ್ಮ, ಶಿರಡಿ ಸಾಯಿಬಾಬಾ ದೇವರುಗಳನ್ನು ವೈಭವದ ಶೋಭಾಯಾತ್ರೆಗೆ ಕರೆತರಲಾಗಿತ್ತು. ಭಾರತಮಾತೆ ಭಾವಚಿತ್ರ, ಮಂಗಳವಾದ್ಯ, ಪೂರ್ಣಕುಂಭ, ವಿವಿಧ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನ ಶೋಭಾಯಾತ್ರೆ ಮೆರಗು ಹೆಚ್ಚಿಸಿದವು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​, ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್​, ಶಿರಡಿ ಸಾಯಿಬಾಬಾ ದೇವಸ್ಥಾನ ಸಮಿತಿ ಕಾರ್ಯದರ್ಶಿ ಗುರುಸಿದ್ಧಪ್ಪ, ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಕೆಂಬಾಳ್​ ರವೀಂದ್ರ, ಉದ್ಯಮಿ ರಂಗನಾಥ್​ ಲಾಡ್​, ದೇವಸ್ಥಾನಗಳ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ್​, ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಸಿ.ಶಿವಕುಮಾರ್​, ಖಜಾಂಚಿ ಕೆ.ವೇದಮೂರ್ತಿ, ಮುಖಂಡರಾದ ಟಿ.ಎಚ್​.ಹನುಮಂತರಾಜು, ಬೆಳ್ಳಿ ಲೋಕೇಶ್​, ಧರಣೇಂದ್ರಕುಮಾರ್​, ಕೃಷ್ಣಮೂರ್ತಿ, ಬಂಬೂ ಮೋಹನ್​, ಕುಮಟೇಶ್​, ಕಡ್ಡಿ ಕುಮಾರ್​, ನಿಸರ್ಗ ರಮೇಶ್​, ಪ್ರೀತಮ್​, ಆಟೋ ಯಡಿಯೂರಪ್ಪ, ಕುಮಾರ್​, ಹರೀಶ್​, ಗಂಗಾಧರ್​, ಶಂಕರ್​, ಜ್ಯೋತಿಪ್ರಕಾಶ್​, ಬನಶಂಕರಿಬಾಬು, ವೆಂಕಟೇಶಾಚಾರ್​, ಕೇಬಲ್​ ಮಂಜು ಸೇರಿದಂತೆ ಈ ಭಾಗದ ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.