ಶುಭಕಲ್ಯಾಣ್ 
ತುಮಕೂರು

ಶುಭಕಲ್ಯಾಣ್​ಗೆ ಅಂಬಾರಿ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • ಶನಿವಾರ ಸಂಜೆ ಪ್ರದಾನ
  • ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಬಳಗ
  • ಡಾ.ಜಿ.ಪರಮೇಶ್ವರ ಅವರಿಂದ ಪ್ರಶಸ್ತಿ ಪ್ರದಾನ
ತುಮಕೂರು: ನಗರದ ಬಡ್ಡಿಹಳ್ಳಿ ಗೋಕುಲ ಬಡಾವಣೆಯ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಬಳಗವು ಜ. 10ರಂದು ಶನಿವಾರ ಸಂಜೆ 6.30ಕ್ಕೆ ಅಯ್ಯಪ್ಪಸ್ವಾಮಿ ಭಜನಾ ಮಹೋತ್ಸವನ್ನು ಆಯೋಜಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಉದ್ಘಾಟಿಸುವರು. ಈ ಬಾರಿ ಜಿಲ್ಲಾ ದಸರಾ ಉತ್ಸವ ಯಶಸ್ವಿಯಾಗಿ ನಡೆಯಲು ಶ್ರಮಿಸಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್​ಗೆ "ಅಂಬಾರಿ' ಪ್ರಶಸ್ತಿ ನೀಡಿ ಗೌರವಿಸುವರು. ಧರ್ಮದರ್ಶಿ ಮಂಜುನಾಥ್​ಗೆ "ಭಕ್ತ ಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಶಾಸಕ ಜಿ.ಬಿ.ಜ್ಯೋತಿಗಣೇಶ್​ , ಪ್ರತಾಪ್​ ಗುರುಸ್ವಾಮಿ, ಬಿ.ವಿ.ವೆಂಕಟೇಶ್​ ಸ್ವಾಮಿ, ಸತೀಶ್​ ಸ್ವಾಮಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸಂಜೆ 6.45ಕ್ಕೆ ಅಯ್ಯಪ್ಪಸ್ವಾಮಿಗೆ ವಿಶೇಷ ಪಂಚಾಮೃತ ಅಭಿಷೇಕ ಹಾಗೂ ಹೂವಿನ ಅಲಂಕಾರ, ಪಡಿಪೂಜೆ, ಮಹಾಮಂಗಳಾರತಿ, ಹರಿವರಾಸನಂ, ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದೆ ಎಂದು ಭಕ್ತ ಬಳಗದ ಗೌರವಾಧ್ಯಕ್ಷ ಟಿ.ಎಲ್​.ಅಶೋಕ್​ ಗುರುಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.