- ಎಂ.ಸಿ.ಶಿವರುದ್ರಪ್ಪಗೆ ವಾರ್ಷಿಕ ಗೌರವ
- ವೈ.ಎನ್.ಶಿವಣ್ಣ, ವಿ.ಆರ್.ಗಂಗಾಧರರೆಡ್ಡಿಗೆ ದತ್ತಿ ಪುರಸ್ಕಾರ
- ತಲಾ 25 ಸಾವಿರ ನಗದು
ಈ ಬಾರಿ ಜಿಲ್ಲೆಯ ಮೂವರು ಕಲಾವಿದರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ. ವಾರ್ಷಿಕ ಪ್ರಶಸ್ತಿಗೆ ಹಿರಿಯ ರಂಗಭೂಮಿ ಕಲಾವಿದ ಎಂ.ಸಿ.ಶಿವರುದ್ರಪ್ಪ ಭಾಜನರಾಗಿದ್ದರೆ, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಹಾಗೂ ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರಕ್ಕೆ ವೈ.ಎನ್.ಶಿವಣ್ಣ ವಿ.ಆರ್.ಗಂಗಾಧರರೆಡ್ಡಿ ಆಯ್ಕೆಯಾಗಿದ್ದಾರೆ.
ಕೊರಟಗೆರೆ ತಾಲೂಕು ಮಲ್ಲೇಶಪುರದ 74 ವರ್ಷದ ಎಂ.ಸಿ.ಶಿವರುದ್ರಪ್ಪ ರಂಗಭೂಮಿಗೆ ತಮ್ಮನ್ನೇ ಅರ್ಪಿಸಿಕೊಂಡಿದ್ದು ಪೌರಾಣಿಕ ನಾಟಕಗಳಲ್ಲಿ ಉತ್ತಮ ಅಭಿನಯ ಮೂಲಕ ಮನೆಮಾತಾಗಿದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿದ್ದರು ರಂಗಭೂಮಿ ಸೆಳೆತ ಅವರ ಪ್ರವೃತ್ತಿ ಕಲಾವಿದನನ್ನಾಗಿಸಿತು. ರಾಜ್ಯ, ರಾಷ್ಟ್ರಮಟ್ಟದಲ್ಲಿ ರಂಗಗೀತೆಗಳನ್ನು ಹಾಡಿ ಚಿರಪರಿಚಿತರೆನಿಸಿದ್ದಾರೆ. ಕಲಾವಿದರಾಗಿ 55 ವರ್ಷ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದ ಶಿವರುದ್ರಪ್ಪ ಆಕಾಶವಾಣಿ ಕೃಷಿರಂಗ ವಿಭಾಗದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ, ವಿವಿಧ ಸಂ&ಸಂಸ್ಥೆಗಳ ಹತ್ತಾರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಚಿಂದೋಡಿ ಲೀಲಾ ದತ್ತಿ: ಜಿಲ್ಲಾ ರಂಗಭೂಮಿ ಕಲಾವಿದರ ಸಂದ ಅಧ್ಯಕ್ಷರು ಆದ ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ ವೈ.ಎನ್.ಶಿವಣ್ಣ ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪ್ರಶಸ್ತಿಗೆ ಪುರಸ್ಕಾರಗೊಂಡಿದ್ದಾರೆ. 72 ವರ್ಷದ ಶಿವಣ್ಣ ಮೂಲತ@ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಯಲದಾಹಳ್ಳಿಯವರು. 1980ರಲ್ಲಿ ರಂಗಭೂಮಿಯ ಸೆಳೆತದಿಂದ ಶಿವಣ್ಣರನ್ನು ಕಲಾಸೇವೆಯೆಡೆಗೆ ಆಕರ್ಷಿಸಿತು. ಅಭಿನಯವನ್ನು ಪ್ರವೃತ್ತಿಯಾಗಿಸಿಕೊಂಡ ಶಿವಣ್ಣ ಪೌರಾಣಿಕ ನಾಟಕಗಳಲ್ಲಿ ಶ್ರೀರಾಮ, ಆಂಜನೇಯ, ಅರ್ಜುನ, ಕರ್ಣ, ವಿದುರ,ದಶರಥ ಮುಂದಾತ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಜಿಲ್ಲೆಯಲ್ಲಿ ತಮ್ಮ ಛಾಪು ಮೂಡಿಸಿದರು. ರಂಗಭೂಮಿ ಕಲಾವಿದರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಜಿಲ್ಲಾಮಟ್ಟದಲ್ಲಿ ಸಂಟನೆ ಕಟ್ಟಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಬಿರುದುಗಳಿಗೆ ಶಿವಣ್ಣ ಭಾಜನರಾಗಿದ್ದಾರೆ.
ಕುಣಿಗಲ್ನ ವಿ.ಆರ್.ಗಂಗಾಧರರೆಡ್ಡಿ ರಂಗಭೂಮಿ ಕ್ಷೇತ್ರದಲ್ಲಿನ ಕೊಡುಗೆಗಾಗಿ ಈ ಬಾರಿಯ ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪ್ರಶಸ್ತಿ ಪುರಸ್ಕತರಾಗಿದ್ದು ವಾರ್ಷಿಕ ಹಾಗೂ ದತ್ತಿ ಪ್ರಶಸ್ತಿಗಳು ತಲಾ 25 ಸಾವಿರ ನಗದು ಹಾಗೂ ಪ್ರಶಸ್ತಿಗಳನ್ನು ಹೊಂದಿವೆ.