ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರ ವಿವಿಧ ಮಠಾಧೀಶರು ಹಕ್ಕೋತ್ತಾಯ ಮಂಡನೆ ಸಭೆ ನಡೆಸಿದರು.
- ಪರಂಗೆ ಮುಖ್ಯಮಂತ್ರಿ ಸ್ಥಾನ ನೀಡಲಿ
- ಹೈಕಮಾಂಡ್ ಮೇಲೆ ಒತ್ತಡ
- ದೆಹಲಿಗೆ ಸ್ವಾಮೀಜಿಗಳ ನಿಯೋಗ
ತುಮಕೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಚರ್ಚೆ ಬೆನ್ನಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರ ಜಿಲ್ಲೆಯ 30ಕ್ಕು ಹೆಚ್ಚು ಮಠಾಧೀಶರು ಬೆಂಬಲಕ್ಕೆ ನಿಲ್ಲುವ ಮೂಲಕ "ದಲಿತ ಸಿಂ ಕೂಗಿ'ಗೆ ಧ್ವನಿಗೂಡಿಸಿದರು. ಸಜ್ಜರು, ಸುಶಿತರು ಆಗಿರುವ ಪರಮೇಶ್ವರ್ರನ್ನು ಮುಖ್ಯಮಂತ್ರಿಗಳನ್ನಾಗಿ ನೇಮಿಸುವಂತೆ ಜಿಲ್ಲೆಯ ಎಲ್ಲಾ ಜಾತಿಯ ಮಠಾಧೀಶರು ಹಕ್ಕೋತ್ತಾಯ ಮಂಡನೆ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿದರು.
ನಗರದ ಕೊಲ್ಹಾಪುರದಮ್ಮ ಸಮುದಾಯಭವನದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಡಾ.ಹನುಮಂತನಾಥ ಸ್ವಾಮೀಜಿ, 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ$ವನ್ನು ಮುನ್ನಡೆಸಿದ್ದ ಪರಮೇಶ್ವರ್ ರಾಜ್ಯದ ಉದ್ದಗಲಕ್ಕು ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಕಂಡಿದ್ದರು. ಆದರೆ, ದುರಾದೃಷ್ಟವಶಾತ್ ತಮ್ಮ ಕ್ಷೇತ್ರದಲ್ಲಿ ಸೋಲುಕಂಡಿದ್ದರು.
ಅವತ್ತು ಹೈಕಮಾಂಡ್ ಪರಮೇಶ್ವರ್ಗೆ ಸಿಎಂ ಮಾಡುತ್ತೀವಿ ಅನ್ನುವ ಭರವಸೆ ಕೊಟ್ಟಿತ್ತು. ಆ ಮಾತು ಸತ್ಯವಾಗಬೇಕಾದರೆ ಪರಮೇಶ್ವರ್ರನ್ನು ಸಿಎಂ ಮಾಡಬೇಕು. ಹೈಕಮಾಂಡ್ ತನ್ನ ಮಾತಿಗೆ ಬದ್ಧ ಎಂಬ ನಿಲುವನ್ನು ತೋರಿಸಲು ಸದಾವಕಾಶವಿದು ಎಂಬುದು ನಮ್ಮ ಅಭಿಪ್ರಾಯ ಎಂದರು.
ಡಿ.ಕೆ.ಶಿವಕುಮಾರ್ಗೆ ಬೇರೆ ಕಾರಣಗಳಿಂದ ಸಿಎಂ ಸ್ಥಾನ ಕೈತಪ್ಪಿದ ಪಕ್ಷದಲ್ಲಿ ಅಥವಾ ಹೈಕಮಾಂಡ್ ಕೈಗೊಳ್ಳುವ ತೀರ್ಮಾನ ಒಳ್ಳಯದಾಗಿದ್ದಲ್ಲಿ ಪರಮೇಶ್ವರ್ಗೆ ಸಿಎಂ ಸ್ಥಾನ ಕೊಡಿ ಎಂಬುದು ನಮ್ಮ ಒತ್ತಾಯವಾಗಿದೆ. ಸಿಎಂ ಆಗಿ ಜಿಲ್ಲೆಗೆ ಹಾಗೂ ರಾಜ್ಯ ಕೊಡುಗೆ ನೀಡಬೇಕೆಂಬ ಆಸೆ ಅವರದ್ದಾಗಿದೆ. ಈ ಬಗ್ಗೆ ಹಲವು ಬಾಗಿ ನಮ್ಮ ಬಳಿ ಮನದಾಳದ ಮಾತುಗಳನ್ನಾಡಿದ್ದಾರೆ. ಹೈಕಮಾಂಡ್ ಸಿಎಂ ಅಧಿಕಾರ ಕೊಟ್ಟರೆ ಸಮಗ್ರವಾಗಿ ಅಧಿಕಾರ ನಿಭಾಯಿಸುತ್ತೇನೆ ಎಂಬ ಮಾತುಗಳನ್ನು ನಮ್ಮ ಬಳಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಮನವೊಲಿಸಲು ಜಿಲ್ಲೆಯ ಮಠಾಧಿಪತಿಗಳು ನಿರ್ಧರಿಸಿದ್ದೇವೆ ಎಂದರು.
ದೆಹಲಿಗೆ ಸ್ವಾಮೀಜಿಗಳ ನಿಯೋಗ: ನಮ್ಮ ಜಿಲಾ ್ಲಉಸ್ತುವಾರಿ ಸಚಿವರು ಸಿಎಂ ಆಗಲಿ ಎಂಬ ಸಂಕಲ್ಪ ಮಾಡಿದ್ದೇವೆ. ರಾಜ್ಯ ಕಾಂಗ್ರೆಸ್ ಪಕ್ಷದೊಳಗೆ ನಾಯಕತ್ವ ಬದಲಾವಣೆ ಭಾವನೆ ಕಾಣುತ್ತಿದ್ದೇವೆ. ಹಾಗಾಗಿ, ಸಿಎಂ ಆಗಲಿ ಎಂಬ ಕನಸು ಇಟ್ಟುಕೊಂಡಿರುವ ಪರಮೇಶ್ವರ್ ಪರ ನಾವೆಲ್ಲಾ ಮಠಾಧೀಶರು ದೆಹಲಿಗೆ ಹೋಗಿ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತೇವೆ ಎಂದು ಬೆಳ್ಳಾವಿ ಕಾರದ ಮಠದ ಕಾರದ ಶ್ರೀ ವೀರಬಸವ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮೀಜಿ, ಅರೆಶಂಕರಮಠದ ಶ್ರೀಸಿದ್ದರಾಮಚೈತನ್ಯಸ್ವಾಮೀಜಿ, ವಿಶ್ವಕರ್ಮ ಮಠದ ಶ್ರೀ ನೀಲಕಂಠಸ್ವಾಮೀಜಿ, ಗೋಡೆಕೆರೆಯ ಮೃತ್ಯುಂಜಯಸ್ವಾಮೀಜಿ, ಬಿಂದುಶೇಖರ ಓಡೆಯರ್, ಗೊಲ್ಲಹಳ್ಳಿಯ ಶ್ರೀ ವಿದ್ಯಾವಿಭವ ಸ್ವಾಮೀಜಿ ಸೇರಿದಂತೆ 25ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪಕ್ಷದ ಚೌಕಟ್ಟಿನಲ್ಲಿ ನಿಟ್ಟಿನಲ್ಲಿ ನಾನು ಸಿಎಂ ಎಂದು ಬಹಿರಂಗವಾಗಿ ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಒಬ್ಬ ವಿದ್ಯಾವಂತ ರಾಜಕಾರಣಿಯಾಗಿರುವುದರಿಂದ ಎಲ್ಲೂ ಬಹಿರಂಗವಾಗಿ ಪರಮೇಶ್ವರ್ ತೋರ್ಪಡಿಸಿಕೊಂಡಿಲ್ಲ ಎಂಬುದು ನಮ್ಮ ಭಾವನೆ. ಅವರು ಸಹ ನಾನು ಪಕ್ಷಕ್ಕಾಗಿ ದುಡಿದ್ದೇನೆ. ಸಿಎಂ ರೇಸ್ನಲ್ಲಿ ಇದ್ದೇನೆ ಎಂಬುದನ್ನು ಸಾಕಷ್ಟು ಬಾರಿ ಮಾಧ್ಯಮದ ಮುಂದೆ ಹೇಳಿರುವುದನ್ನು ಗಮನಿಸಿದ್ದೇವೆ. ಬದಲಾವಣೆ ಸಂದರ್ಭದಲ್ಲಿ ಅವರ ಹೆಸರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತೇವೆ.
ಕುಂಚಿಟಿಗ ಮಹಾಸಂಸ್ಥಾನ, ಎಲೆರಾಂಪುರ
8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷ$ವನ್ನು ಸಂಟಿಸಿದ್ದ ಪರಮೇಶ್ವರ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರ ಪಕ್ಷ ನಿಷ್ಠೆಗೆ ಹೈಕಮಾಂಡ್ ಮನ್ನಣೆ ನೀಡಿ, ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಅವರ ಹೆಸರನ್ನು ಪರಿಗಣಿಸಬೇಕು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಅವರು ಸಿಎಂ ಆಗಬೇಕೆಂಬುದು ನಮ್ಮೆಲ್ಲರ ಭಾವನೆ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿರುವ ಅವರನ್ನು ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿಯಾಗಿ ಘೋಷಿಸಬೇಕು.
ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ