ತುಮಕೂರಿನಲ್ಲಿ ನಡೆದ ಜಿಲ್ಲಾ ಪೊಲೀಸ್​ ವಾರ್ಷಿಕ ಕ್ರೀಡಾಕೂಟದಲ್ಲಿ ಪುರಷರ ವಿಭಾಗದಲ್ಲಿ ಜಿಲ್ಲಾ ಸಶಸ ಮೀಸಲು ಪಡೆ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಲಾಭೂರಾಮ್​, ಕೆ.ವಿ.ಅಶೋಕ್​, ಪುರುಷೋತ್ತಮ್​ ಇದ್ದರು.  
ತುಮಕೂರು

ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಡಿಎಆರ್​ ತಂಡ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟ
  • ಗುರುಪ್ರಸಾದ್​ಗೆ ಸವೋರ್ತ್ತಮ ಪ್ರಶಸ್ತಿ
  • ಕೆ.ಜಿ.ಪವಿತ್ರ ವೈಯಕ್ತಿಕ ಚಾಂಪಿಯನ್​
ತುಮಕೂರು: ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ತುಮಕೂರು ಉಪವಿಭಾಗ ತಂಡದ ಗುರುಪ್ರಸಾದ್​ ಸವೋರ್ತ್ತಮ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರೆ, ಮಹಿಳಾ ವಿಭಾಗದಲ್ಲಿ ಕುಣಿಗಲ್​ ಠಾಣೆಯ ಪವಿತ್ರ ವೈಯಕ್ತಿಕ ಚಾಂಪಿಯನ್​ ಪ್ರಶಸ್ತಿ ಮುಡಿಗೇರಿಸಿಕೊಂಡರು.
ನಗರದ ಜಿಲ್ಲಾ ಸಶಸ ಮೀಸಲು ಪಡೆ ಮೈದಾನದಲ್ಲಿ ನಡೆದ 3 ದಿನಗಳ ಪೊಲೀಸ್​ ಕ್ರೀಡಾಕೂಟಕ್ಕೆ ಬುಧವಾರ ತೆರೆಬಿತ್ತು. ಈ ಬಾರಿಯೂ ಸಮಗ್ರ ತಂಡ ಪ್ರಶಸ್ತಿಯು ಜಿಲ್ಲಾ ಸಶಸ ಮೀಡಲು ಪಡೆ (ಡಿಎಆರ್​) ಪಾಲಾಯಿತು. ಕೇಂದ್ರ ವಲಯದ ಪೊಲೀಸ್​ ಮಹಾನಿರೀಕ್ಷಕ (ಐಜಿಪಿ) ಲಾಭೂರಾಮ್​ ಕ್ರೀಡಾಕೂಟದಲ್ಲಿ ವಿಜೇತರಾದವಾರಿಗೆ ಪ್ರಶಸ್ತಿ ವಿತರಿಸಿದರು.
ಪುರಷರ ವಿಭಾಗದಲ್ಲಿ ತಿಲಕ್​ಪಾರ್ಕ್​ ಠಾಣೆಯ ಗುರುಪ್ರಸಾದ್​ 400 ಮೀ., 800 ಮೀ., ಹಾಗೂ 1500 ಮೀ., ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಹೈ ಜಂಪ್​, ಲಾಂಗ್​ ಜಂಪ್​ ದ್ವೀತಿಯ ಸ್ಥಾನ ಪಡೆದು ಕ್ರೀಡಾಕೂಟದ ಸವೋರ್ತ್ತಮ ಪ್ರಶಸ್ತಿ ಗೆದ್ದುಕೊಂಡರು.
ಮಹಿಳಾ ವಿಭಾಗದಲ್ಲಿ ಕುಣಿಗಲ್​ ಠಾಣೆಯ ಕೆ.ಜಿ.ಪವಿತ್ರ 100 ಮೀ., 200 ಮೀ.,ನಲ್ಲಿ ಬೆಳ್ಳಿ, 400 ಮೀ., ಹಾಗೂ ಲಾಂಗ್​ ಜಂಪ್​ನಲ್ಲಿ ಚಿನ್ನದ ಪದಕ ಗೆದ್ದು ವೈಯಕ್ತಿಕ ಚಾಂಪಿಯನ್​ ಆಗಿ ಹೊರಹೊಮ್ಮಿದರು.
ಎಸ್ಪಿ ಕೆ.ವಿ.ಅಶೋಕ್​, ಎಎಸ್ಪಿ ಪುರುಷೋತ್ತಮ್​, ನಗರ ಡಿವೈಎಸ್ಪಿ ಚಂದ್ರಶೇಖರ್​, ಡಿಎಆರ್​ ಡಿವೈಎಸ್ಪಿ ಪರಮೇಶ್​ ಉಪಸ್ಥಿತರಿದ್ದರು.